Advertisement

ನೀಟ್‌ ವಿರೋಧಿ ಮಸೂದೆ ಮತ್ತೆ ಅಂಗೀಕಾರ

09:12 PM Feb 08, 2022 | Team Udayavani |

ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆಯಿಂದ ವಿನಾಯ್ತಿ ನೀಡುವ ಮಸೂದೆಗೆ ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಮತ್ತೊಮ್ಮೆ ಅನುಮೋದನೆ ಸಿಕ್ಕಿದೆ.

Advertisement

ಈ ಹಿಂದೆ 2021ರ ಸೆಪ್ಟೆಂಬರ್‌ನಲ್ಲೇ ವಿಧಾನಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿತ್ತು. ಆದರೆ ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.

ಇದು ವಿದ್ಯಾರ್ಥಿ ವಿರೋಧಿ ಎಂದು ಅವರು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಶೇಷ ಅಧಿವೇಶನ ಕರೆದು, ಮಸೂದೆ ಮಂಡಿಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ:ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿಯನ್ನೇ ಸೋಲಿಸುತ್ತೇವೆ : ಕ್ಷತ್ರಿಯ ಮಹಾ ಒಕ್ಕೂಟ ಎಚ್ಚರಿಕೆ

ಅದರಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಸರ್ಕಾರ ಮಂಗಳವಾರ ಮಸೂದೆ ಮಂಡಿಸಿ, ಅನುಮೋದನೆ ಪಡೆದಿದೆ. ಬಿಜೆಪಿ ಈ ವೇಳೆ ಸಭಾತ್ಯಾಗ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next