ಕೊರಟಗೆರೆ: ತಾಲ್ಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಬಿ.ಎಲ್.ನಾಗರಾಜು ಅತಿ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತರಾದವರು:
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಬಿ ಎಲ್ ನಾಗರಾಜು ಆಯ್ಕೆಯಾದರೆ , ಉಪಾಧ್ಯಕ್ಷರಾಗಿ, ಹೆಚ್.ವಿ ಶಿವಕುಮಾರ್ , ಕಾರ್ಯದರ್ಶಿ ಎಂ.ಸಿ ಮಲ್ಲಿಕಾರ್ಜುನಯ್ಯ , ಜಂಟಿ ಕಾರ್ಯದರ್ಶಿ ಹುಸೇನ್ ಪಾಷಾ( ಅವಿರೋಧವಾಗಿ ಆಯ್ಕೆ ) ಖಜಾಂಚಿ ಎಂ ಎಸ್ ಸಂತೋಷ್ ಲಕ್ಷ್ಮಿ , ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ .
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ ಎಲ್ ನಾಗರಾಜು ಮಾತನಾಡಿ, ಇಂದು ನಡೆದಿರುವ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಎಲ್ಲಾ ನನ್ನ ವೃತ್ತಿ ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೂ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿರುವ ನನ್ನ ವೃತ್ತಿ ಮಿತ್ರರಿಗೆ ಶುಭಾಶಯಗಳನ್ನು ತಿಳಿಸುತ್ತಾ ತಾಲ್ಲೂಕಿನ ವಕೀಲರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತೇನೆ ಯಾವುದೇ ಭಿನ್ನಾಭಿಪ್ರಾಯಗಳು ಬರದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತೇನೆ. ಇದು ನನ್ನ ಹಾಗೂ ನನ್ನ ವೃತ್ತಿ ಮಿತ್ರರ ಕರ್ತವ್ಯವೂ ಹೌದು ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷರಾದ ಹೆಚ್ ವಿ ಶಿವಕುಮಾರ್ ಮಾತನಾಡಿ,ಗೆದ್ದವರು ಸೋತವರು ಎಲ್ಲರೂ ನಮ್ಮ ವೃತ್ತಿ ಮಿತ್ರರೇ ಅವರೆಲ್ಲರನ್ನು ಜೊತೆಗೂಡಿಸಿಕೊಂಡು ಮುನ್ನೆಡೆಯುವುದು, ನಮ್ಮ ವಕೀಲರ ವೃತ್ತಿ ಧರ್ಮ ಅದರಂತೆಯೇ ನಡೆಯುತ್ತಿವೆ ನನ್ನನ್ನು ಉಪಾಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲ ನನ್ನ ವಕೀಲ ಮಿತ್ರರಿಗೆ ತುಂಬು ಹೃದಯದ ಧನ್ಯವಾದ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಕಿಲರುಗಳಾದ ಎ. ಎಂ, ಕೃಷ್ಣಮೂರ್ತಿ, ಟಿ. ಕೃಷ್ಣಮೂರ್ತಿ, ಜಿ ಎಂ ಕೃಷ್ಣಮೂರ್ತಿ, ಕೆ ಬಿ ಅನಿಲ್ ಕುಮಾರ್ ,ಎಂ ಎಲ್ ಸಂತೋಷ್, ಡಿ. ಶಿವಣ್ಣ, ಬಿ ಎ ಪುಟ್ಟರಾಜು,ಮಧುಸೂದನ್, ತಿಮ್ಮೇಶ್, ಶಿವರಾಜ್, ಕೋಮಲ್ ಗಿರೀಶ್, ಪಿ ಸುನೀಲ್, ವೃಷಭೇಂದ್ರಸ್ವಾಮಿ, ಅನಂತ್ ಕುಮಾರ್ , ಡಿ ಜಿ ತಿಮ್ಮರಾಜು, ಕೆಂಪರಾಜಮ್ಮ ,ಶಿಲ್ಪಾ, ಬೃಂದಾ ,ಅರುಂಧತಿ,ಮಂಜುಳಾ, ಮತ್ತು ಹಿರಿಯ ಹಾಗೂ ಕಿರಿಯ ವಕೀಲರು ಹಾಜರಿದ್ದರು.