Advertisement

ಕೃಷ್ಣಾ ಮತ್ತು ಘಟಪ್ರಭಾ ಪ್ರವಾಹ ಎದುರಿಸಲು ತಾಲೂಕು ಆಡಳಿತ ಸಜ್ಜು: ಸಿದ್ದು ಸವದಿ

07:00 PM Jul 15, 2022 | Team Udayavani |

ರಬಕವಿ-ಬನಹಟ್ಟಿ: ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಪ್ರವಾಹ ಎದುರಿಸಲು ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಸದ್ಯಕ್ಕೆ ಎರಡು ನದಿಗಳಿಗೆ ಯಾವುದೆ ಪ್ರವಾಹದ ಭೀತಿ ಇಲ್ಲ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಶುಕ್ರವಾರ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಪ್ರವಾಹ ಮುನ್ನೆಚ್ಚರಿಕೆ ನಿಮಿತ್ತ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕೃಷ್ಣಾ ನದಿಗೆ ಅಂದಾಜು 3 ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಬಂದರೆ ನದಿ ತೀರದ ಗ್ರಾಮಗಳಾದ ತಮದಡ್ಡಿ, ಅಸ್ಕಿ ಗ್ರಾಮಗಳಿಗೆ ತೊಂದರೆಯಾಗಲಿದೆ. ಎರಡು ನದಿಗಳಿಂದ ತಾಲ್ಲೂಕಿನ12 ಗ್ರಾಮಗಳಿಗೆ ಸಮಸ್ಯೆಯಾಗಲಿದೆ. ಆದರೆ ಈ ಬಾರಿ ತಾಲೂಕು ಆಡಳಿತ ಎಲ್ಲ ರೀತಿಯಿಂದಲೂ ಸಜ್ಜಾಗಿದೆ. ಈಗಾಗಲೇ ಪ್ರವಾಹದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮೂರು ಬೋಟ್ ಗಳ ನ್ನು ಸಜ್ಜು ಮಾಡಲಾಗುವುದು.

ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸದ್ಯದರಲ್ಲಿಯೇ ಸಹಾವಾಣಿಯನ್ನು ಕೂಡಾ ನೀಡಲಾಗುವುದು. ವಾಹದಿಂದ ಮನೆಗಳಿಗೆ ತೊಂದರೆಯಾದ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಷ, ಜಾತಿ ಬೇಧ ಮರೆತು ಅವುಗಳ ಸರ್ವೆ ಕಾರ್ಯದಲ್ಲಿ ತೊಡಗಬೇಕು. 2019 ರಲ್ಲಿ ಮನೆಗಳ ಸರ್ವೆ ಕಾರ್ಯ ಹಾಗೂ ಪರಿಹಾರ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಇನ್ನೂ ಬೆಳೆ ಪರಿಹಾರನ್ನು ನೀಡಬೇಕಾಗಿದೆ. ಆದರೆ ಈ ಬಾರಿ ಯಾವುದೆ ಸಮಸ್ಯೆಯಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವವಹಿಸಬೇಕು ಎಂದರು.

ಸಭೆಯಲ್ಲಿ ತಹಶೀಲ್ದಾರ್ ಎಸ್.ಬಿ.ಇಂಗಳೆ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ ಮಾತನಾಡಿದರು.

Advertisement

ಸಭೆಯಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಅಶೋಕ ಗುಡಿಮನಿ, ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿ ಜಿ.ಎಸ್.ಈಟಿ, ತೇರದಾಳ ಪುರಸಭೆಯ ಮಖ್ಯಸ್ಥೆ ಎಂ.ವಿಜಯಲಕ್ಷ್ಮಿ, ಹಿಪ್ಪರಗಿ ಜಲಾಶಯದ ಸಹಾಯಕ ಎಂಜಿನಿಯರ್ ವಿಠ್ಠಲ ನಾಯಕ, ಶ್ರೀಧರ ನಂದ್ಯಾಳ, ಉಪ ತಹಶೀಲ್ದಾರ್ ಬಸವರಾಜ ಬಿಜ್ಜರಗಿ, ಅಗ್ನಿ ಶಾಮಕ ದಳದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ರಬಕವಿಯ ವಾರ್ಡ ನಂ.27ರ ನಿವಾಸಿ ಅಶೋಕ ಭಜಂತ್ರಿಯವರ ಮನೆ ಹಾನಿಗೊಳಗಾದ ಹಿನ್ನಲೆಯಲ್ಲಿ ಸಿದ್ದು ಸವದಿ ಅವರ ಮನೆಗೆ ಭೇಟಿ ನೀಡಿದರು.

ಕೃಷ್ಣಾ ನದಿ ತೀರಕ್ಕೆ ಭೇಟಿ
ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಶುಕ್ರವಾರ ಸಿದ್ದು ಸವದಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ನೀರಿನ ಮಟ್ಟವನ್ನು ಪರೀಶೀಲಿಸಿದರು.ಸದ್ಯಕ್ಕೆ ಯಾವುದೇ ಪ್ರವಾಹದ ಭೀತಿ ಇಲ್ಲ. ಶುಕ್ರವಾರ ಸಂಜೆ ಹಿಪ್ಪರಗಿ ಜಲಾಶಯಕ್ಕೆ ೧ ಲಕ್ಷ ೨0 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಲ್ಲಿಂದ ೧ ಲಕ್ಷ ೨೧ ಸಾವಿರ ಕ್ಯೂಸೆಕ್ಸ್ ನೀರು ಮಂಭಾಗಕ್ಕೆ ಬೀಡಲಾಗತ್ತಿದೆ. ಇದ್ದರಿಂದ ನೀರು ಸರಾಗವಾಗಿ ಹರಿಯುತ್ತಿರುವದುರಿಂದ ಯಾವುದೇ ಪ್ರವಾಹ ಬೀತಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next