ತಿರುವನಂತರಪುರಂ: ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಎಡವಿದೆ. ಪುದುಚೇರಿ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮನೀಷ್ ಪಾಂಡೆ ಪಡೆ, ತಮಿಳುನಾಡು ವಿರುದ್ಧ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಬ್ಯಾಟಿಂಗ್ ವೈಫಲ್ಯ ಕಂಡಿತು. ರೋಹನ್ ಕದಂ ಮತ್ತು ಮನೀಷ್ ಪಾಂಡೆ ಹೊರತುಪಡಿಸಿ ಯಾವೊಬ್ಬ ಆಟಗಾರನು ಎರಡಂಕೆ ರನ್ ಗಳಿಸಲಿಲ್ಲ. ರೋಹನ್ 37 ರನ್ ಗಳಿಸಿದರೆ, ನಾಯಕ ಪಾಂಡೆ 40 ರನ್ ಗಳಿಸಿದರು. ತಂಡ ಕೇವಲ 122 ರನ್ ಗಳಿಗೆ ಆಲೌಟಾಯಿತು.
ಇದನ್ನೂ ಓದಿ:ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!
ಸುಲಭ ಗುರಿ ಬೆನ್ನತ್ತಿದ ತಮಿಳುನಾಡು ತಂಡ ಕೇವಲ ಎರಡು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಜಯ ಸಾಧಿಸಿತು. ಬಾಬಾ ಅಪರಿಜಿತ್ 51 ರನ್ ಗಳಿಸಿ ಅಜೇಯರಾದರೆ, ವಾಷಿಂಗ್ಟನ್ ಸುಂದರ್ 31 ರನ್ ಗಳಿಸಿದರು.
ಸತತ ಎರಡು ಪಂದ್ಯ ಗೆದ್ದ ತಮಿಳುನಾಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಕರ್ನಾಟಕ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ.