Advertisement
ತಾಪಂ ಆಡಳಿತಾಧಿಕಾರಿ ಎಚ್.ಸಿ.ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಮಾಹಿತಿ ನೀಡಿದರು. ತಾಲೂಕಿನಲ್ಲಿ 366 ಅಂಗನವಾಡಿಗಳಿದ್ದು, ಈಗಾಗಲೇ ಮನುಗನಹಳ್ಳಿ ಗ್ರಾಪಂನ ಆರು ಕೇಂದ್ರಗಳನ್ನು ಬಾಲ ಸ್ನೇಹಿ ಕೇಂದ್ರಗಳನ್ನಾಗಿಸಿದ್ದಾರೆ. ಉತ್ತಮವಾಗಿ ರುವುದನ್ನು ಹೊರತುಪಡಿಸಿ ಉಳಿದಂತೆ ಮೊದಲ ಹಂತದಲ್ಲಿ 195 ಅಂಗನವಾಡಿಗಳನ್ನು ಮಕ್ಕಳ ಆಕರ್ಷಣೆ ಗೊಳ್ಳುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
Related Articles
Advertisement
ನಗರದ ಜಗಜೀವನರಾಂ ಭವನ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಅನುದಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆಂದು ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.
ಕಳಪೆ ಕಾಮಗಾರಿ ಎಚ್ಚರ: ಬಿಳಿಕೆರೆ ಭಾಗದ ವಡ್ಡರಹಳ್ಳಿ ಹಾಗೂ ಇತರೆಡೆ ಜಲಜೀವನ್ ಮಿಷನ್ ಯೋಜನೆಯ 10.28 ಕೋಟಿ ವೆಚ್ಚದ 28ರ ಕಾಮಗಾರಿಗಳ ಪೈಕಿ 24 ಪೂರ್ಣಗೊಂಡಿವೆ ಎಂದು ಎಇಇ ಮಹೇಶ್‌ರ ಮಾಹಿತಿಗೆ ಕೆಲ ಕಾಮಗಾರಿ ಕಳಪೆಯಾಗಿದೆ ಎಂಬ ದೂರು ಬಂದಿದೆ. ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಡೆಸ ಬೇಕೆಂದು ಆಡಳಿತಾಧಿಕಾರಿ ಎಚ್.ಸಿ.ನಂದ ಕಟ್ಟುನಿಟ್ಟಿನ ಆದೇಶಿಸಿದರೆ, ಹರೀನಹಳ್ಳಿ ಕುಡಿಯುವ ನೀರಿನ ಯೋಜನೆಯನ್ನೆಕೆ ಪೂರ್ಣಗೊಳಿಸಿಲ್ಲ ವೆಂದು ಪ್ರಶ್ನಿಸಿ ಅಗತ್ಯಕ್ರಮ ಗೊಳ್ಳುವಂತೆ ಇಒಗೆ ಸೂಚನೆ ನೀಡಿದರು.
ಜಿಪಂ ಎಂಜಿನಿಯರಿಂಗ್ ಉಪವಿಭಾಗವು ಹೊಸ ಗ್ರಾಪಂಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಎಸ್ಟಿಮೇಟ್ ತಯಾರಿಸಬೇಕೆಂದು ಎಇಇ ಪ್ರಭಾಕರ್‌ಗೆ ಹಾಗೂ ಎಲ್ಲಾ ಇಲಾಖೆಗಳವರು ಮೇ 10ರೊಳಗೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಇಓ ಗಿರೀಶ್ ಸೂಚಿಸಿದರು.
11 ಕ್ಷಯ ಪತ್ತೆ: ತಾಲೂಕಿನಲ್ಲಿ 11 ಕ್ಷಯ, 3 ಕುಷ್ಠ ರೋಗ ಪತ್ತೆಯಾಗಿದೆ. 73 ಉಪ ಕೇಂದ್ರಗಳ ಪೈಕಿ 44 ಸಮುದಾಯ ಆರೋಗ್ಯಾಧಿಕಾರಿಗಳು ನೇಮಕಗೊಂಡಿದ್ದಾರೆಂದು ತಾ.ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು ಪ್ರಗತಿ ಪರಿಶೀಲನಾವರದಿ ಮಂಡಿಸಿದರು.
ರಸಬಾಳೆ-ಮಲ್ಲಿಗೆಗೆ ಆದ್ಯತೆ : ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲವೆಂದು ಎಡಿಎ ವೆಂಕಟೇಶ್ ತಿಳಿಸಿದರೆ, ಹನಗೋಡು ಭಾಗದಲ್ಲಿ ರಸಬಾಳೆ, ಬಿಳಿಕೆರೆ ಭಾಗದಲ್ಲಿ ಮೈಸೂರು ಮಲ್ಲಿಗೆ ಬೆಳೆಯಲು ಪ್ರೋತ್ಸಾಹಿಸಲಾಗುವುದೆಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ನೇತ್ರಾವತಿ ತಿಳಿಸಿದರು.