Advertisement

Tamil Nadu ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಕನ್ಯಾಕುಮಾರಿ ಅಗ್ರಸ್ಥಾನ

12:46 PM May 08, 2023 | Team Udayavani |

ಚೆನ್ನೈ: ತಮಿಳುನಾಡು ಬೋರ್ಡ್ ಪರೀಕ್ಷೆ 2023 ನೇ ಸಾಲಿನ 12 ನೇ ತರಗತಿ ಫಲಿತಾಂಶವನ್ನು ಸೋಮವಾರ ಮೇ (8ರಂದು)ಪ್ರಕಟಿಸಿದೆ.

Advertisement

ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ (ಡಿಜಿಇ)  ಫಲಿತಾಂಶ ಪ್ರಕಟಿಸಿದೆ. 12 ನೇ ತರಗತಿ ಪರೀಕ್ಷೆಗೆ ಹಾಜರಾದ ಒಟ್ಟು 8,03,385 ವಿದ್ಯಾರ್ಥಿಗಳಲ್ಲಿ 94.03% ರಷ್ಟು ಉತ್ತೀರ್ಣರಾಗಿದ್ದಾರೆ.

ಕನ್ಯಾಕುಮಾರಿ ಜಿಲ್ಲೆ ಅತ್ಯಧಿಕ ಶೇಕಡಾ 97.05 ಶೇಕಡಾವನ್ನು ದಾಖಲಿಸಿದೆ. ಈ ಬಾರಿಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಲಕಿಯರು ಶೇಕಡಾ 96.38 ರಷ್ಟು ಉತ್ತೀರ್ಣರಾದರೆ ಶೇ.91.45ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ //tnresults.nic.in ನಿಂದ ಪರಿಶೀಲಿಸಬಹುದು.

Advertisement

ಈ ಮೊದಲು, ಫಲಿತಾಂಶಗಳನ್ನು ಮೇ 5 ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು ಆದರೆ ನೀಟ್ ಯುಜಿ (NEET UG 2023) ಪರೀಕ್ಷೆಯಿಂದಾಗಿ ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next