Advertisement

ತನಿಷ್ಕ್ 214ನೇ ಹೊಸ ಮಳಿಗೆ ಪ್ರಾರಂಭ

03:03 PM Jun 24, 2017 | Team Udayavani |

ಕಲಬುರಗಿ: ಟಾಟಾ ಉತ್ಪನ್ನಗಳಾದ ಹಿಂದಿನ ಗೋಲ್ಡ್‌ಪ್ಲಸ್‌ ಈದೀಗ ಬದಲಾಗಿ ತನಿಷ್ಕ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಕಾಲಿಟ್ಟಿದೆ. ಇಲ್ಲಿ ಭಾರತದ ಅತ್ಯದ್ಭುತವಾದ ವಿನ್ಯಾಸದ ಆಭರಣಗಳು ಸಿಗುತ್ತವೆ ಎಂದು ಹೆಡ್‌ ಕಸ್ಟಮರ್‌ ಸರ್ವಿಸ್‌ ಮತ್ತು ಲೀನ್‌ ಮಳಿಗೆ ಗ್ರೂಪ್‌ ಮ್ಯಾನೇಜರ್‌ ಅಲಗಪ್ಪನ್‌ ಹೇಳಿದರು.

Advertisement

ಶುಕ್ರವಾರ ನಗರದ ಏಷಿಯನ್‌ ಟವರ್‌ ಮಳಿಗೆಯಲ್ಲಿ ನೂತನವಾಗಿ ಸ್ಥಾಪಿಸಿರುವ ತನಿಷ್ಕ್ ಹೊಸ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ತನಿಷ್ಕ್ ದೇಶದ ಏಕೈಕ ರಾಷ್ಟ್ರಮಟ್ಟದ ಆಭರಣ ಮಳಿಗೆ, ಉತ್ಕೃಷ್ಟ ಕಸೂತಿ, ವಿಭಿನ್ನ ವಿನ್ಯಾಸ ಮತ್ತು ಗುಣಮಟ್ಟದ ಖಚತತೆ ಹೊಂದಿರುವ ಉತ್ಪನ್ನಗಳೊಂದಿಗೆ ಗುರುತಿಸಿಕೊಂಡಿದೆ.

ದೇಶದ ಗ್ರಾಹಕರ ಆದ್ಯತೆಗಳನ್ನು ಮನಗಂಡಿರುವ ಏಕೈಕ ಆಭರಣ ಬ್ರಾಂಡ್‌ ಆಗಿದೆ ಎಂದರು. ತನಿಷ್ಕ್ 18 ಕ್ಯಾರೆಟ್‌ ಚಿನ್ನಾಭರಣ ಸೇವೆ ನೀಡುತ್ತಿದೆ. 5000ಕ್ಕೂ ಹೆಚ್ಚು ಸಾಂಪ್ರದಾಯಿಕ, ಪಾಶ್ಚಾತ್ಯ ಆಧುನಿಕ  ಸಂಗ್ರಹಗಳನ್ನು ಹೊಂದಿದೆ. ನಾವು ಈಗಾಗಲೇ ಗೋಲ್ಡ್‌ ಪ್ಲಸ್‌ ಮಾರುಕಟ್ಟೆಯಲ್ಲಿನ ಗ್ರಾಹಕರ ಆದ್ಯತೆಯನ್ನು ಗಮನಿಸಿದಾಗ ಗಣನೀಯ ಬದಲಾವಣೆಯೂ ಗಮನಕ್ಕೆ ಬಂದಿದೆ.  

ಈ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿಯಲ್ಲಿನ ಬದಲಾವಣೆ ತಕ್ಕಂತೆ ಆಭರಣಗಳನ್ನು ತನಿಷ್ಕ್ನಲ್ಲಿ ಒದಗಿಸಲು ಇರುವುದಾಗಿ ಘೋಷಿಸಿದರು. ಗೋಲ್ಡ್‌ ಪ್ಲಸ್‌ ಗ್ರಾಹಕರನ್ನು  ತನಿಷ್ಕ್ ಮಳಿಗೆಯತ್ತ ಕೊಂಡೊಯ್ಯಲು ಮತ್ತು ಅವರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಶ್ರೇಷ್ಠ ಮಟ್ಟದ ವಿನ್ಯಾಸ ಮತ್ತು ಶುದ್ಧ ಚಿನ್ನದ  ಆಭರಣಗಳೊಂದಿಗೆ ಅತ್ಯುತ್ಕೃಷ್ಟ ರಿಟೇಲ್‌ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು. 

ಮಳಿಗೆಯು ಇತ್ತೀಚಿನ ಆಕರ್ಷಕವಾದ ಆಭರಣಗಳ ಸಂಗ್ರಹಗಳನ್ನು ಒಳಗೊಂಡಿದೆ.  ಅದರಲ್ಲಿ ಭಾರತೀಯ ದೇವಾಲಯಗಳನ್ನು ಪ್ರತಿಬಿಂಬಿಸುವ ಶುಭಂ ಪ್ರಮುಖವಾಗಿದೆ. ಮಳಿಗೆಯಲ್ಲಿ ಜೂನ್‌ 25ರವರೆಗೆ ಖರೀದಿಸುವ ಪ್ರತಿಯೊಂದು ಆಭರಣದ ಜೊತೆಗೆ   ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ಮೆಚ್ಚಿಗೆಯಾಗುವ ವಿಶೇಷವಾದ ಆಭರಣಗಳ ಖನಿಜ ಮಳಿಗೆಯಲ್ಲಿದೆ ಎಂದರು. 

Advertisement

ಇದೇ  ಸಂದರ್ಭದಲ್ಲಿ ನಾಲ್ವರು ರೂಪದರ್ಶಿಯರು ಚಿನ್ನಾಭರಣಗಳ ಮೂಲಕ ಕ್ಯಾಟ್‌ವಾಕ್‌ ನಡೆಸುವ ಮೂಲಕ ಗಮನಸೆಳೆದರು. ಕಾರ್ಯಕ್ರಮದಲ್ಲಿ ಪ್ರಾಂಚೈಸ್‌ ಪಾರ್ಟನರ್‌ಗಳಾದ  ಆನಂದ ಶಹಾ, ವಿನೋದ ಕುಲಕರ್ಣಿ, ಸಚಿನ್‌ ಮೆಹತಾ, ಓಮಿನಿ ಚಾನೆಲ್‌ ರಿಟೇಲ್‌ನ ಮ್ಯಾನೇಜರ ಉದಯಕುಮಾರ, ಪೂಜಾ, ಕೇತಕಿ ಸಚಿನ್‌ ಮೆಹತಾ, ಉದಯಾ,  ಸಂಪದಾ ಆನಂದ ಶಹಾ, ವೈಶಾಲಿ ವಿನೋದ ಕುಲಕರ್ಣಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next