Advertisement

ಶಶಿಕಲಾ ಪ್ರಮಾಣ ವಚನಕ್ಕೆ ತಡೆಕೋರಿದ ಪಿಐಎಲ್‌ :ಇಂದು ಸುಪ್ರೀಂ ವಿಚಾರಣೆ

10:35 AM Feb 13, 2017 | Team Udayavani |

ಹೊಸದಿಲ್ಲಿ : ತಮಿಳು ನಾಡಿನಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವಂತೆಯೇ ಇಂದು ಸುಪ್ರೀಂ ಕೋರ್ಟ್‌, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್‌ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯನ್ನು ಕೋರಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ಬಹುತೇಕ ಕೈಗೆತ್ತಿಕೊಳ್ಳಲಿದೆ. 

Advertisement

ಶಶಿಕಲಾ ನಟರಾಜನ್‌ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಮೇಲಿನ ತುರ್ತು ವಿಚಾರಣೆಯನ್ನು ಕಳೆದ ವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿಸಾಸಕ್ತಿಯ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ.

ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌, ಜಸ್ಟಿಸ್‌ ಎನ್‌ ವಿ ರಮಣ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು ಕಳೆದ ವಾರ ಶಶಿಕಲಾ ನಟರಾಜನ್‌ ಅವರ ಅಕ್ರಮ ಆಸ್ತಿ ಪ್ರಕರಣದ ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. 

ಈ ಹಿನ್ನೆಲೆಯಲ್ಲಿ  ಚೆನ್ನೈ ನಿವಾಸಿ ಎನ್‌ಜಿಞ ಸತ್ತಾ ಪಂಚಾಯತ್‌ ಲ್ಯಾಕಂ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಸೆಂಥಿಲ್‌ ಕುಮಾರ್‌ ಅವರು ಶಶಿಕಲಾ ನಟರಾಜನ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ಕೋರಿ ಪಿಐಎಲ್‌ ದಾಖಲಿಸಿದ್ದರು. ಈ ಪಿಐಎಲ್‌ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next