Advertisement

ನೆರೆ ಪ್ರವಾಹಕ್ಕೆ ಕೇಂದ್ರದಿಂದ ಅತಿ ಹೆಚ್ಚು ಪರಿಹಾರ

05:22 PM Oct 09, 2019 | Naveen |

ತಾಳಿಕೋಟೆ: ನೆರೆ ಮತ್ತು ಬರ ಕೇವಲ ಈ ವರ್ಷಕ್ಕೆ ಸೀಮಿತವಾದುದಲ್ಲ. ಅದು ಸುಮಾರು 7 ದಶಕದಿಂದ ಆವರಿಸುತ್ತ ಬಂದಿದೆ. ಈ ವಿಚಾರವಾಗಿ ಯಾವ ಯಾವ ಸರ್ಕಾರದಲ್ಲಿ ಆಡಳಿತದ್ದಲ್ಲಿದ್ದಾಗಿ ಎಷ್ಟು ಸ್ಪಂದಿಸುತ್ತ ಬಂದಿದ್ದಾರೆಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್‌.
ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿಯೂ ಇಂತಹ ನೆರೆ ಪ್ರವಾಹ ಹಾಗೂ ಬರವನ್ನು ಎದುರಿಸಿದ್ದೇವೆ. 2009ರಲ್ಲಿಯೂ ಇಂತಹ ನೆರೆ ಪ್ರವಾಹ ಮತ್ತು ಬರ ಎದುರಿಸಿದ್ದೇವೆ. ಆ ಸಮಯದಲ್ಲಿ ಕೇಂದ್ರದಲ್ಲಿ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಕೇವಲ 300 ಕೋಟಿ ಪರಿಹಾರ ರಾಜ್ಯಕ್ಕೆ ನೀಡಿದ್ದಾರೆ. ಆದರೆ 2009ರಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಬಂದ 160 ಗ್ರಾಮಗಳನ್ನು
ಸ್ಥಳಾಂತರಿಸಿ ಪುನರ್ವಸತಿ ಗ್ರಾಮ ನಿರ್ಮಿಸಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ ಎಂದರು.

60 ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರು ನೆರೆ ಪರಿಹಾರ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಮತ್ತು ಒಂದೇ ಒಂದು ಹಳ್ಳಿಯನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನೆರೆ ಬಂದಾಗೊಮ್ಮೆ ರಾಜ್ಯಕ್ಕೆ 200 ಕೋಟಿ, 300 ಕೋಟಿ, ಕೊನೆಯದಾಗಿ 400 ಕೋಟಿ
ಕೊಟ್ಟ ದಾಖಲೆ ಇದೆ. ಆದರೆ ಈ ವರ್ಷ ನೆರೆ ಬಂದ ಪ್ರದೇಶದ ಪ್ರತಿ ಕುಟುಂಬದವರಿಗೆ ರಾಜ್ಯಸರ್ಕಾರ ತಕ್ಷಣ 10 ಸಾವಿರ ರೂ. ನೀಡಿದೆ. ಹಾನಿಯಾದ ಮನೆ ದುರಸ್ತಿಗೆ 1 ಲಕ್ಷ ರೂ., ಸಂಪೂರ್ಣ ಬಿದ್ದ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರದಿಂದ ಪ್ರತಿ ಬಾರಿ ನೆರೆ ಪರಿಹಾರ ಗಮನಿಸಿದರೆ ರಾಜ್ಯದಲ್ಲಿಯ ವಾಸ್ತವ ವರದಿ ತರಿಸಿಕೊಂಡ ಪ್ರಧಾನಿ ಮೋದಿಜಿ 1200 ಕೋಟಿ ರೂ. ಬಿಡುಗಡೆ ಮಾಡಿ ಕರ್ನಾಟಕ ಜನರ
ಮೇಲಿನ ಪ್ರೀತಿ ತೋರಿಸಿದ್ದಾರೆಂದರು.

ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸಗಳನ್ನು
ಮಾಡಿದ್ದಾರೆ. ಕೇವಲ ಬೊಗಳೆ ಹೇಳಿಕೆಗಳ ಮೂಲಕ ಚರ್ಚೆ ಮಾಡಲು ಹೊರಟಿರುವ ಕಾಂಗ್ರೆಸ್ಸಿಗರು ನೆರೆ ಪ್ರವಾಹಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಯಡಿಯೂರಪ್ಪ ಮೊನ್ನೆ ಆಲಮಟ್ಟಿಯಲ್ಲಿ ಬಾಗಿನ ಅರ್ಪಣೆಗೆ ಬಂದಾಗ 3ನೇ ಹಂತದ ನೀರಾವರಿ ಯೋಜನೆಗಳ ಕಾರ್ಯಗತಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಟ್ಟು ಕಾರ್ಯಗತಗೊಳಿಸುತ್ತೇನೆಂದು ಈ ಭಾಗದ ಜನರಲ್ಲಿಯ ಆಶಾಭಾವನೆ ಜೀವ ಕಳೆ ತಂದಿದ್ದಾರೆ .2009ರಲ್ಲಿ ಹೊಸಪೇಟೆಯಿಂದ-ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿದ ಕಾಂಗ್ರೇಸ್‌ ನಾಯಕರು ಗುಡಿಯಲ್ಲಿ ಟೆಂಗಿನಕಾಯಿ ಇಟ್ಟು ಆಣೆ ಪ್ರಮಾಣ ಮಾಡಿ ಈ ಭಾಗದ ನೀರಾವರಿ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಕೊಡ್ತೇವೆ ಎಂದು ಹೇಳಿ ಈ ಭಾಗದ ಜನರಿಗೆ ವಂಚಿಸಿರುವದು ಈ ಭಾಗದ ಜನರು ಇನ್ನೂ ಮರೆತಿಲ್ಲ ಎಂದು ಹೇಳಿದರು.

Advertisement

ಬಿಜೆಪಿಯುವ ಘಟಕದ ತಾಲೂಕಾಧ್ಯಕ್ಷ ರಾಘವೇಂದ್ರ ಚವ್ಹಾಣ, ಪುರಸಭೆ ಸದಸ್ಯರುಗಳಾದ ವಾಸುದೇವ ಹೆಬಸೂರ, ಜಯಸಿಂಗ್‌ ಮೂಲಿಮನಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಬಸವರಾಜ ಹೊಟ್ಟಿ, ನಿಂಗು ಕುಂಟೋಜಿ, ಮಹಾಂತೇಶ
ಇಂಗಳಗಿ, ಮುದಕಣ್ಣ ಬಡಿಗೇರ, ನಿರಂಜನಶಾ ಮಕಾಂದಾರ, ಎಪಿಎಂಸಿ ಸದಸ್ಯ ಬಿಜ್ಜು ನೀರಲಗಿ, ವಿಠ್ಠಲ  ಮೋಹಿತೆ, ಮಾನಸಿಂಗ್‌ ಕೊಕಟನೂರ, ಚಿತ್ತರಗಿ, ಸನಾ ಕೆಂಭಾವಿ, ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next