Advertisement

ಬಾಬಾ ಚಿಂತನೆ ಚರ್ಚೆಯಾಗಲಿ

03:45 PM Apr 15, 2017 | |

ಶಹಾಬಾದ: ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕತೃì ಭಾರತರತ್ನ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿ ಕಾಟಾಚಾರಕ್ಕೆ ನಡೆಯದೆ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳಚರ್ಚೆಗೆ ವೇದಿಕೆಯಾಗಬೇಕು ಎಂದು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಲೋಹಿತ್‌ ಕಟ್ಟಿ ಹೇಳಿದರು.

Advertisement

ಶುಕ್ರವಾರ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಜೆಡಿಎಸ್‌ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸ ಪಡೆದ ಅಂಬೇಡ್ಕರ್‌ ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೆರಿಕಾ,

ಇಂಗ್ಲೆಂಡ್‌, ಐರ್ಲೆಂಡ್‌ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆ ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಅವರಿಗಿದೆ ಎಂದರು. ನಗರಸಭೆ ಸದಸ್ಯ ರಾಮಕುಮಾರ ಸಿಂN ಮಾತನಾಡಿ, ವ್ಯವಸ್ಥಿತ ಸಂವಿಧಾನ ದೇಶಕ್ಕೆ ನೀಡಿದ ಮಹಾನ್‌ ನಾಯಕ ಅಂಬೇಡ್ಕರ್‌.

ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲ ವರ್ಗದ ಜನ, ವಿಶೇಷವಾಗಿ ದಲಿತರು ಸಾಗಬೇಕಿದೆ ಎಂದರು. ಜೆಡಿಎಸ್‌ ಅಧ್ಯಕ್ಷ ರಾಜಮಹ್ಮದ್‌ ರಾಜಾ, ಮೋಹನಹಳ್ಳಿ,ಶೇಖ ಮೆಹಬೂಬ,ಹಾಜಿ ಕರಿಂ, ಶಂಕರ  ಅಳ್ಳೋಳ್ಳಿ, ಸುನೀಲ ಸೂರ್ಯವಂಶಿ, ಹೀರಾ ಪವಾರ, ಶಿವು ಕೋರಿ ಇತರರು ಇದ್ದರು. 

ಕನ್ನಡ ಸಾಹಿತ್ಯ ಪರಿಷತ್‌: ಕನ್ನಡ ಸಾಹಿತ್ಯ ಸಂಘದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಪೂಜ್ಯ ಸಿದ್ಧಬಸವ ಹರಳಯ್ಯ ಸ್ವಾಮೀಜಿ ಮಾತನಾಡಿದರು. ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್‌,ರಾಜಶೇಖರ ದೇವರಮನಿ,ರವಿ ಬೆಳಮಗಿ,ಸಿದ್ರಮಪ್ಪ ಮುದಿಗೌಡ, ವಿಶ್ವನಾಥ ಚಿತ್ತಾಪುರ, ನಿಂಗಪ್ಪ ಬೋಗುಂಡಿ ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next