ಅಮೆರಿಕ : ಕನ್ನಡ ಸಾಹಿತ್ಯ ರಂಗ ಯುಎಸ್‌ಎ ವತಿಯಿಂದ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಫೆ. 27ರಂದು ವರ್ಚುವಲ್ ಮೂಲಕ ನಡೆಯಲಿದೆ. ಕಾರ್ಯಕ್ರಮ ಬೆಳಗ್ಗೆ ಬೆಳಗ್ಗೆ 10.30ಕ್ಕೆ (ಇಎಸ್‌ಟಿ), 9.30 (ಸಿಎಸ್‌ಟಿ), 7.30 (ಪಿಎಸ್‌ಟಿ), ರಾತ್ರಿ 9 (ಐಎಸ್‌ಟಿ) ನೇರಪ್ರಸಾರವಾಗಲಿದೆ.
ಮಾ. 6ರಂದು ರಕ್ತದಾನ ಶಿಬಿರ :
ಕ್ವೀನ್ಸ್‌ಲ್ಯಾಂಡ್ : ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡಜ್ ವತಿಯಿಂದ 2021ನೇ ಸಾಲಿನ ರಕ್ತದಾನ ಶಿಬಿರ ಮಾರ್ಚ್ 6ರಂದು ಸ್ಪ್ರಿಂಗ್‌ವುಡ್ ಬ್ಲಿಡ್ ಡೋನರ್ ಸೆಂಟರ್‌ನಲ್ಲಿ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ kannadasanghagld@gmail.com ಗೆ ಇ-ಮೇಲ್ ಮಾಡಬಹುದು.
ಮಾ. 20- 21ರಂದು ವರ್ಚುವಲ್ ಮ್ಯಾರಥಾನ್
ಜರ್ಮನಿ: ಬರ್ಲಿನ್ ಕನ್ನಡ ಬಳಗ ಇ.ವಿ. ವತಿಯಿಂದ ಪರಿಕ್ರಮ ದಿವಸ್ ವರ್ಚುವಲ್ ಮ್ಯಾರಥಾನ್ ಮಾರ್ಚ್ 20- 21ರಂದು ನಡೆಯಲಿದೆ. ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಮತ್ತು ಕೋವಿಡ್ ವಾರಿಯರ್‌ಗಳಿಗೆ ಗೌರವ ಸೂಚಿಸುವಸಲುವಾಗಿ ಜರ್ಮನಿ ಮತ್ತು ಭಾರತದ ಎಲ್ಲೇ ಇದ್ದರೂ ನಡಿಗೆ, ಓಟದಲ್ಲಿ ಪಾಲ್ಗೊಳ್ಳಬಹುದು. ನೋಂದಣಿ ಉಚಿತ. 10, 5 ಕಿ.ಮೀ. ಓಟ, 3 ಕಿ.ಮೀ. ನಡಿಗೆ ಮಾಡಿದ ಟ್ರ್ಯಾಕ್ ಅನ್ನು ಶೇರ್ ಮಾಡಿ ಪ್ರಶಸ್ತಿ ಪಡೆಯಬಹುದು.
ಫೆ. 27: ನೌಕಾಕ್ಷರಿ ಅಂತ್ಯಾಕ್ಷರಿ ರಸಪ್ರಶ್ನೆ ಕಾರ್ಯಕ್ರಮ :
ನಾರ್ತ್ ಅಮೆರಿಕ: ನೌಕಾ (ನಾರ್ತ್ ಅಮೆರಿಕ ಉತ್ತರ ಕರ್ನಾಟಕ ಅಸೋಸಿಯೇಶನ್) ವತಿಯಿಂದ ನೌಕಾಕ್ಷರಿ ಕನ್ನಡದಲ್ಲಿ ಅಂತ್ಯಾಕ್ಷರಿ, ರಸಪ್ರಶ್ನೆ ಮನೋರಂಜನೆ ಕಾರ್ಯಕ್ರಮವನ್ನು ಫೆ. 27ರಂದು ಸಂಜೆ 5 ಗಂಟೆಗೆ (ಪೆಸಿಫಿಕ್) ಆಯೋಜಿಸಲಾಗಿದೆ. ಕಾರ್ಯಕ್ರವನ್ನು Facebook.com/nauttarakarnatakaassociation ನಲ್ಲಿ ನೇರಪ್ರಸಾರ ಮಾಡಲಾಗುವುದು