Advertisement

ತಾಪಂ ರದ್ಧತಿ ಬೇಡ; ಚೈತನ್ಯ ತುಂಬಿ

06:29 PM Jan 23, 2021 | Team Udayavani |

ಕಾರಟಗಿ: ರಾಜ್ಯ ಬಿಜೆಪಿ ಸರ್ಕಾರ ತಾಲೂಕು ಪಂಚಾಯಿತಿಯನ್ನು ರದ್ದು ಮಾಡಲು ಸಿದ್ಧತೆ ನಡೆಸುತ್ತಿರುವುದು ಖಂಡನೀಯ. ಇದು ಒಂದು ರಾಜಕೀಯ ಹುನ್ನಾರ ಆಗಿದೆ..

Advertisement

ಹೀಗೆ ತಮ್ಮ ಅಸಮಾಧಾನ ಹೊರಹಾಕಿದವರು ಕಾರಟಗಿ ತಾಪಂ ಅಧ್ಯಕ್ಷ ಪ್ರಕಾಶ ಬಾವಿ ಅವರು. ತಾಲೂಕು ಪಂಚಾಯಿತಿಯನ್ನು ರದ್ದು ಪಡಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿರುವ ಸಂದರ್ಭದಲ್ಲಿ “ತಾಪಂ ರದ್ಧತಿ ಆಗಬೇಕೇ ಅಥವಾ ಬೇಡವೇ?’ ಎಂಬುದರ ಬಗ್ಗೆ “ಉದಯವಾಣಿ’ ಜತೆ ಅವರು ಅಭಿಪ್ರಾಯ ಹಂಚಿಕೊಂಡರು.

ಜಿಲ್ಲಾ ಹಂತದಲ್ಲಿ ಈ ಚಿಂತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ತಾಪಂ ಅನ್ನು ರದ್ದುಪಡಿಸಿ ತಾಲೂಕು ಬೋರ್ಡ್‌ ಮಾಡಿ ಪಕ್ಷದ ಕಾರ್ಯಕರ್ತರನ್ನು ನಾಮಕೆವಾಸ್ತೆ ನಾಮನಿರ್ದೇಶನ ಮಾಡಿ ಸಂಪೂರ್ಣ ತಾಲೂಕನ್ನು ಶಾಸಕರ ಹಿಡಿತಕ್ಕೆ ನೀಡಲು ಮಾಡುತ್ತಿರುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಆರೋಪಿಸಿದರು.

ತಾಪಂ ಪಾತ್ರ ಪ್ರಮುಖ: ತಾಪಂ ವ್ಯವಸ್ಥೆಯನ್ನು ರದ್ದು ಪಡಿಸುವುದರ ಬದಲಾಗಿ ಅದಕ್ಕೆ ಶಕ್ತಿ ತುಂಬಬೇಕಿದೆ. ಅಧಿ ಕಾರವನ್ನೂ ಹೆಚ್ಚಿಸಿ, ಬಲವರ್ಧನೆ ಮಾಡುವ ಕೆಲಸ ಮಾಡಬೇಕಿದೆ. ಜನರ ದೃಷ್ಟಿಯಲ್ಲಿ ಎಲ್ಲ ಪಂಚಾಯತ್‌ ವ್ಯವಸ್ಥೆಗಿಂತಲೂ ತಾಪಂ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಹಳ್ಳಿಗಳಲ್ಲಿ ಸಾಮಾನ್ಯ ಜನರು ತಾಲೂಕು ಮಟ್ಟದ ಇಲಾಖೆಗಳನ್ನು ಸಂಪರ್ಕಿಸಲು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಗ್ರಾಪಂ ಸದಸ್ಯರ ಮೂಲಕ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಅಸಾಧ್ಯ.

ತಾಪಂಗೂ ಇದೆ ಅಧಿಕಾರ: ಜಿಪಂ ಸದಸ್ಯರನ್ನು ಸಂಪರ್ಕಿಸಲು ಎಲ್ಲರಿಗೂ ಸಾಧ್ಯವಾಗಲ್ಲ. ಹೀಗಾಗಿ ಜನರಿಗೆ ತಾಪಂ ಸದಸ್ಯರು ನೇರವಾಗಿ ಸಂಪರ್ಕಕ್ಕೆ ಸಿಗುತ್ತಾರೆ. ಆ ಮೂಲಕ ತಾಲೂಕು ಮಟ್ಟದ ಇಲಾಖೆ ಅ ಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಮತ್ತು ಕೆಲಸ ಕಾರ್ಯ ಪೂರೈಸಿಕೊಳ್ಳುತ್ತಾರೆ. ಹೀಗಾಗಿ ತಾಪಂ ವ್ಯವಸ್ಥೆ ಅತ್ಯಂತ ಮುಖ್ಯವಾಗಿದೆ. ತಾಪಂಗೆ ಅಧಿ  ಕಾರವಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ತಾಪಂಗೆ ತನ್ನದೇ ಆದ ಅಧಿ ಕಾರಗಳಿವೆ. ಜಿಲ್ಲಾ ಮಟ್ಟದಲ್ಲಿ ಜಿಪಂಗೆ ಇರುವಷ್ಟೇ ಅಧಿ ಕಾರ ತಾಲೂಕು ಮಟ್ಟದಲ್ಲಿ ತಾಪಂಗಿದೆ. ತಾಪಂಗೆ ಅನುದಾನಗಳ ಕೊರತೆಇದ್ದರೂ ಅನುಷ್ಠಾನ ಇಲಾಖೆಗಳಲ್ಲಿರುವ ಅನುದಾನ ಬಳಸಿಕೊಳ್ಳುವ ಅವಕಾಶವಿದೆ. ಆದರೆ ಅವುಗಳನ್ನು ಬಳಸಿಕೊಳ್ಳುವ ಜ್ಞಾನ ಸದಸ್ಯರಿಗೆ ಇರಬೇಕು.

Advertisement

ಇದನ್ನೂ ಓದಿ:400 ಕೋಟಿ ರೂ. ಅನುದಾನಕ್ಕೆ ಮನವಿ

ಸರಕಾರ ಕೂಡ ತಾಪಂಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಿ ಬಲವರ್ಧನೆ ಮಾಡಬೇಕಾಗಿದೆ. ತಾಲೂಕುಪಂಚಾಯತಿ ವ್ಯವಸ್ಥೆ ರದ್ಧತಿ ಮಾಡದೆ ಉಳಿಸಲೇಬೇಕು.  ನನ್ನ ಸದಸ್ಯತ್ವದ ಅಧಿ ಕಾರ ಅವಧಿಯಲ್ಲಿ ಅನುದಾನಗಳ ಜತೆಗೆ ವಿವಿಧ ಇಲಾಖೆಗಳ ಅನುದಾನ ಹಾಗೂಮಹಾತ್ಮಾ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 4 ಕೋಟಿಗೂ ಹೆಚ್ಚು ರೂ.ಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಗ್ರಾಪಂ ಅಧ್ಯಕ್ಷರಿಗೆ ನೀಡಿರುವ ಅಧಿ  ಕಾರವನ್ನು ತಾಪಂ ಸದಸ್ಯರಿಗೂ ನೀಡಿದರೆ ಅಭಿವೃದ್ಧಿ ಕಾರ್ಯಗಳಲ್ಲಿ ಬದಲಾವಣೆ ತರಬಹುದು. ತಾಪಂ ಇರಲೇಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ದಿಗಂಬರ ಎನ್‌.ಕುರ್ಡೆಕರ

Advertisement

Udayavani is now on Telegram. Click here to join our channel and stay updated with the latest news.

Next