Advertisement

ಯಾರಾಗುತ್ತಾರೆ ತಮಿಳುನಾಡಿನ ದೊರೆ?

01:45 AM Apr 06, 2021 | Team Udayavani |

ದಕ್ಷಿಣದ ರಾಜ್ಯಗಳಲ್ಲಿ ತಮಿಳುನಾಡಿಗೆ ಮಹತ್ವದ ಸ್ಥಾನವಿದೆ. ದೇಶದ ಆಡಳಿತದ ಚುಕ್ಕಾಣಿ ಇರುವ ನವದೆಹಲಿಯ ರಾಜಕೀಯವನ್ನು ನಿಯಂತ್ರಿಸುವ ದೇಶದ ಪ್ರಮುಖ ರಾಜ್ಯವೆಂದರೆ ತಮಿಳುನಾಡು. ಈ ಖದರ್‌, ಜಯರಾಂ ಜಯಲಲಿತಾ ಮತ್ತು ಮುತ್ತುವೇಲು ಕರುಣಾನಿಧಿ ಪ್ರವರ್ಧಮಾನದಲ್ಲಿ ಇರುವ ವರೆಗೆ ಇತ್ತು. ಎ.6ರಂದು ಅಲ್ಲಿ ಮತದಾನ ನಡೆಯಲಿದೆ. ಇಬ್ಬರು ದ್ರಾವಿಡ ರಾಜಕೀಯ ಧ್ರುವತಾರೆಗಳಾಗಿರುವ ಅನುಪಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಐವರು ನಾಯಕರ ಮೂಲಕ ಅಲ್ಲಿನ ವಸ್ತುಸ್ಥಿತಿ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ.

Advertisement

1. ಎಡಪ್ಪಾಡಿ ಕೆ. ಪಳನಿಸ್ವಾಮಿ
ಸೇಲಂ ಜಿಲ್ಲೆಯ ಎಡಪ್ಪಾಡಿ ಎಂಬ ವಿಧಾನಸಭಾ ಕ್ಷೇತ್ರ ಈಗ ದೇಶವನ್ನು ಕ್ಷಿಪ್ರವಾಗಿ ಸೆಳೆಯುವ ಸ್ಥಳ. ವಿಚಾರ ಇಷ್ಟೇ ಮಂಗಳವಾರದ ಮತದಾನಕ್ಕಾಗಿ ಸ್ಪರ್ಧೆ ಮಾಡಿರುವುದು ಮುಖ್ಯಮಂತ್ರಿಯಾಗಿರುವ ಎಡಪ್ಪಾಡಿ ಕರುಪ್ಪ ಪಳನಿಸ್ವಾಮಿ. ಅವರು ಇದೇ ಕ್ಷೇತ್ರದಿಂದ ಸತತವಾಗಿ ಗೆದ್ದು ಬರುತ್ತಿದ್ದಾರೆ. ಅಂದ ಹಾಗೆ ಕ್ಷೇತ್ರದಿಂದ 4ನೇ ಬಾರಿಗೆ ಪುನರಾಯ್ಕೆ ಬಯಸುತ್ತಿದ್ದಾರೆ. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಂತೆ ಪಳನಿಸ್ವಾಮಿ ವರ್ಚಸ್ವೀ ನಾಯಕರು ಅಲ್ಲ. ಆದರೆ ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಲು ಶಕ್ತರು. ಜಯಲಲಿತಾ ಪ್ರವರ್ಧ ಮಾನದಲ್ಲಿರುವ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಮತ್ತು ಅವರ ಸ್ನೇಹಿತೆ ಶಶಿಕಲಾ ನಟರಾಜನ್‌ ಜತೆಗೆ ಪ್ರತಿಸ್ಪರ್ಧಿಗಳನ್ನು ಮಣಿಸುವ ಕಲೆಗಾರಿಕೆಯನ್ನು ಮುಖ್ಯಮಂತ್ರಿ ಕರಗತ ಮಾಡಿಕೊಂಡವರೇ ಆಗಿದ್ದಾರೆ.

