Advertisement

ದ್ರಾವಿಡ ನಾಡಿನಲ್ಲಿ ಸ್ಟಾಲಿನ್ ಓಟ ಜೋರು: ಸಿಎಂ ಆಗಿ ಅಧಿಕಾರ ಸ್ವೀಕರಿಸಲು ಮುಹೂರ್ತ ಫಿಕ್ಸ್

12:43 PM May 02, 2021 | Team Udayavani |

ಚೆನ್ನೈ: ಕರುಣಾನಿಧಿ- ಜಯಲಲಿತಾ ಇಲ್ಲದೆ ನಡೆದ ಮೊದಲ ತಮಿಳುನಾಡು ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. 234 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಮುನ್ನಡೆ ಸಾಧಿಸಿದೆ.

Advertisement

ಇದುವರೆಗಿನ ಮತ ಎಣಿಕೆಯಲ್ಲಿ ಡಿಎಂಕೆ ಮೈತ್ರಿಕೂಟ 141 ಸ್ಥಾನ, ಎಐಎಡಿಎಂಕೆ ಕೂಟ 87 ಸ್ಥಾನ, ಇತರರು ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರ ಪಡೆಯಬೇಕಾದರೆ 118 ಸ್ಥಾನಗಳನ್ನು ಗೆಲ್ಲಬೇಕು. ಡಿಎಂಕೆ ಪಕ್ಷದ ಗೆಲುವು ಬಹುತೇಕ ಖಚಿತವಾಗುತ್ತಿದ್ದು, ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಯಾಗುವ ಸಿದ್ದತೆಯಲ್ಲಿದ್ದಾರೆ.

ಇದನ್ನೂ ಓದಿ:ಅಸ್ಸಾಂನಲ್ಲಿ ಕೇಸರಿ ಪಡೆ ಮೇಲುಗೈ : ಮುಖ್ಯಮಂತ್ರಿ ಸರ್ಬಾನಂದ 4400 ಮತಗಳ ಮುನ್ನಡೆ

ಮೇ 6 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

Advertisement

ಕೊಲತೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸ್ಟಾಲಿನ್ 16,031 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೂಡಾ ಮುನ್ನಡೆ ಸಾಧಿಸಿದ್ದಾರೆ. ನಟರಾದ ಕಮಲ್ ಹಾಸನ್ ಮುನ್ನಡೆಯಲ್ಲಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿರುವ ಖುಷ್ಬೂ ಹಿನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: ಮಸ್ಕಿಯಲ್ಲಿ ‘ಪ್ರತಾಪ’ ತೋರಿದ ತುರುವಿನಹಾಳ: ಕಮಲ ಪಕ್ಷದ ಆಪರೇಶನ್ ಗೆ ಹಿನ್ನಡೆ?

Advertisement

Udayavani is now on Telegram. Click here to join our channel and stay updated with the latest news.

Next