Advertisement

ಜಯನಗರದಲ್ಲಿ ತನಿಷ್ಕ್ ಆಭರಣ ಮಳಿಗೆ ಪುನರಾರಂಭ

06:29 AM Feb 16, 2019 | |

ಬೆಂಗಳೂರು: ಜ್ಯುವೆಲರಿ ಕ್ಷೇತ್ರದ ಖ್ಯಾತ ತನಿಷ್ಕ್ ಶುಕ್ರವಾರ ಜಯನಗರದ 3ನೇ ಬ್ಲಾಕ್‌ (ಪೂರ್ವ)ನಲ್ಲಿರುವ ಆಭರಣ ಮಳಿಗೆಯನ್ನು ನವೀಕರಿಸಿ ಪುನರಾರಂಭಿಸುವ ಮೂಲಕ ತನ್ನ ಮಾರಾಟ ಜಾಲವನ್ನು ವಿಸ್ತರಿಸಿದೆ. ತನಿಷ್ಕ್ ಸಿಇಒ ಸಿ.ಕೆ. ವೆಂಕಟ್‌ರಾಮನ್‌ ಅವರು ಬೃಹತ್‌ ಶೋರೂಮ್‌ಗೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.

Advertisement

ಇದು ಬೆಂಗಳೂರು ನಗರದ 10ನೇ ಮಳಿಗೆ ಹಾಗೂ ಕರ್ನಾಟಕದ 17ನೇ ಮಳಿಗೆಯಾಗಿದೆ. ಕಳೆದ ಎರಡು ದಶಕಗಳಿಂದ ದಕ್ಷಿಣ ಬೆಂಗಳೂರಿನ ಗ್ರಾಹಕರಿಗೆ ನಮ್ಮ ಸೇವೆ ಒದಗಿಸುತ್ತಿದ್ದರೂ, ಇಂದು ಎಲ್ಲ ಶ್ರೇಣಿಯ ಆಭರಣಗಳನ್ನು ಒಂದೇ ಸೂರಿನಡಿ ಕಾಣಬಹುದಾಗಿದೆ. ಮೂರು ಮಹಡಿಗಳ ಈ ಕಟ್ಟಡದಲ್ಲಿ ಪ್ರತಿ ಮಹಡಿಯಲ್ಲಿ ಯತ್ನಿಕ್‌, ಆ್ಯಂಟಿಕ್‌, ಟ್ರೆಡಿಷನಲ್‌, ಲೈಟ್‌ವೆಯಿಟ್‌ ಹಾಗೂ ಡೈಮಂಡ್‌ ಜ್ಯುವೆಲರಿಗಳ ಭಾರಿ ಸಂಗ್ರಹವಿದೆ.

ಪ್ರಮುಖವಾಗಿ ನಮ್ಮ ಸಂಸ್ಥೆಯ ಏಳಿಗೆಗೆ ಕಾರಣ, ಗ್ರಾಹಕರು ನಮ್ಮಲ್ಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸ. ಅವರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಒದಗಿಸುವಲ್ಲಿ ನಮ್ಮ ಕಾರೆಗಾರರ ಹಾಗೂ ಸಿಬ್ಬಂದಿಯ ಶ್ರಮ ಅಡಗಿದೆ. ಸದ್ಯದಲ್ಲೇ ರಾಜ್ಯದ ಉಡುಪಿ, ವಿಜಯಪುರ ಮತ್ತಿತರ ಕಡೆಗಳಲ್ಲಿ ಮಳಿಗೆಗಳು ಆರಂಭಗೊಳ್ಳಲಿವೆ ಎಂದರು.

ವಿಶೇಷ ಕೊಡುಗೆಗಳು: ತನಿಷ್ಕ್ ಮಳಿಗೆ ಮರುಉದ್ಘಾಟನೆ ಪ್ರಯುಕ್ತ ಫೆ.15 ರಿಂದ 17ರವರೆಗಿನ ಮೂರು ದಿನಗಳು ಗ್ರಾಹಕರು ಖರೀದಿಸಿದ ಪ್ರತಿ 10 ಗ್ರಾಂ ಚಿನ್ನಾಭರಣದ ಮೇಲೆ 0.2 ಗ್ರಾಂ ಗೋಲ್ಡ್‌ ಕಾಯಿನ್‌ ಉಚಿತವಾಗಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ವಜ್ರಾಭರಣಗಳ ಮೇಲೆ ಶೇ.20 ರವರೆಗೆ ರಿಯಾಯಿತಿ ಕೂಡ ಪ್ರಕಟಿಸಲಾಗಿದೆ. ಈ ಸಂದರ್ಭದಲ್ಲಿ ಮೇಕಿಂಗ್‌ ಚಾರ್ಜ್‌ ರಿಯಾಯಿತಿ ಹಾಗೂ ಹಳೆ ಚಿನ್ನಾಭರಣ ಬದಲಾವಣೆ ಮಾಡಿಕೊಳ್ಳುವ ಮತ್ತಿತರ ಆಕರ್ಷಕ ಕೊಡುಗೆಗಳಿವೆ ಎಂದು ಶೋರೂಮ್‌ ಅಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next