ಅವರ ಎದುರಾಳಿಯಾಗಿ ಸ್ಪರ್ಧೆ ಮಾಡಿರುವುದು ಡಿಎಂಕೆಯ ಟಿ. ಸಂಪತ್‌ ಕುಮಾರ್‌. ಅದೇನೇ ಇದ್ದರೂ, ಎಡಪ್ಪಾಡಿಯಲ್ಲಿ ಪಳನಿಸ್ವಾಮಿ ವರ್ಚಸ್ಸು ಮಾಸಿಲ್ಲ. ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿ ಜತೆಗೆ ಮಾತನಾಡಿದ್ದ ಅವರು, “ಬಿಜೆಪಿಯ ಕಾರಣದಿಂದಲಾಗಿ ಎಐಎಡಿಎಂಕೆ ಸರಕಾರ ಚೆನ್ನಾಗಿ ಕರ್ತವ್ಯ ನಿರ್ವಹಿಸುತ್ತಿದೆ’ ಎಂದಿದ್ದರು. ಇದರಿಂದಾಗಿ ದ್ರಾವಿಡ ರಾಜ್ಯದಲ್ಲಿ ಬಿಜೆಪಿ ತನ್ನ ಛಾಪು ಮೂಡಿಸುತ್ತಿದೆಯೇ ಎಂಬ ಭವಾನೆ ಮೂಡಲಾರಂಭಿಸಿದೆ.

ಪ್ರಚಾರದ ಸಂದರ್ಭದಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮುಖ್ಯಮಂತ್ರಿ ಪಳನಿಸ್ವಾಮಿ ಶಶಿಕಲಾ ಮುಂದೆ ತೆವಳಿಕೊಂಡು ಇರುತ್ತಿದ್ದರು ಎಂದು ಟೀಕಿಸಿದ್ದರು. ವೀಡಿಯೋ ದೃಶ್ಯಾವಳಿಯೊಂದರಲ್ಲಿ ಇರುವಂತೆ ಪಳನಿ ಸ್ವಾಮಿ ಶಶಿಕಲಾ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ದೃಶ್ಯ ಒಂದಿದೆ. ಈ ಹಿನ್ನೆಲೆಯಲ್ಲಿ ಅವರು ಹೇಳಿದ್ದಿರಬಹುದು. ಅದಕ್ಕೆ ತಿರುಗೇಟು ನೀಡಿದ್ದ ಸಿಎಂ, 1969ರಲ್ಲಿ ವಿ.ಆರ್‌. ನೆಡುಂಚೆಳಿಯನ್‌ಗೆ ಸಿಗಬೇಕಾಗಿದ್ದ ಸಿಎಂ ಹುದ್ದೆಯನ್ನು ಕರುಣಾನಿಧಿ ಕಸಿದುಕೊಂಡಿದ್ದರು ಎಂದಿದ್ದರು. 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪಿಎಂಕೆಯ ಎನ್‌.ಅಣ್ಣಾದೊರೈ ವಿರುದ್ಧ ಪಳನಿಸ್ವಾಮಿ ಗೆದ್ದಿದ್ದರು. 2017ರಲ್ಲಿ ಸಿಎಂ ಆದ ಬಳಿಕ ಪ್ರತೀ ತಿಂಗಳೂ ಸ್ವಕ್ಷೇತ್ರಕ್ಕೆ ಆಗಮಿಸಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಜತೆಗೆ ರಾಜ್ಯಾದ್ಯಂತ ಒ.ಪನೀರ್‌ಸೆಲ್ವಂ ಜತೆಗೆ ಎಐಎಡಿಎಂಕೆಗಾಗಿ ಪ್ರಚಾರ ನಡೆಸಿದ್ದಾರೆ.

