Advertisement

ತಾಲೂಕಿಗೆ ಉತ್ತಮ ನಾಯಕತ್ವದ ಅಗತ್ಯವಿದೆ

12:18 PM May 10, 2017 | Team Udayavani |

ಪಿರಿಯಾಪಟ್ಟಣ: ತಾಲೂಕಿಗೆ ಒಬ್ಬ ಉತ್ತಮ ಹೋರಾಟಗಾರ ಮನೋಭಾವದ ನಾಯಕತ್ವದ ಅಗತ್ಯವಿದೆ ಎಂದು ಶೆಟ್ಟಹಳ್ಳಿ ಗ್ರಾಪಂ ಸದಸ್ಯ ಧರ್ಮೇಶ್‌ ಹೇಳಿದರು. 

Advertisement

ತಾಲೂಕಿನ ಕಿತ್ತೂರಮ್ಮ ದೇವಾಲಯದ ಆವರಣದಲ್ಲಿ  ಕಿತ್ತೂರು ಸುತ್ತುಮುತ್ತಲ ಗ್ರಾಮಗಳ ಮುಖಂಡರೊಂದಿಗೆ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಕೆ.ಎನ್‌. ಸೋಮಶೇಖರ್‌ ಸಮಾಲೋಚನಾ ಸಭೆಯಲ್ಲಿ ಮಾತನಾಡಿ,  ಸೋಮಶೇಖರ್‌ ಜಾತ್ಯತೀತ ಮನೋಭಾವದ ಹೋರಾಟಗಾರರಾಗಿದ್ದು ರೈತರ ಪರವಾಗಿ ಪರಿಸರ ಪರವಾಗಿ ಅನೇಕ ಹೋರಾಟ ಮಾಡಿದ್ದಾರೆ.

ಇಂತಹ ವ್ಯಕ್ತಿತ್ವದ ನಾಯಕತ್ವಕ್ಕೆ ಪûಾತೀತವಾಗಿ ತಾಲೂಕಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.ರಾವಂದೂರು ಜೆಡಿಎಸ್‌ ಮುಖಂಡ ಹೊಸಹಳ್ಳಿ ಕುಮಾರ್‌ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್‌ ಪಕ್ಷಕ್ಕೆ 2 ಬಾರಿ ಸೋಲು ಉಂಟಾಗಿದ್ದು 10 ವರ್ಷಗಳಿಂದ ವಿಧಾಸಭಾ ಕ್ಷೇತ್ರದಲ್ಲಿ ಅಧಿಕಾರ ವಂಚಿತರಾಗಿದ್ದೇವೆ.

ಈ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆಯ ಅಗತ್ಯತೆ ಇದ್ದು ಪರ್ಯಾಯ ನಾಯಕರಾಗಿ ಕೆ.ಎನ್‌.ಸೋಮಶೇಖರ್‌ ಈ ಸ್ಥಾನ ತುಂಬಲಿದ್ದಾರೆ ಎಂದು ತಿಳಿಸಿದರು. ಜೆಡಿಎಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿ ಕೌಲನಹಳ್ಳಿ ಸೋಮಶೇಖರ್‌ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿಗೆ ರೈತರ ಸಮಗ್ರ ಅಭಿವೃದ್ಧಿಯೇ ನನ್ನ ಕನಸಾಗಿದ್ದು.

ಪರಿಸರ ಕಾಳಜಿ ಮತ್ತು ರೈತ ಪರಹೋರಾಟಗಳಲ್ಲಿ ಭಾಗಿಯಾಗಿದ್ದ ನನಗೆ ಇಲ್ಲಿನ ಜನರ ಉತ್ಸಾಹ ಮತ್ತು ಪ್ರೋತ್ಸಾಹ ರಾಜಕೀಯ ಕಾಳಜಿಯನ್ನು ಬೆಳೆಸುತ್ತಿದೆ. ಈಗಾಗಲೆ ಈ ಬಗ್ಗೆ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ರಾಜಾÂಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಇದರಂತೆ ಗ್ರಾಮಗಳ ಮುಖಂಡರ ಸಭೆಗಳ ಮೂಲಕ ಅಭಿಪ್ರಾಯ ಸಂಗ್ರಹಣೆ ಕಾರ್ಯದಲ್ಲಿ ನಿರತರಾಗಿದ್ದೇನೆ ಎಂದರು.

Advertisement

ಜೆಡಿಎಸ್‌ ಗ್ರಾಮಾಂತರ ಉಪಾಧ್ಯಕ್ಷ ಮಲ್ಲೇಶ್‌,  ವಿ.ಜಿ.ಕೊಪ್ಪಲು ಮಹದೇವ್‌, ಐತನಹಳ್ಳಿ ಮಹೇಂದ್ರ, ಗಳನಕೆರೆ ಮಂಜು, ಲೋಕೇಶ್‌, ಯಜಮಾನ್‌ ಸ್ವಾಮಿ, ಕಗ್ಗಳಿಕೊಪ್ಪಲು ಗ್ರಾಮದ ಚಲುವಶೆಟ್ಟಿ, ವೆಂಕಟೇಶ್‌, ಪಾಪಣ್ಣ, ಶ್ರೀನಿವಾಸ್‌, ಸುಂಡವಾಳುಮಹದೇವ್‌,  ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next