Advertisement
ನದಿ ಪಾತ್ರಗಳಲ್ಲಿ ಉಪ್ಪು ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿ ಕಾಡ ತೊಡಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಾವಿ , ಕೆರೆಗಳು ಬತ್ತಿಹೋಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲಾಗದ ಜನರು ನೀರಿಗೋಸ್ಕರ ಹಪ ಹಪಿಸುತ್ತಿದ್ದಾರೆ. ಕುಂದಾಪುರ ತಾಲೂಕಿನ 56 ಗ್ರಾ.ಪಂ.ಗಳಲ್ಲಿ ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸುವಂತೆ ಆಯಾ ಗ್ರಾ.ಪಂ. ಪಿಡಿಒಗಳು ತಾ.ಪಂ.ನಲ್ಲಿ ತಮ್ಮ ವ್ಯಾಪ್ತಿಯ ನೀರಿನ ಬೇಡಿಕೆಯನ್ನು ನೀಡಿದ್ದಾರೆ.
ನೀರು ಸರಬರಾಜು
ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಬೇಗನೆ ಎದುರಾಗುವ ಸಾಧ್ಯತೆ ಇದ್ದು ತಾಲೂಕಿನ ಬಹುತೇಕ ಗ್ರಾ.ಪಂ.ಗಳು ಟ್ಯಾಂಕರ್ ಮೂಲಕ ನೀರನ್ನು ಒದಗಿಸುವಂತೆ ತಾಲೂಕು ಟಾಸ್ಕ್ಪೋರ್ಸ್ ಸಮಿತಿಗೆ ನೀಡಿದ್ದಾರೆ. ಕೊಲ್ಲೂರು, ಅಂಪಾರು, ಮೂಡುಬಗೆ, ಕಿರಿಮಂಜೇಶ್ವರ, ಶಂಕರನಾರಾಯಣ, ಹಟ್ಟಿಯಂಗಡಿ, ಖಂಬದಕೋಣೆ ಈಗಾಗಲೇ ಬೇಡಿಕೆ ಯನ್ನು ನೀಡಿದೆ. ಕಳೆದ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಿದ್ದು, ಮೇ 19ರ ತನಕ ನೀರು ಸರಬರಾಜಾಗಿತ್ತು. ಒಟ್ಟು 37 ಗ್ರಾ.ಪಂ. ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಕಟ್ಟೆ, ಅಬ್ಬಿಗುಡ್ಡಿ, ದುರ್ಗಾನಗರ, ಉದಯ ನಗರ, ದಾಸರಬೆಟ್ಟು, ಸೌಕೂರು, ಮದಗ, ಕೌಂಜೂರುಗಳಲ್ಲಿ, ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ನಾಯಕವಾಡಿ ಜನತಾ ಕಾಲೋನಿ, ಮಂಕಿ ಶಾಲೆಯ ಬಳಿ ಹಾಗೂ ಜನತಾ ಕಾಲನಿ, ಕೊಡಪಾಡಿ, ಗುಜ್ಜಾಡಿ ಕಳಿಹಿತ್ಲು, ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಭಗತ್‌ನಗರ, ಮಂಚುಗೋಡು, ಖಂಬದಕೋಣೆ ಗ್ರಾ.ಪಂ. ವ್ಯಾಪ್ತಿಯ ಹಳಗೇರಿ, ಹೇರಂಜಾಲು, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಜನ್ಸಾಲೆ, ಹೊಂಬಾಡಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿ, ಯಡಾಡಿಗಳಲ್ಲಿ ಅತಿ ಹೆಚ್ಚು ಟ್ಯಾಂಕರ್ ನೀರು ಸರಬರಾಜಾಗಿತ್ತು. ಈ ಬಾರಿ ಬಹುತೇಕ ಎಪ್ರಿಲ್ ಮೊದಲ ವಾರದಲ್ಲಿ ನೀರು ಸರಬರಾಜು ಆರಂಭವಾಗಲಿದೆ. ಕಿಂಡಿ ಅಣೆಕಟ್ಟುಗಳಲ್ಲಿ
ನೀರು ಸೋರಿಕೆ
ಅಂಪಾರು ಮೂಡುಬಗೆಯ ಶೇಡಿನ ಕೊಡ್ಲು ನಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟುವಿನಲ್ಲಿ ಈ ಬಾರಿ ನೀರು ಸೋರುವಿಕೆಯಿಂದಾಗಿ ಅಣೆಕಟ್ಟು ಬರಿದಾಗಿದೆ ಅಣೆಕಟ್ಟು ಪ್ರದೇಶದಲ್ಲಿ ನೀರು ಬರಿದಾಗಿರು ವುದರಿಂದ ಪರಿಸರದ ಜಲ ಮೂಲಗಳು ಬತ್ತಿಹೋಗಲು ಆರಂಭವಾಗಿ ರುವುದರಿಂದ ಈ ಬೇಸಗೆಯಲ್ಲಿ ಇಲ್ಲಿನ ಕೆರೆ ಬಾವಿಗಳು ಬತ್ತುವ ಸಾಧ್ಯತೆ ಇದೆ. ಇದರಿಂದಾಗಿ ಕುಡಿಯುವ ನೀರ ಅಭಾವ ಈ ಗ್ರಾಮಗಳಲ್ಲಿ ಕಂಡುಬರುವ ಸಾಧ್ಯತೆ ಇದೆ.
Related Articles
Advertisement
ಬೇಸಗೆ ಹತ್ತಿರ ಬಂದಂತೆ ನೀರಿನ ಬರ ಎದ್ದು ಕಾಣುತ್ತಿದೆ. ತಾಲೂಕಿನ ವಿವಿಧ ಗ್ರಾ.ಪಂ.ಗಳಿಂದ ಕುಡಿಯುವ ನೀರಿನ ಬೇಡಿಕೆ ಬಂದಿದೆ. ಈ ಕುರಿತು ಪ್ರತಿ ವಾರ ಸಮತಿ ಸಭೆ ಕರೆದು ಅತಿ ತುರ್ತಾಗಿ ನೀರಿನ ಆವಶ್ಯಕತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿ ಬೋರ್‌ವೆಲ್ ಹಾಗೂ ಪೈಪ್‌ಲೈನ್ ವಿಸ್ತರಣೆ ಕಾಮಗಾರಿ, ಬಾವಿ ಹಾಗೂ ಕೆರೆಗಳ ಹೂಳೆತ್ತುವಿಕೆ ಮೊದಲಾದ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಶಸ್ತÂ ನೀಡಲಾಗುವುದು.– ಜಿ.ಎಂ. ಬೋರ್ಕರ್, ತಹಶೀಲ್ದಾರರು ಕುಂದಾಪುರ – ಉದಯ ಆಚಾರ್ ಸಾಸ್ತಾನ