Advertisement

ದೇಗುಲದ ಆಭರಣ ಕರಗಿಸಿ ಗೋಲ್ಡ್‌ ಬಾರ್‌ ತಯಾರು!

12:08 AM Sep 09, 2021 | Team Udayavani |

ಚೆನ್ನೈ: ತಮಿಳುನಾಡಿನ ಹಿಂದೂ ದೇಗುಲಗಳಿಗೆ ಭಕ್ತರು ಕೊಟ್ಟಿರುವ ಸಣ್ಣ ಗಾತ್ರದ ಚಿನ್ನಾಭರಣಗಳನ್ನು ಕರಗಿಸಲು ರಾಜ್ಯದ ದತ್ತಿ ಇಲಾಖೆ ಮುಂದಾಗಿದೆ.

Advertisement

ಕಳೆದ 10 ವರ್ಷಗಳಿಂದ ಹಿಂದೂ ದೇಗುಲಗಳಿಗೆ ಬಂದಿರುವ ಅಪಾರ ಪ್ರಮಾಣದ ಸಣ್ಣ ಗಾತ್ರದ ಚಿನ್ನದ ಆಭರಣಗಳು ಹಾಗೆಯೇ ಉಳಿದಿವೆ. ಅವನ್ನೆಲ್ಲ ಕರಗಿಸಿ, ಬಾರ್‌ ಮಾಡಿಸಿ ಅದನ್ನು ಬ್ಯಾಂಕ್‌ನಲ್ಲಿ ಇಡಲಾಗುವುದು. ಅಲ್ಲಿಂದ ಹಣ ತೆಗೆದು ಅದನ್ನು ಸರಕಾರ ದೇವಸ್ಥಾನಗಳ ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲಿದೆ ಎಂದು ಮುಜರಾಯಿ ಸಚಿವ ಶೇಖರ್‌ ಬಾಬು ತಿಳಿಸಿದ್ದಾರೆ.

ಹಿಂದೂ ದೇಗುಲಗಳನ್ನು ಡಿಎಂಕೆಯ ಲೂಟಿಯ ದಾಸ್ತಾನು ಕೇಂದ್ರವನ್ನಾಗಿಸಲು ತಮಿಳುನಾಡು ಸರಕಾರ ಹೊರಟಿದೆ. ಅಧಿಕಾರ ದುರ್ಬಳಕೆ ಮಾಡುತ್ತಿರುವ ತ.ನಾಡು ಸರಕಾರದ ವಿರುದ್ಧ ನಾವು ಕೋರ್ಟ್‌ ಮೆಟ್ಟಿಲೇರುತ್ತೇವೆ. ಈ ತಿಂಗಳಲ್ಲೇ ನಾನು ರಿಟ್‌ ಅರ್ಜಿ ಸಲ್ಲಿಸುತ್ತೇನೆ.-ಸುಬ್ರಹ್ಮಣ್ಯಂ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next