Advertisement

ತಮಿಳು ಭಾಷೆ ಶಾಶ್ವತವಾದದ್ದು, ತಮಿಳು ಸಂಸ್ಕೃತಿ ಜಾಗತಿಕವಾದದ್ದು: ಮೋದಿ

08:14 AM May 27, 2022 | Team Udayavani |

ಹೈದರಾಬಾದ್‌/ಚೆನ್ನೈ: “ತಮಿಳು ಭಾಷೆ ಶಾಶ್ವತ ವಾದದ್ದು, ತಮಿಳು ಸಂಸ್ಕೃತಿ ಜಾಗತಿಕವಾದದ್ದು.’

Advertisement

ಕೇಂದ್ರ ಸರ್ಕಾರದ ವಿರುದ್ಧ “ಹಿಂದಿ ಹೇರಿಕೆ’ಯ ಆರೋಪಗಳು ಕೇಳಿಬಂದಿರುವ ನಡುವೆಯೇ ಪ್ರಧಾನಿ ಮೋದಿ ಅವರು ಆಡಿರುವ ಮಾತುಗಳಿವು.

ಗುರುವಾರ ತಮಿಳುನಾಡಿನಲ್ಲಿ ಹಲವು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ನೆಲವೇ ವಿಶೇಷವಾದದ್ದು. ಇಲ್ಲಿನ ಜನ, ಸಂಸ್ಕೃತಿ, ಭಾಷೆ ಎಲ್ಲವೂ ಅದ್ಭುತವಾದದ್ದು. ತಮಿಳು ಭಾಷೆ ಚಿರ ಹಾಗೂ ಸಂಸ್ಕೃತಿ ಜಾಗತಿಕವಾದದ್ದು. ಈ ಭಾಷೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ.

ಇದಕ್ಕೆ ಪೂರಕವೆಂಬಂತೆ, ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿರುವ ಬನಾರಸ್‌ ಹಿಂದೂ ವಿವಿಯಲ್ಲಿರುವ ಸುಬ್ರಮಣ್ಯ ಭಾರತಿ ಅಧ್ಯಯನ ಪೀಠ ಸ್ಥಾಪನೆಯಾಗಿರುವ ಬಗ್ಗೆ ಹಾಗೂ ಸೆಂಟ್ರಲ್‌ ತಮಿಳ್‌ ಕ್ಲಾಸಿಕಲ್‌ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರದಿಂದಲೂ ಸಂಪೂರ್ಣ ಆರ್ಥಿಕ ನೆರವು ನೀಡಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಇನ್ನು ಮುಂದೆ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೇ ಪಡೆಯಬಹುದಾಗಿದೆ. ಇದರಿಂದ ತಮಿಳಿನ ಅನೇಕ ಯುವಕರಿಗೆ ಸಹಾಯವಾಗಲಿದೆ ಎಂದೂ ಮೋದಿ ತಿಳಿಸಿದ್ದಾರೆ.

Advertisement

ಹಲವು ಯೋಜನೆಗಳು: ತ.ನಾಡಿನಲ್ಲಿ ಲೈಟ್‌ ಹೌಸ್‌ ಯೋಜನೆಯನ್ವಯ ನಿರ್ಮಿಸಲಾದ 1,152 ಮನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ. ಸಿಎಂ ಸ್ಟಾಲಿನ್‌ ಸಮ್ಮುಖದಲ್ಲಿ 2,960 ಕೋಟಿ ರೂ. ವೆಚ್ಚದ 5 ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. 75 ಕಿ.ಮೀ. ಉದ್ದದ ಮದುರೈ-ತೇಣಿ ರೈಲ್ವೆ ಗೇಜ್‌ ಪರಿವರ್ತನೆ ಯೋಜನೆ ಹಾಗೂ ಚೆನ್ನೈನಲ್ಲಿ 1430 ಕೋಟಿ ರೂ. ವೆಚ್ಚದ ಮಲ್ಟಿ ಮೋಡಲ್‌ ಲಾಜಿಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ನೀಟ್‌ನಿಂದ ವಿನಾಯಿತಿಗೆ ಒತ್ತಾಯಿಸಿದ ಸಿಎಂ ಸ್ಟಾಲಿನ್‌ :