2. ಎಂ.ಕೆ. ಸ್ಟಾಲಿನ್‌
ಚೆನ್ನೈನ ವಾಯವ್ಯ ಭಾಗದಲ್ಲಿರುವ ಕೊಳತ್ತೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. 1984ರಲ್ಲಿ ಅವರು ಥೌಸೆಂಡ್‌ ಲೈಟ್ಸ್‌ ಕ್ಷೇತ್ರದಿಂದ ಮೊದಲ ಬಾರಿಗೆ ಮತ ಕಣಕ್ಕೆ ಇಳಿದಿದು ಸೋತಿದ್ದರು. 1989ರ ಚುನಾವಣೆ ಗೆದ್ದರು ಮತ್ತು 1991ರಲ್ಲಿ ಮತ್ತೆ ಸೋತರು. 1996ರಿಂದ 2006ರ ವರೆಗೆ ಅವರು ಅದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ವಿಶೇಷವೆಂದರೆ, ತಂದೆ ಕರುಣಾನಿಧಿ ಅನುಪಸ್ಥಿತಿಯಲ್ಲಿ ಡಿಎಂಕೆಯನ್ನು ಮುನ್ನಡೆಸುವ ಹೊಣೆಗಾರಿಕೆ ಅವರಲ್ಲಿದೆ. ಈಗಾಗಲೇ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ವ್ಯಕ್ತವಾಗಿರುವಂತೆ ಡಿಎಂಕೆ ಗೆಲ್ಲಲಿದೆ ಮತ್ತು ಸ್ಟಾಲಿನ್‌ ಸಿಎಂ ಆಗಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರ ಪುತ್ರಿ ಮತ್ತು ಪಕ್ಷದ ಶಾಸಕರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಟಾಲಿನ್‌ “ನಾನು ಕಲೈನಾರ್‌ ಪುತ್ರ ಸ್ಟಾಲಿನ್‌. ಪ್ರಧಾನಿ ಮೋದಿಯವರೇ ದಾಳಿ ನಡೆಸುವ ಮೂಲಕ ಬೆದರಿಕೆ ಹಾಕುವ ಪ್ರಯತ್ನ ಬೇಡ’ ಎಂದು ಗುಟುರು ಹಾಕಿದ್ದರು. ಹಾಗೆ ಹೇಳಬೇಕೆಂದರೆ, ಅದಕ್ಕಾಗಿ ಸೂಕ್ತ ಪಾಠವೂ ಆಗಿದೆ ಅವರಿಗೆ. ಕರುಣಾನಿಧಿ ಇರುವ ಸಂದರ್ಭದಲ್ಲಿಯೇ ಅವರಿಗೆ ಪಕ್ಷದ ಉಸ್ತುವಾರಿ ಕೊಡಲಾಗಿತ್ತು. ಜತೆಗೆ ರಾಜಕೀಯದ ಸೂಕ್ಷ್ಮಗಳು, ಎಲ್ಲಿ ಪೆಟ್ಟು ಕೊಟ್ಟರೆ ತಾಗುತ್ತದೆ ಎಂಬ ಪಟ್ಟುಗಳನ್ನು ಕಲಿತಿದ್ದಾರೆ.

Advertisement

3. ಕಮಲ್‌ಹಾಸನ್‌
ದ್ರಾವಿಡ ರಾಜ್ಯದ ರಾಜಕೀಯಕ್ಕೆ ಸಿನೆಮಾದಿಂದ ಪ್ರವೇಶ ಮಾಡಿದ ಮತ್ತೂಬ್ಬ ಪ್ರಮುಖ ಕಮಲ್‌ಹಾಸನ್‌. ಮಕ್ಕಳ್‌ ನೀತಿ ಮಯ್ಯಂ ಎಂಬ ಪಕ್ಷವನ್ನೇನೋ ಸ್ಥಾಪಿಸಿದ್ದಾರೆ. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಪಕ್ಷದಿಂದ ಉಲ್ಲೇಖೀಸಬಹು ದಾಗಿರುವ ಅಭ್ಯರ್ಥಿಗಳ ಹೆಸರೆಂದರೆ “ಕಮಲ್‌ಹಾಸನ್‌’ ಮಾತ್ರ. 70 ಕ್ಷೇತ್ರಗಳಿಗಷ್ಟೇ ಅವರು ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಈ ಪೈಕಿ ಪ್ರಸ್ತಾವಿಸಬಹುದು ಎಂಬ ಹೆಸರುಗಳೆಂದರೆ ನಿವೃತ್ತ ಐಎಎಸ್‌ ಅಧಿಕಾರಿ ಸಂತೋಷ್‌ ಬಾಬು ಮತ್ತು ವಿ.ಪೊನ್‌ರಾಜ್‌. ಹಲವಾರು ಟೀಕೆಗಳ ನಡುವೆಯೇ ರಾಜಕೀಯ ಪ್ರವೇಶ ಮಾಡಿದವರು ಕಮಲ್‌. 2019ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾ ವಣೆಗಳಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿತ್ತಾದರೂ, ಕೊನೆಯ ಹಂತದಲ್ಲಿ ನಿರ್ಧಾರ ಬದಲಾಗಿತ್ತು. ಶಿವಗಂಗಾ ಸಂಸದ ಕಾರ್ತಿ ಚಿದಂಬರಂ “ಕಮಲ್‌ಹಾಸನ್‌ ಒಬ್ಬ ಸೂಪರ್‌ ನೋಟಾ. ಅವರ ಪಕ್ಷದಲ್ಲಿ ಗೆದ್ದರೆ ಅವರೊಬ್ಬರೇ ಗೆಲ್ಲಬೇಕು’ ಎಂದಿದ್ದರು.

