Advertisement
ತಮಿಳುನಾಡಿನಲ್ಲಿರುವ ಡಂಪಿಂಗ್ ಯಾರ್ಡ್‌ಗಳನ್ನು ಬಯೋಮೈನಿಂಗ್ ಮಾಡುವ ಮೂಲಕ ತ್ಯಾಜ್ಯಗಳನ್ನು ಕರಗಿಸುವ ವ್ಯವಸ್ಥೆ ಮಾಡಲಾಗಿದೆ. ಅದರಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಉಡುಪಿಯಲ್ಲೂ ಅನುಷ್ಠಾನಗೊಳಿಸುವ ಬಗ್ಗೆ ತಜ್ಞರ ತಂಡ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಮಾದರಿ ಯೋಜನೆಗೆ 2ರಿಂದ 3 ಕೋ.ರೂ.ವೆಚ್ಚ ತಗಲಲಿದ್ದು, ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಇದನ್ನು ಪಡೆಯಲಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಡಿಪಿಆರ್ ಸಿದ್ದಪಡಿಸಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಸ್ವತ್ಛ ಭಾರತ ಆಂದೋಲನದಲ್ಲಿ ಈಗಾಗಲೇ ಜಿಲ್ಲೆ ಮಹತ್ವದ ಮೈಲುಗಲ್ಲು ತಲುಪಿದ್ದು, ಮುಂದಿನ ದಿನಗಳಲ್ಲಿ ಒಣ ಕಸದ ಘಟಕ ಹಾಗೂ ಹಸಿ ಘಟಕಗಳನ್ನು ನಿರ್ಮಾಣ ಮಾಡಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಚಿಂತನೆಯೂ ಜಿಲ್ಲಾಡಳಿತಕ್ಕಿದೆ. 50 ಪಂಚಾಯತ್‌ಗಳಿಗೆ ನಿವೇಶನ
ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಈಗಾಗಲೇ 40 ಪಂಚಾಯತ್‌ಗಳಿಗೆ ನಿವೇಶನ ನೀಡಲಾಗಿದೆ. ಒಂದು ತಿಂಗಳೊಳಗೆ ಮತ್ತೆ ಶೇ.50 ರಷ್ಟು ಪಂಚಾಯತ್‌ಗಳಿಗೆ ನಿವೇಶನ ನೀಡುವ ಪ್ರಸ್ತಾವವೂ ಜಿಲ್ಲಾಡಳಿತಕ್ಕಿದೆ. ಕಸಗಳನ್ನು ಹೆಚ್ಚು ಉತ್ಪತ್ತಿ ಮಾಡುವ ಹೊಟೇಲು, ಅಪಾರ್ಟ್‌ಮೆಂಟ್, ಸಭೆ-ಸಭಾಂಗಣಗಳ ಮಾಲಕರ ಸಭೆ ನಡೆಸಿ ಕಸವನ್ನು ಅವರೇ ವಿಲೇವಾರಿ ಮಾಡುವಂತೆ ವ್ಯವಸ್ಥೆ ರೂಪಿಸಲಾಗುವುದು. ಈ ಬಗ್ಗೆ ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ನಡೆಸಿದೆ.
Related Articles
ಅಲೆವೂರಿನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿತ್ಯ 65ರಿಂದ 70 ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಪಾಲು 2ರಿಂದ 3 ಟನ್‌ನಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಪಾಲು 2ರಿಂದ 3 ಟನ್‌ನಷ್ಟಿದ್ದು, ಇದನ್ನು ಪ್ರತ್ಯೇಕಿಸಿದರೆ ಘಟಕದಲ್ಲಿ ಪ್ಲಾಸ್ಟಿಕ್ ಲ್ಯಾಂಡ್ ಫಿಲ್ಲಿಂಗ್ ಸೇರುವುದನ್ನು ತಪ್ಪಿಸಬಹುದು. ಮಾರಾಟ ಮಾಡಿ ಆದಾಯವನ್ನೂ ಗಳಿಸಬಹುದಾಗಿದೆ.
Advertisement
ಸದ್ಯದಲ್ಲೇ ಟೆಂಡರ್ಸ್ವತ್ಛತೆಯಲ್ಲಿ ಉಡುಪಿ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಸಕಲ ತಯಾರಿ ನಡೆಯುತ್ತಿದೆ. ಅಲೆವೂರು ಡಂಪಿಂಗ್ ಯಾರ್ಡ್‌ನಲ್ಲಿ ಬಯೋಮೈನಿಂಗ್ ಮಾಡುವ ಮೂಲಕ ತ್ಯಾಜ್ಯಗಳನ್ನು ಕರಗಿಸುವ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸದ್ಯದಲ್ಲೇ ಡಿಪಿಆರ್ ತಯಾರಿಸಿ ಟೆಂಡರ್ ಕರೆಯಲಾಗುವುದು.
-ಜಿ.ಜಗದೀಶ್, ಜಿಲ್ಲಾಧಿಕಾರಿ ಪುನೀತ್ ಸಾಲ್ಯಾನ್