“ಹಿಂದಿಯಂತೆಯೇ ತಮಿಳು ಭಾಷೆಯನ್ನೂ ಅಧಿಕೃತ ಭಾಷೆ ಎಂದು ಘೋಷಿಸಿ. ಮದ್ರಾಸ್‌ ಹೈಕೋರ್ಟ್‌ನಲ್ಲೂ ತಮಿಳನ್ನು ಅಧಿಕೃತ ಭಾಷೆಯಾಗಿಸಿ’. ಪ್ರಧಾನಿ ಮೋದಿಯ ವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ತ.ನಾಡು ಮುಖ್ಯ ಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ವೇದಿಕೆಯಲ್ಲೇ ಈ ಆಗ್ರಹ ವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರೀಯ ವೈದ್ಯ ಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಿಂದ ತಮಿಳುನಾಡಿಗೆ ವಿನಾಯ್ತಿ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ. ಈ ಹಿಂದಿನಿಂದಲೂ ಡಿಎಂಕೆ ತಮಿಳಿಗೆ ಅಧಿಕೃತ ಮತ್ತು ಆಡಳಿತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಾ ಬಂದಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡಿದೆ.

ಪರಿವಾರವಾದಿ ಪಕ್ಷಗಳೇ ದೇಶದ ಶತ್ರು :

ತಮಿಳುನಾಡು ಭೇಟಿಗೂ ಮುನ್ನ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದ ಮೋದಿ ಅವರು ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ನ 20ನೇ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುಂಚೆ ಬೇಗುಂಪೇಟ್‌ ಏರ್‌ಪೋರ್ಟ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿವಾರವಾದಿ ಪಕ್ಷಗಳು ಯಾವತ್ತೂ ತಮ್ಮ ಕುಟುಂಬದ ಏಳಿಗೆಯನ್ನಷ್ಟೇ ನೋಡುತ್ತವೆ. ಹೀಗಾ ಗಿ, ಅಂಥ ಪಕ್ಷಗಳೇ ದೇಶದ ಅತಿದೊಡ್ಡ ಶತ್ರುಗಳು ಎಂದಿದ್ದಾರೆ. ಇದೇ ವೇಳೆ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಬಗ್ಗೆ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, “ಮೌಡ್ಯವನ್ನು ಅನುಸರಿಸುವ ಜನರು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಂಬಿಕೆಯಿ ಟ್ಟವನು. ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರೂ ಸಂತರಾಗಿದ್ದರೂ, ಅವರಿಗೆ ಮೂಢನಂಬಿಕೆಯಿಲ್ಲ. ಮೌಡ್ಯ ವ್ಯಕ್ತಿಗಳಿಂದ ನಾವು ತೆಲಂಗಾಣವನ್ನು ರಕ್ಷಿಸಬೇಕಿದೆ’ ಎಂದಿದ್ದಾರೆ.

ಸಿಎಂ ಕೆಸಿಆರ್‌ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮನೆಯ ವಾಸ್ತು ಬದಲಿಸಿದ್ದು, ಕ್ಯಾಂಪ್‌ ಆಫೀಸ್‌ ನವೀಕರಣ, ಫಾರ್ಮ್ ಹೌಸ್‌ನಲ್ಲಿ ಯಜ್ಞ ಆಯೋಜಿಸಿದ್ದನ್ನು ಟೀಕಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.

ತ.ನಾಡಲ್ಲಿ ಮೋದಿ ರೋಡ್‌ ಶೋ; ಭರ್ಜರಿ ಸ್ವಾಗತ :

ಗುರುವಾರ ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜವನ್ನು ಹಿಡಿದುಕೊಂಡು, ಘೋಷಣೆ ಕೂಗುತ್ತಾ ಸಾವಿರಾರು ಬಿಜೆಪಿ ಕಾರ್ಯಕರ್ತರು ಮೋದಿಯವರನ್ನು ಸ್ವಾಗತಿಸಿದ್ದಾರೆ. ಅಭಿಮಾ ನಿಗಳು “ವಣಕ್ಕಂ ಮೋದಿಜೀ’ ಎಂಬ ಫ‌ಲಕಗ ಳನ್ನು ಹಿಡಿದು, ಮೋದಿ ಪರ ಘೋಷಣೆ ಗಳನ್ನೂ ಕೂಗಿದ್ದಾರೆ. ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿವೆ. ಚೆನ್ನೈಗೆ ಬಂದಿಳಿದ ಬಳಿಕ ಮೋದಿ ಅವರು ರೋಡ್‌ಶೋವನ್ನೂ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next