Advertisement

ತಲ್ಲೂರು: ಮೋರಿಗೆ ಹಳೆ ಪೈಪ್‌ ಅಳವಡಿಕೆ; ಸ್ಥಳೀಯರ ವಿರೋಧ

10:52 PM May 31, 2019 | Team Udayavani |

ಕುಂದಾಪುರ : ತಲ್ಲೂರು ರಾಷ್ಟ್ರೀಯ ಹೆದ್ದಾರಿ 66 ರಿಂದ ನೇರಳಕಟ್ಟೆಗೆ ಸಂಚರಿಸುವ ರಸ್ತೆಯಲ್ಲಿ ಹಳೆಯ ಪೈಪ್‌ಗಳನ್ನೇ ಅಳವಡಿಸಿ ನಡೆಸುತ್ತಿರುವ ಮೋರಿ ದುರಸ್ತಿ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿದ ಘಟನೆ ಶುಕ್ರವಾರ ನಡೆದಿದ್ದು, ಬಳಿಕ ಪೊಲೀಸ್‌ ಭಧ್ರತೆಯಲ್ಲಿ ಕಾಮಗಾರಿ ಮುಂದುವರಿಸಲಾಗಿದೆ.

Advertisement

ತಲ್ಲೂರು ಪೇಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದೇ ವೇಳೆ ನೇರಳಕಟ್ಟೆ ಕಡೆಗೆ ಸಂಪರ್ಕಿಸುವ ರಸ್ತೆಯ ತಲ್ಲೂರಿನಲ್ಲಿ ಹಳೆಯ ಮೋರಿ ತೆಗೆಯಲಾಗಿತ್ತು. ಮತ್ತೆ ಈಗ ಅದೇ ಹಳೆಯ ಪೈಪ್‌ಗ್ಳನ್ನೇ ಅಳವಡಿಸಿ, ಕಾಮಗಾರಿ ನಡೆಸಲಾಗುತ್ತಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಈ ಹಳೆಯ ಪೈಪ್‌ಗ್ಳನ್ನು ಅಳವಡಿಸಿದರೆ, ಮಳೆಗಾಲದಲ್ಲಿ ಮತ್ತೆ ಕುಸಿಯುವ ಆತಂಕವಿದೆ. ಇದು ಬೇಡ. ಹೊಸದಾಗಿ ಪೈಪ್‌ಗ್ಳನ್ನು ಅಳವಡಿಸಿ, ಕಾಮಗಾರಿ ಮಾಡಿ, ಇಲ್ಲದಿದ್ದರೆ, ಕೆಲಸ ಮಾಡಲು ಬಿಡುವುದಿಲ್ಲ ಎಂದು ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿ ಅಧಿಕಾರಿಗಳಿಗೆ ಆಗ್ರಹಿಸಿದರು.

ಹೊಸ ಪೈಪ್‌ ಗಳಿಗೆ ಬೇಡಿಕೆ
ಈ ಹಿನ್ನೆಲೆಯಲ್ಲಿ ಕಂಪೆನಿಯವರು ಪೊಲೀಸರ ನೆರವು ಕೋರಿದ್ದು, ಇದೇ ವೇಳೆ ಈಗ ಹೊಸ ಪೈಪ್‌ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಅದಿನ್ನು ಬರಲು ಸ್ವಲ್ಪ ಸಮಯ ಬೇಕಾಗಿದೆ. ಅಷ್ಟರೊಳಗೆ ಮಳೆಗಾಲ ಆರಂಭವಾಗುವುದರಿಂದ ಕಷ್ಟವಾಗಬಹುದು. ಅದಕ್ಕಾಗಿ ತಾತ್ಕಾಲಿಕವಾಗಿ ಈ ಹಳೆಯ ಪೈಪ್‌ಗ್ಳನ್ನು ಹಾಕಲಾಗಿದೆ. ಮತ್ತೆ ಹೊಸ ಪೈಪ್‌ಗ್ಳನ್ನು ಅಳವಡಿಸಲಾಗುವುದು ಎನ್ನುವ ಭರವಸೆಯನ್ನು ಅಧಿಕಾರಿಗಳು ನೀಡಿದ ಬಳಿಕ ಕಾಮಗಾರಿಗೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next