Advertisement

ಎರಡು ಪ್ರದೇಶ ಕಂಟೈನ್ಮೆಂಟ್‌ ಝೋನ್‌

06:46 PM Jul 02, 2020 | Naveen |

ತಾಳಿಕೋಟೆ: ತಾಲೂಕಿನಲ್ಲಿ ಕೋವಿಡ್ ವೈರಸ್‌ ತಗುಲಿರುವ ಸೊಂಕಿತರ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ನಾವದಗಿ ಗ್ರಾಮದ ಸೋಂಕಿತನ ಮನೆ ಸುತ್ತಲಿನ ಪ್ರದೇಶ ಹಾಗೂ ತಾಳಿಕೋಟೆ ಪಟ್ಟಣದ ಮಿಲತ್‌ ನಗರ ಬಡಾವಣೆ ಪ್ರದೇಶಗಳನ್ನು 100 ಮೀ.ವರೆಗೆ ಕಂಟೈನ್ಮೆಂಟ್‌ ಪ್ರದೇಶಗಳೆಂದು ಜಿಲ್ಲಾಡಳಿತ ಸೂಚನೆ ಮೇರೆಗೆ ತಾಲೂಕಾಡಳಿತ ಘೋಷಣೆ ಮಾಡಿದೆ.

Advertisement

ತಾಲೂಕಿನಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್‌-19 ಸೋಂಕು ತಗುಲಿದ್ದು ನಾವದಗಿ ಗ್ರಾಮದ ಓರ್ವನಿಗೆ ಹಾಗೂ ತಾಳಿಕೋಟೆಯ ಮಿಲತ್‌ನಗರ ಪ್ರದೇಶ ಓರ್ವನಿಗೆ ಸೋಂಕು ತಗುಲಿದೆ. ಆಯಾ ಪ್ರದೇಶಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದ್ದು ಎಲ್ಲ ಸುತ್ತಲಿನ ರಸ್ತೆಗಳಿಗೆ ಮುಳ್ಳುಕಂಠಿ ಕಟ್ಟಿ ಯಾರೂ ಹೋಗದಂತೆ ಮತ್ತು ಅಲ್ಲಿಂದ ಯಾರೂ ಹೊರಬರದಂತೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ತಾಲೂಕಾಡಳಿತ ಸೀಲ್‌ಡೌನ್‌ ಗೊಂಡ ಪ್ರದೇಶದೊಳಗಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಕ್ರಮ ಕೈಗೊಂಡಿದೆ. ಕಾಯಪಲ್ಲೆ, ಹಾಲು, ಕಿರಾಣಿ, ಕುಡಿಯುವ ನೀರು ಒಳಗೊಂಡು ಅಗತ್ಯ ವಸ್ತುಗಳು ಅಲ್ಲಿಯೇ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸಿಲ್‌ಡೌನ್‌ ಪ್ರದೇಶದೊಳಗಿನ ಜನರಿಗೆ ಥರ್ಮಲ್‌ ಸ್ಕ್ರಿನಿಂಗ್‌ ಮಾಡಲು ಮುಂದಾಗಿದ್ದಾರೆ.

ಸೋಂಕಿತರಿಂದ ಪ್ರಾಥಮಿಕ ಸಂಪರ್ಕ ಹೊಂದಿದ ಸಂಬಂಧಿಕರೊಳಗೊಂಡು ಒಟ್ಟು 16 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ತಾಲೂಕಾಡಳಿತ ಒಳಪಡಿಸಿದೆ. ಸೋಕಿತರ ಪೈಕಿ ನಾವದಗಿ ಗ್ರಾಮದ ವ್ಯಕ್ತಿ ಬಸ್‌ ಘಟಕದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದನೆಂದು ತಿಳಿದು ಬಂದಿದೆ. ಇತನ ಪ್ರಾಥಮಿಕ ಸಂಪರ್ಕಹೊಂದಿದ ನಾವದಗಿ ಗ್ರಾಮದಲ್ಲಿನ 8 ಜನರನ್ನು ಹಾಗೂ ತಾಳೀಕೋಟೆಯ ಮಿಲತ್‌ ನಗರ ಬಡಾವಣೆಯ 8 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮಿಲತ್‌ನಗರ ಪ್ರದೇಶ ಸೀಲ್‌ಡೌನ್‌ ವೇಳೆ ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಬಸವರಾಜ ಖಾಜಿಬಿಳಗಿ, ಶಿವು ಜುಮನಾಳ, ಎಸ್‌.ಎ. ಘತ್ತರಗಿ, ಮುನ್ನಾ ಅತ್ತಾರ ಇದ್ದರು.

ಕೋವಿಡ್ ಸೊಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ ಕುಟುಂಬಸ್ಥರು ಸೇರಿ ಇನ್ನುಳಿದವರನ್ನು ಜಮ್ಮಲದಿನ್ನಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಗೆ ಒಳಪಡಿಸಿದ್ದೇವೆ. ನಾವದಗಿ ಗ್ರಾಮದ ಸೊಂಕಿತನ ಮನೆ ಪ್ರದೇಶ ಹಾಗೂ ತಾಳಿಕೋಟೆಯ ಮಿಲತ್‌ ನಗರ ಬಡಾವಣೆ ಪ್ರದೇಶವನ್ನು ಕಂಟೇನ್ಮೆಂಟ್‌ ಝೋನ್‌ ಘೋಷಿಸಿದ್ದು ಅಗತ್ಯ ವಸ್ತು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಅನಿಲಕುಮಾರ ಢವಳಗಿ,
ತಹಶೀಲ್ದಾರ್‌

Advertisement

ಸೊಂಕಿತರು ಕಂಡು ಬಂದಿರುವ ಪ್ರದೇಶಗಳನ್ನು ಬ್ಯಾರಿಕೇಡ್‌ ಮತ್ತು ಮುಳ್ಳುಕಂಠಿಗಳ ಮೂಲಕ ಸೀಲ್‌ಡೌನ್‌ ಮಾಡಲಾಗಿದೆ. ಸಿಬ್ಬಂದಿ ನಿಯೋಜಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ.ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬೇರೆ ಬೇರೆ ರಾಜ್ಯಗಳಿಂದ ಯಾರಾದರೂ ಬಂದಿದ್ದರೆ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕು.
ಎಸ್‌.ಎಚ್‌. ಪವಾರ,
ಪಿಎಸೈ ತಾಳಿಕೋಟೆ

Advertisement

Udayavani is now on Telegram. Click here to join our channel and stay updated with the latest news.

Next