Advertisement

ತಾಲೂಕು ಅಂಗವಿಕಲರ ಕುಂದುಕೊರತೆ ಸಭೆ

05:06 PM Nov 04, 2017 | Team Udayavani |

ನಗರ: ಪುತ್ತೂರು ತಾಲೂಕು ಅಂಗವಿಕರ ಕುಂದುಕೊರತೆ ಸಭೆಯು ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಉಪತಹಶೀಲ್ದಾರ್‌ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಸೇಸಪ್ಪ ಶಾಂತಿನಗರ ಅವರು ಅಂಗವಿಕರ ವೈದ್ಯಕೀಯ ತಪಾಸಣೆ ಶಿಬಿರದ ಕುರಿತು ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಯಿತು. ಇದಕ್ಕೆ ಧ್ವನಿಗೂಡಿಸಿದ ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಮಾತನಾಡಿ, ಆಯಾ ಗ್ರಾ.ಪಂ. ಪುನರ್ವಸತಿ ಕಾರ್ಯಕರ್ತರು ಅಂಗವಿಕರ ಗುರುತಿನ ಚೀಟಿ ನೀಡುವಲ್ಲಿ ಸಹಕಾರ ನೀಡಬೇಕು ಎಂದರು.

ಗ್ರಾ.ಪಂ. ಗಳಲ್ಲಿ ಶೇ. 3ರ ಅನುದಾನದ ಕುರಿತು ಪುನರ್ವಸತಿ ಕಾರ್ಯಕರ್ತರ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ಆಗ್ರಹ ವ್ಯಕ್ತವಾಯಿತು. ತಾ.ಪಂ. ವಿಷಯ ನಿರ್ವಾಹಕ ಶಿವಪ್ರಕಾಶ್‌ ಅಡ್ಪಂಗಾಯ ಮಾತನಾಡಿ, ಈ ಕುರಿತು ಎಲ್ಲ ಗ್ರಾ.ಪಂ.ಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಇಲಾಖಾ ಸಂಪನ್ಮೂಲ ವ್ಯಕ್ತಿ ಶಿವಪ್ಪ ರಾಥೋಡ್‌ ಸಲಹೆ -ಸೂಚನೆಗಳನ್ನು ನೀಡಿದರು. ಮೇಲ್ವಿಚಾರಕಿ ಹರಿಣಾಕ್ಷಿ, ವನಿತಾ, ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್‌ ಕುಮಾರ್‌ ಹಾಗೂ ತಾಲೂಕಿನ ಎಲ್ಲ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next