ತಮಿಳುನಾಡು : ವಯಸ್ಸಾದ ತಾಯಿ ತೀರಿದರೂ ಆಕೆಯ ಕೊಳೆತ ಶವದ ಜೊತೆ ಪುತ್ರಿಯರಿಬ್ಬರು ವಾಸ ಮಾಡಿದ ಘಟನೆ ತಮಿಳುನಾಡಿನ ತಿರ್ಚಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸೊಕ್ಕಂಪಟ್ಟೆ ಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ನಿವೃತ್ತ ಶಿಕ್ಷಕಿ ಬಿ ಮೇರಿ ತನ್ನಿಬ್ಬರು ಅವಿವಾಹಿತ ಹೆಣ್ಣು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ವಾರ ಆಕೆ ತೀರಿ ಹೋಗಿದ್ದಾಳೆ. ಆದರೆ, ಈ ವಿಷಯನ್ನು ಆಕೆಯ ಪುತ್ರಿಯರು ಯಾರ ಎದರೂ ಹೇಳಿಕೊಂಡಿಲ್ಲ. ಬದಲಾಗಿ ಮನೆಯ ಬಾಗಿಲು ಹಾಕಿಕೊಂಡು ಶವದ ಜೊತೆ ದಿನ ದೂಡಿದ್ದಾರೆ. ಶವ ಕೊಳೆಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರ ಮೂಗಿಗೆ ವಾಸನೆ ಬಡಿದಿದೆ. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಕೊನೆಗೆ ಗ್ರಾಮದ ಮುಖಂಡರ ಮನವೋಲಿಕೆಯ ನಂತರ ಪುತ್ರಿಯರಿಬ್ಬರು ಬಾಗಿಲು ತೆರೆದಿದ್ದಾರೆ. ಒಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ.
ಜೀವಂತ ಇದ್ದಾಳೆನ್ನುವ ನಂಬಿಕೆ :
ತಾಯಿ ಸಾವನ್ನಪ್ಪಿದ್ದರೂ ಆಕೆ ಇನ್ನೂ ಜೀವಂತ ಇದ್ದಾಳೆ ಎಂದು ಆ ಮಹಿಳೆಯರಿಬ್ಬರು ನಂಬಿಕೊಂಡಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆಗೆ ಶವವನ್ನು ನೀಡಲು ನಿರಾಕರಿಸಿದರು. ಪೊಲೀಸರ ಜೊತೆ ವಾಗ್ದಾದ ನಡೆಸಿದರು. ಕೊನೆಗೆ ಆ ಮಹಿಳೆಯರ ಮನವೊಲಿಸಿದ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಿದರು.