ವಾಡಿ: ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ತನಾರತಿ ಉತ್ಸವ ಸಂಭ್ರಮದಿಂದ ನೆರವೇರಿತು. ಶ್ರೀ ಮಠದ ಆವರಣದಲ್ಲಿ ಸೇರಿದ್ದ ಸಾವಿರಾರು ಜನ ಭಕ್ತರು ಭಕ್ತಿಯ ತನಾರತಿ ಹೊತ್ತು ಪುನೀತರಾದರು.
ಮಠದ ಪೀಠಾಧಿಪತಿ ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಕೋರಿಸಿದ್ದೇಶ್ವರರ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳು ಮಠದ ಸಾಂಪ್ರದಾಯಿಕ ಉಡುಗೆಯೊಂದಿಗೆ ತನಾರತಿ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರೊಟ್ಟಿಗೆ ಹೆಜ್ಜೆ ಹಾಕಿದರು.
ನಾದಸ್ವರ, ಪುರವಂತರ ಕುಣಿತ ಹಾಗೂ ಜಯಘೋಷಗಳೊಂದಿಗೆ ಶ್ರೀಗಳು ಗದ್ದುಗೆಗೆ ಪ್ರದಕ್ಷಿಣೆ ಹಾಕಿದರು. ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದ ತೋಟೇಂದ್ರ ಸ್ವಾಮೀಜಿ, ಸಮಾಜದ ಸ್ವಾಸ್ಥ ಕಾಪಾಡಲು ಜನರು ಆರೋಗ್ಯವಂತರಾಗಿರುವುದು ಮುಖ್ಯ.
ಕಲ್ಮಶ ವಾತಾವರಣದಿಂದ ರೋಗಪೀಡಿತ ಸಮಾಜ ಹುಟ್ಟುತ್ತದೆ. ಮನಸ್ಸಿನ ಭಾವನೆಗಳು ಕಲ್ಮಶಗೊಂಡರೆ ದೇಹ ರೋಗದಿಂದ ತತ್ತರಿಸುತ್ತದೆ. ಮನಸ್ಸಿನ ಆರೋಗ್ಯಕ್ಕೆ ಧರ್ಮದ ಚಿಕಿತ್ಸೆ ಜತೆಗೆ ಭಕ್ತಿಯ ಪಾಠದ ಅಗತ್ಯವಿದೆ ಎಂದು ನುಡಿದರು.
ತನಾರತಿ ಉತ್ಸವ ಆರಂಭಕ್ಕೂ ಮುಂಚೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ರಾಯಚೂರು ಕೃಷಿ ವಿವಿ ನಿಧೇìಶಕ ವೀರಣ್ಣಗೌಡ ಪರಸರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಭೀಮರೆಡ್ಡಿಗೌಡ ಕುರಾಳ, ಡಾ.ಪ್ರಕಾಶ ಹಿರೇಮಠ ಗಂವಾರ, ಶಾಂತಪ್ಪ ಸಾಹು, ಕಲಬುರಗಿ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ| ಅಂಬಿಕಾ ನಾಲವಾರ, ಡಾ| ಗಿರೀಜಾ, ಡಾ| ಪ್ರೇರಣಾ, ಡಾ| ಕಾಂಚನಾ ಹಿರೇಮಠ, ಡಾ| ಭಾರತಿ, ಡಾ| ಪೂಜಾ, ಡಾ| ಸಂಕೀರ್ತನಾ, ಡಾ| ಭಾರ್ಗವಿ, ಡಾ| ಜಿವ್ಹೇಶ, ಡಾ| ಅಭಿಷೇಕ, ಡಾ| ಮೀರಜ, ಡಾ| ಆದ್ಯ ಪಾಲ್ಗೊಂಡಿದ್ದರು. ಶ್ರೀಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಠದ ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿದರು.