ಕೊಲಂಬೋ/ನವದೆಹಲಿ: ತಮಿಳುನಾಡು ಮೀನುಗಾರನ ಸಾವಿಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನವದೆಹಲಿಯಲ್ಲಿರುವ ಶ್ರೀಲಂಕಾದ ಹೈಕಮಿಷನರ್‌ರನ್ನು ಕರೆಯಿಸಿ ಪ್ರತಿಭಟನೆ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಸೋಮವಾರ ರಾಮೇಶ್ವರಂ ಮತ್ತು ಶ್ರೀಲಂಕಾದ ಕಚ್ಚತ್ತೀವು ದ್ವೀಪದ ನಡುವೆ ಮೀನು ಹಿಡಿಯುಧಿತ್ತಿದ್ದಾಗ ತಮಿಳುನಾಡಿನ ಮೀನುಗಾರ ಗುಂಡೇಟಿನಿಂದ ಅಸುಧಿನೀಗಿದ್ದ. ಘಟನೆಯನ್ನು ಖಂಡಿಸಿ ರಾಮೇಶ್ವರಂನಲ್ಲಿ ಮೀನುಗಾಧಿರರು ಸೋಮವಾರ ಪ್ರತಿಭಟನೆ ನಡೆಸಿದರು. ವಿದೇಶಾಂಗ ಇಲಾಖೆ ವಕ್ತಾರ ನವದೆಹಲಿಯಲ್ಲಿ ಮಾತಾಡಿ ಕೊಲೊಂಬೋದಧಿಲ್ಲಿರುವ ಹೈಕಮಿಷನರ್‌ಗೆ ಶ್ರೀಲಂಕಾ ಸರ್ಕಾರದ ಜತೆ ಈ ವಿಚಾರ ಪ್ರಸ್ತಾಪಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ನೌಕಾಪಡೆ ತನ್ನ ಯೋಧರ ಗುಂಡಿನಿಂದ ಭಾರತದ ಮೀನುಗಾರ ಅಸುನೀಗಿಲ್ಲ, ಆರಂಭಿಕ ತನಿಖೆಯಿಂದ ಈ ಅಂಶ ಪತ್ತೆಯಾಗಿದೆ ಎಂದು ಮಂಗಳವಾರ ಪ್ರತಿಕ್ರಿಯೆ ನೀಡಿದೆ.