Advertisement

ತಮಿಳುನಾಡಿನಲ್ಲಿ ಆನ್ ಲೈನ್ ಗೇಮ್ಸ್ ನಿಷೇಧ ..!? ಸರ್ಕಾರ ಹೇಳಿದ್ದೇನು..?  

05:46 PM Aug 04, 2021 | Team Udayavani |

ಚೆನ್ನೈ : ಆನ್ ಲೈನ್ ರಮ್ಮಿ ಗೇಮ್ ಗಳನ್ನು ರದ್ದುಗೊಳಿಸುವಂತಹ ಕಾನೂನನ್ನು ತಮಿಳುನಾಡು ಸರ್ಕಾರ ಜಾರಿಗೆ ತರುವುದಕ್ಕೆ ಹೊರಟಿದೆ.

Advertisement

ತಮಿಳುನಾಡು ಕಾನೂನು ಸಚಿವ ಎಸ್. ರಗುಪತಿ ಇಂದು(ಬುಧವಾರ, ಆಗಸ್ಟ್ 4) ರಾಜ್ಯ ಸರ್ಕಾರವು ಆನ್‌ ಲೈನ್ ರಮ್ಮಿ ಗೇಮ್ ಗಳನ್ನು ನಿಷೇಧಿಸಲು ಹೊಸ ಕಾನೂನನ್ನು ತರಲಿದೆ. ಮುಖ್ಯಮಂತ್ರಿ ಎಂ ಕೆ. ಸ್ಟ್ಯಾಲಿನ್ ಕಾನೂನಿನ ಅನುಷ್ಠಾನ ಮಾಡುವಂತೆ ಅನುಮೋದಿಸಿದ್ದಾರೆ ಎಂದು ಹೇಳಿದ್ದಾರೆ.

ತಮಿಳುನಾಡು  2021 ರ ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳ ತಿದ್ದುಪಡಿ ಕಾಯ್ದೆಯನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ : ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

ಹೈಕೋರ್ಟ್, ಆನ್‌ ಲೈನ್ ಗೇಮಿಂಗ್ ಕಂಪನಿಗಳಿಂದ ವಿಚಾರಣೆ ಮಾಡುವಾಗ, ಆನ್‌ ಲೈನ್ ರಮ್ಮಿಯಂತಹ ಗೇಮ್ ಗಳನ್ನು ನಿಷೇಧಿಸುವುದು ಅನುಚ್ಛೇದ 19 (1)ಜಿ ಗೆ ವಿರುದ್ಧವಾಗಿದೆ ಎಂದು ಹೇಳಿತ್ತು. ರಾಜ್ಯವು ಅಗತ್ಯವಿದ್ದಲ್ಲಿ, ಆಟವನ್ನು ನಿಯಂತ್ರಿಸುವ ಕಾನೂನನ್ನು ಜಾರಿಗೊಳಿಸಬಹುದು ಎಂದು ನ್ಯಾಯಾಲಯವು ನಿರ್ದೇಶಿಸಿತ್ತು.

Advertisement

ಈ ಬೆನ್ನಿಗೆ ತಮಿಳುನಾಡಿನ ಕಾನೂನು ಸಚಿವ  ಈ ಹೇಳಿಕೆಯನ್ನು ನೀಡಿದ್ದು, ಮುಖ್ಯಮಂತ್ರಿಗಳು ರಮ್ಮಿಯಂತಹ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವ ಉದ್ದೇಶದಿಂದ ಹೊಸ ಕಾನೂನನ್ನು ತರುವುದಕ್ಕೆ ಅನಮೋದಿಸಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ರಾಜ್ಯದಲ್ಲಿ ಈ ನೂತನ ಕಾನೂನುನನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

Advertisement

Udayavani is now on Telegram. Click here to join our channel and stay updated with the latest news.

Next