Advertisement
ಈ ಹುಣಸೆ ಗೊಜ್ಜು ಇದು ಕರ್ನಾಟಕದ ಪ್ರಮುಖವಾದ ಪಾಕ ವಿಧಾನವಾಗಿದ್ದು, ಸವಿಯಲು ಹೆಚ್ಚು ಖುಷಿಕೊಡುತ್ತದೆ. ಹುಣಸೆ ಹಣ್ಣಿನ ರಸ, ಬೆಲ್ಲ ಹಾಗೂ ಖಾರದಿಂದ ತಯಾರಾಗುವ ಈ ಹುಣಸೆ ಗೊಜ್ಜಿನೊಂದಿಗೆ ಪೊಂಗಲ್ ಅಥವಾ ಬಿಸಿ ಅನ್ನದೊಂದಿಗೆ ಸವಿಯಬಹುದು. ಹುಣಸೆಗೊಜ್ಜಿನಲ್ಲಿ ಖಾರ,ಹುಳಿ,ಸಿಹಿಯೂ ಸಮ ಪ್ರಮಾಣದಲ್ಲಿರುವುದರಿಂದಾಗಿ ಹೆಚ್ಚು ರುಚಿಯಾಗಿರುತ್ತದೆ. ಸವಿಯಲು ಆಹ್ಲಾದಕಾರವಾಗಿರುತ್ತದೆ. ಈ ಮಾಡುವ ವಿಧಾನವನ್ನು ಇಲ್ಲಿ ನೋಡಬಹುದಾಗಿದೆ.
ಸಾಮಗ್ರಿಗಳು
ನೀರು- 1,1/2 ಕಪ್
ಎಣ್ಣೆ -1, 1/2 ಚಮಚ
ಸಾಸಿವೆ -1 ಚಮಚ
ಜೀರಿಗೆ -1 ಚಮಚ
ಹಸಿ ಮೆಣಸಿನ ಕಾಯಿ- 1/4 ಕಪ್.
ಕರಿ ಬೇವು – 10-15
ಇಂಗು -1/4 ಟೀ ಚಮಚ
ಬೆಲ್ಲ -1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನ ತುರಿ- 1/4 ಕಪ್
ಕೊತ್ತಂಬರಿ ಸೊಪ್ಪು -1,
1/2 ಟೇಬಲ್ ಚಮಚ ಮಾಡುವ ವಿಧಾನ
ಪಾತ್ರೆಗೆ ಹುಣ ಸೆ ಹಣ್ಣನ್ನು ಹಾಕಿ , ಅರ್ಧ ಕಪ್ ನೀರನ್ನು ಸೇರಿಸಿ.ರಸ ಹೀರು ವಂತೆ ಚೆನ್ನಾಗಿ ಕಿವುಚಿಕೊಳ್ಳಿ . ಅನಂತರ ಹದಿನೈದು ನಿಮಿಷಗಳ ಕಾಲ ನೆನೆಯಿಡಿ. ಇನ್ನೊಂದು ಕಪ್ನಲ್ಲಿ ಹಿಂಡಿ ರಸವನ್ನು ತೆಗೆಯಿರಿ. ಅನಂತರ ಒಂದು ಪಾತ್ರೆ ಯಲ್ಲಿ ಎಣ್ಣೆ ಯನ್ನು ಹಾಕಿ ಬಿಸಿ ಮಾಡಿ ಕೊಳ್ಳಿ,ಅದಕ್ಕೆ ಸ್ವಲ್ಪ ಸಾಸಿವೆ,ಜೀರಿಗೆ ಹಾಕಿ ಹುರಿ ಯಿರಿ.ಬಳಿಕ ಹಸಿ ಮೆಣಸು, ಕರಿಬೇವು ಸಹಿತ ಇಂಗು ಹುಣಸೆ ರಸ ವನ್ನು ಸೇರಿಸಿಕೊಳ್ಳಬೇಕು.ಅದಕ್ಕೆ ಒಂದು ಕಪ್ ನೀರು ಹಾಕಿ ಚೆನ್ನಾಗಿ ತಿರುವಿ.ಐದು ನಿಮಿಷದ ಬಳಿಕ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿನಂತರ ತೆಂಗಿನ ತುರಿ,ಉಪ್ಪನ್ನು ಬೆರೆಸಿ ಹತ್ತು ನಿಮಿಷ ಬೇಯಲು ಬಿಡಿ, ಅನಂತರ ಹುಣಸೆ ಗೊಜ್ಜು ಸವಿಯಲು ಸಿದ್ಧ.