Advertisement

ತಮಿಳುನಾಡು; ಕುರಂಗಣಿ ಬೆಟ್ಟ ಕಾಡ್ಗಿಚ್ಚಿನಲ್ಲಿ 9 ಚಾರಣಿಗರ ಸಜೀವ ದಹನ

11:08 AM Mar 12, 2018 | udayavani editorial |

ಥೇಣಿ. ಚೆನ್ನೈ : ತಮಿಳು ನಾಡಿನ ಥೇಣಿ ಜಲ್ಲೆಯ ಕುರಂಗಣಿ ಬೆಟ್ಟ ಪ್ರದೇಶದಲ್ಲಿ ಉಂಟಾಗಿರುವ ಕಾಡಿನ ಬೆಂಕಿಗೆ ನಿನ್ನೆ ಭಾನುವಾರ 9 ಮಂದಿ ಬಲಿಯಾಗಿದ್ದಾರೆ. ಇನ್ನೂ ಕೆಲವರು ಬೆಂಕಿಯಿಂದ ಆವೃತರಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ.

Advertisement

ಕಾಡಿನ ಬೆಂಕಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು,ನಾಲ್ವರು ಪುರುಷರು ಮತ್ತು ಒಂದು ಮಗು ಸೇರಿದೆ. ಒಟ್ಟು 27 ಮಂದಿಯನ್ನು ಕಾಡಿನ ಬೆಂಕಿಯಿಂದ ರಕ್ಷಿಸಲಾಗಿದೆ; ಇವರಲ್ಲಿ 10 ಮಂದಿ ಗಾಯಾಳುಗಳಾಗಿದ್ದಾರೆ; ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಕಾಡಿನ ಬೆಂಕಿಯಲ್ಲಿ ಸಿಲುಕಿಕೊಂಡ ಚಾರಣಿಗರು 8ರಿಂದ 30ರ ವಯೋಮಾನದವರು. ಇವರಲ್ಲಿ 9 ಮಂದಿ ಸುಟ್ಟು ಕರಕಲಾಗಿದ್ದಾರೆ.  ತೀವ್ರವಾಗಿ ಹಬ್ಬುತ್ತಿರುವ ಕಾಡಿನ ಬೆಂಕಿಯಿಂದಾಗಿ ರಕ್ಷಣಾ ಕಾರ್ಯಕರ್ತರಿಗೆ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. 

ಇಂದು ಸೋಮವಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಗರುಡ ಕಮಾಂಡೋ ದಳದ ಆರು ಕಮಾಂಡೋಗಳನ್ನು, ಭಾರತೀಯ ವಾಯು ಪಡೆಯ ಮೂರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಐಎಎಫ್ ನ ಇನ್ನೊಂದು ಹೆಲಿಕಾಪ್ಟರ್‌ ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಈ ವರೆಗೆ 27 ಮಂದಿಯನ್ನು ರಕ್ಷಿಸಲಾಗಿದೆ; ಗಾಯಾಳುಗಳಿಗೆ ವೈದ್ಯಕೀಯ ನೆರವನ್ನು ಒದಗಿಸಲಾಗಿದೆ  ಎಂದು ರಾಜ್ಯದ ಆರೋಗ್ಯ ಸಚಿವ  ಸಿ ವಿಜಯನಾಸ್ಕರ್‌ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next