Advertisement

ನಗರಸಭೆ ಆದಾಯ ವಿಚಾರದಲ್ಲಿ ಚಕಮಕಿ

04:52 PM Mar 30, 2021 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ನಗರಸಭೆಗೆ ಆದಾಯ ಹೆಚ್ಚಿಸುವ ವಿಚಾರದಲ್ಲಿಆಡಳಿತರೂಡ ಬಿಜೆಪಿ ಹಾಗೂ ಕಾಂಗ್ರೆಸ್ ‌ನಗರಸಭಾ ಸದಸ್ಯರ ನಡುವೆ ಮಾತಿನಚಕಮಕಿ ನಡೆದು, ಕೆಲಕಾಲ ನಗರಸಭೆ ಸಭಾಂಗಣ ರಣರಂಗವಾಗಿ ಮಾರ್ಪಾಟಿತು.

Advertisement

ನಗರಸಭೆಯ ಸರ್‌.ಎಂ.ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ(ಬಾಬು) ಅಧ್ಯಕ್ಷತೆಯಲ್ಲಿ ನಡೆದ 2021- 22ನೇ ಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿವಿರೋಧ ಪಕ್ಷ ಸದಸ್ಯ ನರಸಿಂಹಮೂರ್ತಿಮಾತನಾಡಿ, ನಗರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ನಗರಸಭೆಯಿಂದ ಮೂಲ ಸೌಲಭ್ಯಕಲ್ಪಿಸುತ್ತಿದ್ದೇವೆ. ಆದರೆ, ಬಡಾವಣೆಯವರುಗ್ರಾಪಂಗೆ ತೆರಿಗೆ ಪಾವತಿಸುತ್ತಿದ್ದಾರೆ. ಇದರಿಂದ ನಗರಸಭೆಗೆ ಆದಾಯ ಕುಂಠಿತವಾಗುತ್ತಿದೆಎಂದು ಆಕ್ಷೇಪ ವ್ಯಕ್ತಪಡಿಸಿ, ಬಡಾವಣೆಗಳನ್ನುನಗರಸಭೆ ವ್ಯಾಪ್ತಿಗೆ ತಂದು ಆದಾಯ ಹೆಚ್ಚಿಸಬೇಕು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಗರಸಭಾಸದಸ್ಯ ಗಜೇಂದ್ರ, ನಗರಸಭೆ ವ್ಯಾಪ್ತಿಯಲ್ಲಿಕಟ್ಟಡ ನಿರ್ಮಾಣ ಮಾಡಿಕೊಂಡರೆ ಅವರಿಗೆನೀರು ಸಹಿತ ಎಲ್ಲಾ ಸೌಲಭ್ಯ ಕಲ್ಪಿಸಬೇಕಾಗುತ್ತದೆ ಎಂದು ಸಮರ್ಥಿಸಿ ಕೊಂಡರು.ನಗರಸಭೆ ಅಭಿವೃದ್ಧಿ ವಿಚಾರದಲ್ಲಿ ಏನುಮಾತನಾಡಬೇಕು ಎಂದು ಸದಸ್ಯರಿಗೆ ಜ್ಞಾನ ಇಲ್ಲ ಎಂದು ನಗರಸಭಾ ಸದಸ್ಯನರಸಿಂಹಮೂರ್ತಿ ಕೆಣಕಿದಾಗ,ಕುಪಿತಗೊಂಡ ನಗರಸಭಾ ಸದಸ್ಯ ಗಜೇಂದ್ರವಾಗ್ವಾದಕ್ಕೆ ಇಳಿದರು. ಇದಕ್ಕೆ ಆಡಳಿತರೂಡಪಕ್ಷದ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರಿಂದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನಚಕಮಕಿ ನಡೆದು ಬೆದರಿಕೆ ಹಾಕುವ ಮಟ್ಟಿಗೆ ತಲುಪಿತು. ನಂತರ ನಗರಸಭಾ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ರμàಕ್‌ ಸದಸ್ಯರನ್ನು ಸಮಾಧಾನಗೊಳಿಸಿದರು.

ಬಜೆಟ್‌ ಮಂಡನೆ: ಸಭೆಯಲ್ಲಿ ರಾಜಸ್ವ ತೆರಿಗೆ, ನಗರಸಭೆಯಿಂದ ಆಸ್ತಿಯಿಂದ ಬರುವಬಾಡಿಗೆ, ಸರ್ಕಾರಿ ಅನುದಾನ ಸಹಿತ 2021- 22ನೇ ಸಾಲಿನಲ್ಲಿ 55,42,70,000 ರೂ.ಗಳ ಆದಾಯ ನಿರೀಕ್ಷಿಸಿ, 54,12,82,000 ರೂ.ಗಳಖರ್ಚು ಹೊರತುಪಡಿಸಿ ಉಳಿಕೆ 1,29,88,000ರೂ.ಗಳ ಉಳಿತಾಯ ಬಜೆಟ್‌ ಮಂಡಿಸಿ ಅನುಮೋದನೆ ಪಡೆಯಲಾಯಿತು. ರಾಜ್ಯದಲ್ಲಿ ಸ್ವತ್ಛತೆ ವಿಚಾರದಲ್ಲಿ ಚಿಕ್ಕಬಳ್ಳಾಪುರ ನಗರಸಭೆಗೆ 9ನೇ ಸ್ಥಾನ ಲಭಿಸಿದ್ದು,

ಅದನ್ನು 3ನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ತೀರ್ಮಾನಿಸ ಲಾಯಿತು. ನಗರಸಭೆಯ 3 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿಕೊಳಚೆನೀರು ಒಳ ಚರಂಡಿಗೆ ಸಂಪರ್ಕಿಸುವಯೋಜನೆ ಜಾರಿಗೊಳಿಸಲು ನಿರ್ಣಯ ತೆಗೆದುಕೊಂಡರು.

Advertisement

ನಗರಸಭೆಯ ಹಿರಿಯ ಸದಸ್ಯ ರಫೀಕ್‌, ನಗರಸಭೆಯ ಸದಸ್ಯ ಕಣಿತಹಳ್ಳಿ ವೆಂಕಟೇಶ್‌ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು.ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು,ಪೌರಾಯುಕ್ತ ಡಿ.ಲೋಹಿತ್‌ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next