Advertisement

“ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ..”ಪೊಲೀಸ್ ಮೂಡಿಸಿದ ಶಿಕ್ಷಣ ಜಾಗೃತಿಗೆ ಸಿಎಂ ಶ್ಲಾಘನೆ

03:21 PM Apr 18, 2023 | Team Udayavani |

ಚೆನ್ನೈ: ಖಾಕಿ ತೊಟ್ಟು ಕಾನೂನು ಕಾಯಕವನ್ನು ಮಾಡುವ ಪೊಲೀಸರು, ಆರೋಪಿ, ಅಪರಾಧಿಗಳನ್ನು ಸೆರೆ ಹಿಡಿಯುವುದು ಮಾತ್ರವಲ್ಲದೆ ಸಮಾಜ ಮೆಚ್ಚುವ ಕಾಯಕವನ್ನೂ ಮಾಡುತ್ತಾರೆ.

Advertisement

ಈ ಮೇಲಿನ ಮಾತಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ಮಧುರೈ ಮೂಲದ ಪೆನ್ನಲೂರ್‌ಪೆಟ್ಟೈ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪರಮಶಿವಂ.

ಪರಮಶಿವಂ ಅವರು ಇತ್ತೀಚೆಗೆ ತಿದೀರ್ ನಗರ ಪ್ರದೇಶದಲ್ಲಿ ಕೃಷಿಯನ್ನು ಆವಲಂಬಿಸಿ ಜೀವಿಸುತ್ತಿರುವ ಬುಡಕಟ್ಟು ಕುಟುಂಬದ ಜನರನ್ನು ಭೇಟಿಯಾಗಿ, ಅವರ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಹೇಳಿದ್ದಾರೆ.

ಕೃಷಿ ಕಾರ್ಮಿಕರ ಕುಟುಂಬದ ಮಕ್ಕಳನ್ನು ಉದ್ದೇಶಿಸಿ, ಅವರ ಪೋಷಕರ ಬಳಿ “ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೆ ಅಥವಾ ಆಹಾರಕ್ಕಾಗಿ ಹಣ ಬೇಕಾದರೆ ಪೊಲೀಸ್ ಠಾಣೆಗೆ ಬನ್ನಿ. ನಾನು ಸಹಾಯ ಮಾಡಲು ಸಿದ್ಧ. ಈಗ, ಅವರಿಗೆ ಐದು ದಿನವೂ ಮೊಟ್ಟೆ ಮತ್ತು ಆಹಾರವನ್ನು ನೀಡಲಾಗುತ್ತದೆ. ದಯವಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ. 14 ವರ್ಷದವರೆಗೆ ಮಕ್ಕಳನ್ನು ಕಡ್ಡಾಯವಾಗಿ ಕಳುಹಿಸಿ. ನಿಮ್ಮ ಮಕ್ಕಳು ಶಾಲೆಗೆ ಹೋಗದಿದ್ದರೆ ನೀವು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ನಾನು ಸುಮ್ಮನಿರುವುದಿಲ್ಲ. ಇಂದು ಅಲ್ಲದಿದ್ದರೂ ನಾಳೆ ನಾನು ಅಪರಾಧಿಯನ್ನು ಹಿಡಿಯಬಹುದು ಬಳಿಕ ಬಿಡಬಹುದು ಆದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ, ನೀವೇ ಅವರ ಭವಿಷ್ಯಕ್ಕೆ ವಿಷ ಹಾಕಿದಂತೆ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಮೂಡನಂಬಿಕೆಗ ಜೋತು ಬೀಳಬೇಡಿ ಎಂದಿದ್ದಾರೆ.

ಅವರು ಹೇಳಿರುವ ಮಾತುಗಳು ವೈರಲ್‌ ಆಗಿದ್ದು, ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಯಾಗಿ ಬಂದಿದೆ.

Advertisement

ಸಬ್‌ಇನ್ಸ್‌ಪೆಕ್ಟರ್ ಪರಮಶಿವಂ ಅವರ ಶಿಕ್ಷಣ ಜಾಗೃತಿಗೆ ಸ್ವತಃ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್‌ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಬೆಳಗಿನ ಪತ್ರಿಕೆಯಲ್ಲಿ ಸಂತೋಷದ ಸುದ್ದಿಯನ್ನು ಓದಿದ್ದೇನೆ! ಅದನ್ನು ಇಲ್ಲಿ ನಾನು ಹಂಚಿಕೊಳ್ಳುತ್ತೇನೆ. ಪೊಲೀಸರ ಕೆಲಸ ಅಪರಾಧ ತಡೆಗಟ್ಟುವುದಷ್ಟೇ ಅಲ್ಲ, ಉತ್ತಮ ಸಮಾಜವನ್ನು ರೂಪಿಸುವಲ್ಲಿ ಅವರ ಪಾತ್ರವೂ ಇದೆ. ಬೆನ್ನಲೂರುಪೇಟೆಯ ಎಸ್.ಐ. ಪರಮಶಿವಂ ಅವರು ಶಿಕ್ಷಣದ ಪರವಾಗಿ ಮಾತನಾಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಶಿಕ್ಷಣ ಮಕ್ಕಳ ಹಕ್ಕು” ಎಂದು ಸಿಎಂ ಸ್ಟ್ಯಾಲಿನ್‌ ಟ್ವೀಟ್ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next