4. ಟಿ.ಟಿ.ವಿ. ದಿನಕರನ್‌
ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ ಅವರ ಸಂಬಂಧಿ. ಹಾಲಿ ವಿಧಾನಸಭೆಯಲ್ಲಿ ಚೆನ್ನೈನ ಡಾ| ರಾಧಾಕೃಷ್ಣನ್‌ ನಗರ ಕ್ಷೇತ್ರದಿಂದ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ ಪಕ್ಷದಿಂದ ಶಾಸಕರಾಗಿದ್ದಾರೆ. ಎ.6ರ ಮತದಾನ ಅವರು ಹಾಗೂ ಅವರ ಪಕ್ಷಕ್ಕೆ ಅಳಿವು ಉಳಿವಿನ ಪ್ರಶ್ನೆ. ಪ್ರಸಕ್ತ ಚುನಾವಣೆಯಲ್ಲಿ ದಿನಕರನ್‌ 15 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ದಿನಕರನ್‌ಗೆ ತಮಿಳುನಾಡು ರಾಜ್ಯ ವ್ಯಾಪಿ ವರ್ಚಸ್ಸು ಇಲ್ಲವೆಂದೇ ಹೇಳಬೇಕು. ಒಂದು ವೇಳೆ ಶಶಿಕಲಾ ಹಾಲಿ ಚುನಾ
ವಣೆ ಸಂದರ್ಭದಲ್ಲಿಯೇ ರಾಜಕೀಯಕ್ಕೆ ಧುಮುಕುತ್ತಿದ್ದರೆ ಕೊಂಚ ಅದೃಷ್ಟ ಪರೀಕ್ಷೆ ನಡೆಸುವ ಮತ್ತು ಕಿಂಗ್‌ಮೇಕರ್‌ ಆಗುವ ಲಕ್ಷಣಗಳು ಬರುತ್ತಿತ್ತೋ ಏನೋ? ಈ ಪ್ರಶ್ನೆ ಪ್ರಸ್ತುತವೇ ಅಲ್ಲ ಈಗ. ಅವರಿಗೆ ಡಿಎಂಕೆ, ಎಐಎಡಿಎಂಕೆಯಿಂದ ನೇರ ಸವಾಲುಗಳು ಇವೆ. ಚುನಾವಣೆ ಘೋಷಣೆ ಯಾಗುವುದಕ್ಕಿಂತ ಮೊದಲು ಮತ್ತು ಅನಂತರದ ಕೆಲ ದಿನಗಳಲ್ಲಿ ಸುದ್ದಿ ಗದ್ದಲವಾಗಿದ್ದ ದಿನಕರನ್‌ ಅವರ ಕ್ಷೇತ್ರಕ್ಕೇ ಸೀಮಿತವಾಗಿಬಿಟ್ಟರು. ಆದರೂ ಕೆಲವೊಂದು ವಾದಗಳ ಪ್ರಕಾರ 60 ಕ್ಷೇತ್ರಗಳಲ್ಲಿ ಅವರು ಪ್ರಭಾವ ಬೀರಲು ಶಕ್ತರಂತೆ.

5. ರಜನಿಕಾಂತ್‌
ದ್ರಾವಿಡ ರಾಜ್ಯದ ರಾಜಕೀಯದಲ್ಲಿ ಮೊನ್ನೆ ಮೊನ್ನೆಯ ವರೆಗೆ ಚಾಲ್ತಿಯಲ್ಲಿದ್ದ ಹೆಸರೇ ರಜನೀಕಾಂತ್‌. ಒಂದು ಹಂತದಲ್ಲಿ ಅದ್ಧೂರಿಯಾಗಿಯೇ ರಾಜ ಕೀಯ ಪ್ರವೇ ಶದ ಘೋಷಣೆ ಮಾಡಿದ್ದರು. ಆದರೆ ಜನವರಿಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ “ವೈದ್ಯರ ಸಲಹೆಯಂತೆ ಮತ್ತು ಆರೋಗ್ಯದ ಕಾರಣದಿಂದ ಸಕ್ರಿಯ ರಾಜಕೀಯಕ್ಕೆ ಬರುವುದಿಲ್ಲ’ ಎಂದು ಬಿಟ್ಟರು. ಒಂದು ವೇಳೆ, ಅವರು ತಮಿಳುನಾಡು ರಾಜಕೀಯಕ್ಕೆ ಬರುತ್ತಿದ್ದರೆ ಅಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಅವರು ತಮ್ಮ ಅಭಿಮಾನಿ ಸಂಘದ ಮುಖಂಡರ ಜತೆಗೆ ರಾಜಕೀಯ ಪಕ್ಷ ಸ್ಥಾಪಿಸಬೇಕೋ ಬೇಡವೋ ಎಂಬುದಕ್ಕೆ ಬಿರುಸಿನ ಸಮಾಲೋಚನೆಯನ್ನೂ ನಡೆಸಿದ್ದರು. 1991ರ ಚುನಾವಣೆ ಸಂದರ್ಭದಲ್ಲಿ “ತಮಿಳುನಾಡನ್ನು ದೇವರೇ ಕಾಪಾಡ ಬೇಕು’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next