ರಕ್ಷಿತ್ ಶೆಟ್ಟಿ ನಟನೆ “777 ಚಾರ್ಲಿ’ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದು ಚಿತ್ರ ತಾರಾಬಳಗಕ್ಕೆ ಸಂಬಂಧಿಸಿದ್ದು. ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಬಾಬ್ಬಿ ಸಿಂಹ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಭಾಗದ ಚಿತ್ರೀಕರಣ ಕೊಡೈಕೆನಾಲ್‌ನಲ್ಲಿ ನಡೆದಿದೆ.
“777 ಚಾರ್ಲಿ’ ಚಿತ್ರದ ಮೂಲಕ ಮೊದಲ ಬಾರಿಗೆಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಾಬ್ಬಿ ಸಿಂಹ ತಮಿಳಿನ “ಜಿಗರ್‌ಥಂಡಾ’ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದು, ಅವರ ನಟನೆಗಾಗಿ ರಾಷ್ಟ್ರಪ್ರಶಸ್ತಿಕೂಡಾ ಬಂದಿದೆ. ಈಗ “777 ಚಾರ್ಲಿ’ ಚಿತ್ರದಲ್ಲೂ ಬಾಬ್ಬಿ ಸಿಂಹ ಅವರಿಗೆ ಒಳ್ಳೆಯ ಪಾತ್ರವಿದೆಯಂತೆ. ಈ ಬಗ್ಗೆ ಮಾತನಾಡುವ ನಟ ರಕ್ಷಿತ್ ಶೆಟ್ಟಿ, “ಬಾಬ್ಬಿ ಸಿಂಹ ಅವರ ಪಾತ್ರ ಇಲ್ಲಿ ಪ್ರಮುಖವಾಗಿದೆ. ನನ್ನ ಜರ್ನಿಯಲ್ಲಿ ನಾನು ಅನೇಕರನ್ನು ಭೇಟಿಯಾಗುತ್ತೇನೆ. ಅದರಲ್ಲಿ ಬಾಬ್ಬಿ ಸಿಂಹ ಕೂಡಾ ಒಬ್ಬರು. ಅವರ ಭಾಗದ ಚಿತ್ರೀಕರಣ ಕೊಡೈಕೆನಾಲ್‌ನಲ್ಲೇ ನಡೆದಿದೆ’ ಎನ್ನುತ್ತಾರೆ.
ಇನ್ನು, “777 ಚಾರ್ಲಿ’ ಒಂದು ಜರ್ನಿ ಸಬೆjಕ್ಟ್. ಅದೇಕಾರಣದಿಂದ ರಕ್ಷಿತ್ ಹಲವು ರಾಜ್ಯಗಳನ್ನು ಈ ರಕ್ಷಿತ್ ಸುತ್ತುತ್ತಿದ್ದಾರೆ. “777 ಚಾರ್ಲಿ’ ಒಂದು ಜರ್ನಿ ಸಬ್ಜೆಕ್ಟ್. ಹಾಗಾಗಿ, ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡೇ ಬರಬೇಕಾದ ಅನಿವಾರ್ಯತೆಕತೆಯಲ್ಲಿರುವಕಾರಣ ಚಿತ್ರೀಕರಣ ದಿನಗಳಕೂಡಾ ಹೆಚ್ಚಾಗುತ್ತಿವೆ ಎನ್ನುವುದು ರಕ್ಷಿತ್ ಶೆಟ್ಟಿ ಮಾತು. ಗೋವಾ, ಗುಜರಾತ್, ರಾಜಸ್ತಾನ್, ಪಂಜಾಬ್, ಹಿಮಾಚಲ ಪ್ರದೇಶ,ಕಾಶ್ಮೀರಗಳಲ್ಲಿ “777 ಚಾರ್ಲಿ’ ಚಿತ್ರೀಕರಣ ನಡೆಯಲಿದೆ. ಇದು ಮನುಷ್ಯ ಮತ್ತು ಶ್ವಾನವೊಂದರ ನಡುವಿನ ಬಾಂಧವ್ಯದಕಥೆಯ ಜೊತೆಗೆ ಹಲವು ಅಂಶಗಳನ್ನು ಹೊಂದಿರುವುದರಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಬೇಕಿದೆ “777′ ಚಾರ್ಲಿ’100 ದಿನಗಳ ಚಿತ್ರೀಕರಣ ದಾಟಿ ಮುನ್ನಡೆಯುತ್ತಿದೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ ಬಾಕಿ ಇದೆ. ರಕ್ಷಿತ್ ಶೆಟ್ಟಿ ಹೇಳುವಂತೆ “ಚಾರ್ಲಿ’ಗೆ 140ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಆಗುವ ಸಾಧ್ಯತೆ ಇದೆ. .ಈಹಿಂದೆ ರಕ್ಷಿತ್ ಶೆಟ್ಟಿಯವರ “ಅವನೇ ಶ್ರೀಮನ್ನಾರಾಯಣ’ ಚಿತ್ರ200ಕ್ಕೂ ಹೆಚ್ಚು ದಿನಗಳಕಾಲ ಚಿತ್ರೀಕರಣವಾಗಿತ್ತು.ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರು. ಪುಷ್ಕರ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.