Advertisement

ನಾಯಿಲ ನಿಯಂತ್ರಿತ ಪ್ರದೇಶಕ್ಕೆ ತಾ.ಪಂ.ಇಒ ಭೇಟಿ

12:15 AM Apr 29, 2020 | Sriram |

ಬಂಟ್ವಾಳ: ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಾಯಿಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಈ ನಿಯಂತ್ರಿತ ಪ್ರದೇಶಕ್ಕೆ ಇನ್ಸಿಡೆಂಟ್‌ ಕಮಾಂಡರ್‌ ಆಗಿರುವ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ನಿಯಂತ್ರಿತ ವಲಯದಲ್ಲಿ ಕೈಗೊಂಡಿರುವ ಕ್ರಮಗಳು, ನಿಯಂತ್ರಿತ ವಲಯದಲ್ಲಿರುವ ಸುಮಾರು 130ಕ್ಕೂ ಅಧಿಕ ಮನೆಗಳಿಗೆ ಅಗತ್ಯ ವಸ್ತುಗಳ ವಿತರಣೆಗೆ ಆಗಿರುವ ತಂಡಗಳ ಕುರಿತು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಹಿತ ಇತರರೊಂದಿಗೆ ಚರ್ಚಿಸಿದರು.

ನಿಯಂತ್ರಿತ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 75 ವರ್ಷದ ವ್ಯಕ್ತಿ ಹಾಗೂ 4 ವರ್ಷದ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಕುರಿತು ತಾಲೂಕು ಆರೋಗ್ಯಾಧಿಕಾರಿಯವರ ಜತೆ ಚರ್ಚಿಸಿ ಕ್ರಮ ಕೈಗೊಂಡರು.

ಜತೆಗೆ ಪೊಲೀಸ್‌ ಸಿಬಂದಿ, ಕೋವಿಡ್-19 ವಾರಿಯರ್ಸ್‌, ಆಶಾ ಕಾರ್ಯಕರ್ತೆ ಜತೆ ಮಾತುಕತೆ ನಡೆಸಿದರು.ಇತರ ಮೂಲಸೌಕರ್ಯಗಳಿಗೆ ಯತೀಶ್‌ ಕುಮಾರ್‌ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಪಂಪ್‌ ಆಪರೇಟರ್‌ ಮನೋಹರ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಉಳಿದಂತೆ ಸೀಲ್‌ಡೌನ್‌ ಪ್ರದೇಶದಲ್ಲಿ ನೀರಿನ ತೊಂದರೆ ಕಂಡುಬಂದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಗ್ರಾ.ಪಂ. ಸಿದ್ಧವಿದೆ ಎಂದು ಪಿಡಿಒ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆಗೆ ತಂಡ
ನಾಯಿಲ ಸೀಲ್‌ಡೌನ್‌ ಪ್ರದೇಶದ ನಾಗರಿಕರಿಗೆ ಅಗತ್ಯ ವಸ್ತುಗಳಿಗೆ ನೆರವಾಗುವಂತೆ ತಂಡವನ್ನು ರಚಿಸಲಾಗಿದೆ. ತರಕಾರಿ, ಔಷಧ, ದಿನಪತ್ರಿಕೆ ಹಾಗೂ ಹಾಲು ಪೂರೈಕೆಗೆ ಮಂಜಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರು ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ದಿನಸಿ ಸಾಮಗ್ರಿಗಳಿಗೆ ಸಂತೋಷ್‌ಕುಮಾರ್‌ಗೆ ಜವಾಬ್ದಾರಿ ನೀಡಲಾಗಿದ್ದು, ನರಿಕೊಂಬು ಗ್ರಾ.ಪಂ.ಅಧ್ಯಕ್ಷರು ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಹಣ್ಣುಗಳು ಹಾಗೂ ನಿಯಂತ್ರಿತ ವಲಯದ ಇತರ ಆವಶ್ಯಕ ಬೇಡಿಕೆಗಳಿಗೆ ಸಂದೀಪ್‌ಕುಮಾರ್‌ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ನರಿಕೊಂಬು ಗ್ರಾಮ ಕರಣಿಕರು ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next