Advertisement

ತಲಪಾಡಿ-ತಿರುವನಂತಪುರ; ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಗೆ ಚಾಲನೆ

01:56 AM Oct 14, 2020 | mahesh |

ಕಾಸರಗೋಡು: ತಲಪಾಡಿ-ತಿರುವನಂತಪುರ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅತ್ಯಾಧುನಿಕ ರೀತಿಯವಲ್ಲಿ ಪರಿವರ್ತಿಸುವ ಕಾಮಗಾರಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವೀಡಿಯೋ ಕಾನ್ಫರೆನ್ಸ್‌ ಮುಖಾಂತರ ಮಂಗಳವಾರ ಉದ್ಘಾಟಿಸಿದರು. 6 ವಿಭಾಗಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ.

Advertisement

ರಾಜ್ಯಪಾಲ ಆರಿಫ್‌ ಮುಹಮ್ಮದ್‌ ಖಾನ್‌, ಕೇಂದ್ರ ಸಚಿವ ವಿ.ಕೆ. ಸಿಂಗ್‌, ಕೇಂದ್ರ ಸಹಾಯಕ ಸಚಿವ ವಿ. ಮುರಳೀಧರನ್‌, ಲೋಕೋಪಯೋಗಿ ಖಾತೆ ಸಚಿವ ಜಿ. ಸುಧಾಕರನ್‌ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಶಾಸಕ ಎನ್‌.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು, ಎಲ್‌.ಎ.ಎನ್‌.ಎಚ್‌. ವಿಭಾಗ ಕಲೆಕ್ಟರ್‌ ಅಜೀಶ್‌ ಉಪಸ್ಥಿತರಿದ್ದರು.  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿª ಯೊಂದಿಗೆ ವಿವಿಧೆಡೆ ಸೇತುವೆ ಹಾಗೂ ಸಂಪರ್ಕ ರಸ್ತೆಗಳನ್ನೂ ಅಭಿವೃದ್ಧಿ ಗೊಳಿಸುವ ಯೋಜನೆಯನ್ನು ಹೊಂದಲಾಗಿದೆ.

11,547.4 ಕೋ.ರೂ. ವೆಚ್ಚ
ರಾ.ಹೆ. ಅಭಿವೃದ್ಧಿಗೆ ಒಟ್ಟು 11,547.4 ಕೋಟಿ ರೂ. ವೆಚ್ಚ ಅಂದಾಜಿಸ ಲಾಗಿದೆ. ಕಾಸರಗೋಡು ಜಿಲ್ಲೆಯ ತಲಪಾಡಿ ಗಡಿಯಿಂದ ತಿರುವನಂತಪುರ ಜಿಲ್ಲೆಯ ಕಳಕೂಟಂ ತನಕದ ರಾ. ಹೆ. ಷಟ್ಪಥವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next