ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಚೆನ್ನೈ ಮೆಟ್ರೋ ಪ್ರಯಾಣ ದರವನ್ನು ಕಡಿತಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಮುಂಬರುವ ರಾಜ್ಯ ವಿಧಾನ ಸಭೆಗೆ ಮುಂಚಿತವಾಗಿ ಜನರ ಬೇಡಿಕೆಯಂತೆ ಮೆಟ್ರೋ ದರವನ್ನು ಕಡಮೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತಾಗಿ ಶನಿವಾರ(ಫೆ.20)ರಂದು ಪ್ರತಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು ಪ್ರಯಾಣಿಕರ ಒತ್ತಾಯದ ಮೇರೆಗೆ ಮೆಟ್ರೋ ಪ್ರಯಾಣ ದರವನ್ನು ಕಡಿತಗೊಳಿಸಲಾಗಿದೆ. ಹೊಸ ನಿಯಮದ ಅನ್ವಯ 2 K.M ವರೆಗಿನ ಮೆಟ್ರೋ ಪ್ರಯಾಣ ದರವನ್ನು 10 ರೂ. ಗಳಿಗೆ ನಿಗದಿಪಡಿಸಲಾಗಿದೆ. ಈ ನಿಯಮ ಫೆ. 22 ರಿಂದ ಜಾರಿಗೊಳ್ಳಲಿದೆ ಎಂದಿದ್ದಾರೆ.
ಪ್ರಸ್ತುತ ಜಾರಿಗೊಳಿಸಲಾಗಿರುವ ಹೊಸ ನಿಯಮದಲ್ಲಿ 2 ರಿಂದ 5 K.M ವ್ಯಾಪ್ತಿಯಲ್ಲಿ ಸಂಚಾರ ಮಾಡುವವರು 20 ರೂ. ಗಳನ್ನು ಭರಿಸಬೇಕಾಗುತ್ತದೆ ಹಾಗೂ 5 ಕ್ಕಿಂತ ಹೆಚ್ಚು K.M ದೂರ ಪ್ರಯಾಣ ಮಾಡುವವರು 30 ರೂಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಟೀಕೆ; BSP ಮಾಜಿ ಎಂಪಿ ವಿರುದ್ಧ ಬಿಜೆಪಿ ಉಪಾಧ್ಯಕ್ಷೆ ಶಾಜಿಯಾ ದೂರು
21 K.M ವರೆಗಿನ ಪ್ರಯಾಣಕ್ಕೆ 40 ರೂ. ಮತ್ತು 21 K.M ಗಿಂತಲೂ ಅಧಿಕ ದೂರ ಪ್ರಯಾಣಿಸುವವರಿಗೆ 50 ರೂ. ಗಳನ್ನು ನಿಗದಿಗೊಳಿಸಲಾಗಿದ್ದು, ಈ ನಡುವೆ QR ಕೋಡ್ ಮತ್ತು CMRL ಸ್ಮಾರ್ಟ್ ಕಾರ್ಡ್ ಗಳನ್ನು ಬಳಸುವ ಮೂಲಕ ಟಿಕೇಟ್ ಬುಕ್ ಮಾಡುವವರಿಗೆ 20% ರಿಯಾಯಿತಿಯನ್ನು ನೀಡುವುದಾಗಿ ಘೋಷಣೆಯಲ್ಲಿ ತಿಳಿಸಿದ್ದಾರೆ.