Advertisement

ಹಿರಿಯ ತಮಿಳು ಕಾದಂಬರಿಕಾರ ಬಾಲಕುಮಾರನ್‌ ವಿಧಿವಶ

04:27 PM May 15, 2018 | udayavani editorial |

ಚೆನ್ನೈ : ಹಿರಿಯ ತಮಿಳು ಕಾದಂಬರಿಕಾರ ಬಾಲಕುಮಾರನ್‌ ಅವರು ಅಲ್ಪಾವಧಿಯ ಅಸೌಖ್ಯದ ಬಳಿಕ ಇಂದಿಲ್ಲಿ ತಮ್ಮ 71ರ ಹರೆಯದಲ್ಲಿ  ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. 

Advertisement

ಕವನ ಬರೆಯುವ ಮೂಲಕ ತಮಿಳು ಸಾಹಿತ್ಯ ರಂಗ ಪ್ರವೇಶಿಸಿದ ಬಾಲಕುಮಾರನ್‌ ಅವರು ಅನಂತರ ಕಾದಂಬರಿ ಪ್ರಕಾರಕ್ಕೆ ತಿರುಗಿ ಅಪಾರ ಯಶಸ್ಸು ಗಳಿಸಿ ಪ್ರಮುಖ ಕಾದಂಬರಿಕಾರನೆಂದು ಗುರುತಿಸಲ್ಪಟ್ಟರು. ಅನೇಕ ಸಣ್ಣ ಕತೆಗಳನ್ನೂ ಬರೆದಿರುವ ಅವರು ಅನಂತರ ಸಿನಿಮಾ ಚಿತ್ರಕಥೆ ಮತು ಸಂಭಾಷಣೆಗಳನ್ನು ಬರೆಯುವತ್ತ ತಿರುಗಿದರು. ರಜನೀಕಾಂತ್‌ ಅವರ ಬಾಷಾ  ಮತ್ತು ಕಮಲ ಹಾಸನ್‌ ಅವರ ನಾಯಗನ್‌ ಮತ್ತು ಗುಣ ಚಿತ್ರಗಳಲ್ಲಿ ಬಾಲಕುಮಾರನ್‌ ದುಡಿದಿದ್ದರು. 

ತಮಿಳು ನಾಡು ಸರಕಾರದಿಂದ ಕಲೈಮಾಮಣಿ ಸಹಿತ ಹಲವು ಪ್ರಶಸ್ತಿಗಳು ಬಾಲಕುಮಾರನ್‌ಗೆ ಸಂದಿವೆ. ಇವರು ನೂರಕ್ಕೂ ಹೆಚ್ಚು ಸಣ್ಣ ಕತೆಗಳನ್ನು ಮತ್ತು 200ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ.

ತಮಿಳು ನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ, ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಅವರು ಬಾಲಕುಮಾರನ್‌ ನಿಧನಕ್ಕೆ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next