Advertisement

ತಾಳಿಕೋಟೆ: 10 ವರ್ಷದಲ್ಲಿ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ

05:50 PM Jan 26, 2021 | Nagendra Trasi |

ತಾಳಿಕೋಟೆ: ಕ್ಷೇತ್ರದ ಜನರು ಇಟ್ಟ ವಿಶ್ವಾಸಕ್ಕೆ ತಕ್ಕಂತೆ ಅವರ ನಿರೀಕ್ಷೆಗೂ ಮೀರಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದೇನೆ. ತಾಲೂಕಿನಲ್ಲಿಯ ಜನರ ಮತ್ತು ಅಧಿಕಾರಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಸೋಮವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದ ಜಾಗೆಯಲ್ಲಿ 1.55 ಕೋಟಿ ರೂ. ವೆಚ್ಚದ ಸಮುದಾಯ ಆರೋಗ್ಯ ಕೇಂದ್ರ ವಿಸ್ತರಿಸುವ
ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಳಿಕೋಟೆ ಪಟ್ಟಣ ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ. ನೂತನ ತಾಲೂಕು ಕೇಂದ್ರವಾಗಿಯೂ ಅಸ್ಥಿತ್ವಕ್ಕೆ ಬಂದಿರುವುದರಿಂದ ಎಲ್ಲ ಜನರ ಅನುಕೂಲಕ್ಕಾಗಿ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೆಡೆ ಸ್ಥಾಪಿಸುವುದಕ್ಕಾಗಿ ವಿಜಯಪುರ ರಸ್ತೆಯ 110 ಕೆವಿ ವಿದ್ಯುತ್‌ ಸ್ಥಾವರ ಘಟಕದ ಹಿಂದುಗಡೆ ಇರುವ
10 ಎಕರೆ ಜಾಗೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ.

ಪಟ್ಟಣಕ್ಕೆ ಅವಶ್ಯವಿರುವ ಎಲ್ಲ ಉದ್ಯಾನ ಅಭಿವೃದ್ಧಿಗೆ 5 ಕೋಟಿ, ಮುದ್ದೇಬಿಹಾಳ ಪಟ್ಟಣಕ್ಕೆ  5 ಕೋಟಿ, ನಾಲತವಾಡ ಪಟ್ಟಣಕ್ಕೆ 3 ಕೋಟಿ ಹೀಗೆ ಪ್ರತಿ ವರ್ಷ ಹಂತ ಹಂತವಾಗಿ ಗಾರ್ಡನ್‌ಗೆ ಹಣ ಬಿಡುಗಡೆಯಾಗಲಿದೆ. ಮುಂದಿನ ವರ್ಷ 25 ಕೋಟಿ ರೂ. ಬಿಡುಗಡೆಗೊಳಿಸಬೇಕೆಂಬ ಇಚ್ಚೆಯೊಂದಿಗೆ ಅಂದಾಜು ಪತ್ರ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಈಗಾಗಲೇ ಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆದಿವೆ.  ಇನ್ನೂ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ.
ಆದಷ್ಟು ಬೇಗನೆ ಬಿಡುಗಡೆಗೊಳಿಸುವ ಭರವಸೆ ಸಿಎಂ ಯಡಿಯೂರಪ್ಪ ನೀಡಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ್ದ ಖಾಸYತೇಶ್ವರ ಮಠದ ಬಾಲ
ಶಿವಯೋಗಿ ಸಿದ್ದಲಿಂಗ ದೇವರು ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಬದುಕನ್ನು ಹೇಗಾದರೂ ನಡೆಸಬಹುದು. ಹುಟ್ಟು ಹೇಗೆ ಆಕಸ್ಮಿಕವೋ ಸಾವು
ಕೂಡಾ ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ಮಾಡುವ ಕೆಲಸಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅಂತಹ ಅಭಿವೃದ್ಧಿ ಕಾರ್ಯಗಳನ್ನು ಜನರ ಆಶಾಭಾವನೆಗೆ ಧಕ್ಕೆ ಬರದಂತೆ ಅತಿ ವೇಗದ ರೀತಿಯಲ್ಲಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಮಾಡಿಸುತ್ತಿದ್ದಾರೆ ಎಂದರು.

Advertisement

ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ಸತೀಶ ತಿವಾರಿ, ಸಿಪಿಐ
ಆನಂದ ವಾಘೊ¾àಡೆ, ಡಾ| ಸತೀಶ ಹುಕ್ಕೇರಿ, ಡಾ| ಈರಘಂಟೆಪ್ಪ ತಳ್ಳೋಳ್ಳಿ, ಎಇಇ ಎಂ.ಎಂ. ಕಟ್ಟಿಮನಿ, ಕಿರಿಯ ಅಭಿಯಂತರ ಎಚ್‌.ವಿ. ಸಿಂಧಗೇರಿ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಜೈಸಿಂಗ್‌ ಮೂಲಿಮನಿ, ಕಾಶೀನಾಥ ಸಜ್ಜನ, ಎಂ.ಎಸ್‌. ಸರಶೆಟ್ಟಿ, ಮುದಕಣ್ಣ ಬಡಿಗೇರ, ವಿಠuಲ ಮೋಹಿತೆ, ರಾಘು ಮಾನೆ, ನಿಂಗು ಕುಂಟೋಜಿ, ಪ್ರಕಾಶ ಹಜೇರಿ, ಶರಣು ಗೊಟಗುಣಕಿ, ಮಾನಸಿಂಗ್‌ ಕೊಕಟನೂರ, ದ್ಯಾಮನಗೌಡ ಪಾಟೀಲ, ಕಾಶೀನಾಥ ಮುರಾಳ, ಬಿಜ್ಜು ನೀರಲಗಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next