Advertisement
ರೈಡರ್ ಮಂಜೀತ್ (7), ಕೆ. ಪ್ರಪಂಜನ್ (5), ಡಿಫೆಂಡರ್ ಸಾಗರ್ (5) ತಲೈವಾಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ತಮಿಳ್‌ಗೆ ಒಲಿದ 2ನೇ ಜಯ. ಯೋಧಾ ತಂಡದ ರೈಡರ್ ಸುರೀಂದರ್ ಗಿಲ್ ಭರ್ಜರಿ ಆಟವಾಡಿ 14 ಅಂಕ ಗಳಿಸಿದರು.
ಮುಂಬಾ-ಹರ್ಯಾಣ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಪಂದ್ಯದ ಮುಕ್ತಾಯಕ್ಕೆ ಕೇವಲ 20 ಸೆಕೆಂಡ್ ಬಾಕಿ ಇರುವಾಗ ಮುಂಬಾ ನಾಯಕ ಫಜಲ್ ಅಟ್ರಾಚಲಿ ಮತ್ತು ಹರ್ಯಾಣ ನಾಯಕ ವಿಕಾಸ್ ಖಂಡೋಲ ಈ ಪಂದ್ಯದ ಭವಿಷ್ಯವನ್ನು ನಿರ್ಧರಿಸಲಿದ್ದರು. ಆಗ ಮುಂಬಾ ಒಂದಂಕದ ಮುನ್ನಡೆಯಲ್ಲಿತ್ತು. ವಿಕಾಸ್ ರೈಡಿಂಗ್‌ಗೆ ಇಳಿದರು. ಅಟ್ರಾಚಲಿ ಟ್ಯಾಕಲ್ ವಿಫಲಗೊಂಡಿತು. ಒಂದು ಅಂಕ ತಂದಿತ್ತ ವಿಕಾಸ್ ಹರ್ಯಾಣದ ಸೋಲು ತಪ್ಪಿಸಿದರು.
ಇದು ಮುಂಬಾ ಕಂಡ ಸತತ 2ನೇ ಟೈ ಫಲಿತಾಂಶವಾಗಿದೆ. ಮುಂಬಾ ಪರ ಯಾರಿಂದಲೂ ದೊಡ್ಡ ಮಟ್ಟದ ಹೋರಾಟ ಕಂಡುಬರಲಿಲ್ಲ. ರೈಡರ್ ಅಭಿಷೇಕ್ ಸಿಂಗ್, ಡಿಫೆಂಡರ್ ಫಜಲ್ ಅಟ್ರಾಚಲಿ ತಲಾ 4 ಅಂಕ ಗಳಿಸಿದರು. ಹರ್ಯಾಣದ ಆಲ್‌ರೌಂಡರ್ ರೋಹಿತ್ ಗುಲಿಯಾ ಅವರನ್ನು ಈ ಪಂದ್ಯದ ಹೀರೋ ಎನ್ನಲಡ್ಡಿಯಿಲ್ಲ. ಅವರು ಸರ್ವಾಧಿಕ 8 ಅಂಕ ತಂದುಕೊಟ್ಟರು. 13 ರೈಡ್ ಮಾಡಿದ ಅವರು 4 ಟಚ್ ಪಾಯಿಂಟ್, 3 ಟ್ಯಾಕಲ್ ಪಾಯಿಂಟ್ ಹಾಗೂ ಒಂದು ಬೋನಸ್ ಅಂಕ ಗಳಿಸಿದರು. ವಿಕಾಸ್ ಖಂಡೋಲ ಅವರದು 5 ಅಂಕಗಳ ಸಾಧನೆ.