ವಾಷಿಂಗ್ಟನ್ : ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಉಪಟಳ ಹೆಚ್ಚಳವಾಗಿದ್ದು ತಾಲಿಬಾನ್ ಉಗ್ರ ಪಡೆ ಅಫ್ಗಾನ್ ನ ಬಹುತೇಕ ಎಲ್ಲಾ ಕಡೆ ಹೆಚ್ಚುವರಿ ಉಗ್ರರನ್ನು ನಿಯೋಜನೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ತಾಲಿಬಾನ್ ಪಡೆಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಸಂಪೂರ್ಣವಾಗಿ ಹಿಡಿತ ಸಾಧಿಸಲು ಸರ್ವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ. ಇನ್ನು, ಕಾಬೂಲ್ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರವೇಶದ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಿದೆ ಎಂದು ಅಮೆರಿಕದ ಭದ್ರತಾ ಪ್ರಧಾನ ಕಚೇರಿ ಪೆಂಟಗನ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಕಾಬೂಲ್ ನಿಂದ ದೆಹಲಿಗೆ ಇಂದು 180 ಮಂದಿ ಏರ್ ಲಿಫ್ಟ್..!
ಈ ಬಗ್ಗೆ ಪ್ರತಜಿಕ್ರಿಯಿಸಿದ ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ, ವಿದೇಶಿಗರನ್ನು ವಾಪಾಸ್ ಕರೆದೊಯ್ಯಲು ಅಫ್ಗಾನಿಸ್ತಾನದಲ್ಲಿರುವ ಏಕೈಕ ದಾರಿ ಅಂತಂದರೆ ಅದು ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಆ ಭಾಗದಲ್ಲಿ ತಾಲಿಬಾನ್ ತನ್ನ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುತ್ತಿದೆ. ಇದು ಸಂಪೂರ್ಣ ಹಿಡಿತ ಸಾಧಿಸುವುದಕ್ಕೆ ತಾಲಿಬಾನ್ ಮಾಡುತ್ತಿರುವ ಪ್ರಯತ್ನವೆಂದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣವನ್ನು ಅಮೆರಿಕದ ರಾಯಭಾರ ಕಚೇರಿಯು ನಿರ್ವಹಿಸುತ್ತಿದೆ. ಆದರೇ, ಆಗಸ್ಟ್ 31 ರ ಬಳಿಕ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ನಿರ್ವಹಿಸುವುದು ಅಮೆರಿಕಾ ಅಲ್ಲ. ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತದೆ ಎಂದಿದ್ದಲ್ಲದೇ, ತಾಲಿಬಾನ್ ಉಗ್ರರ ಉದ್ದೇಶ ಏನೆನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. . ಅಂತಾರಾಷ್ಟ್ರೀಯ ಸಮುದಾಯಗಳ ಜೊತೆ ಅದು ಹೇಗೆ ಮುಂದುವರಿಯುತ್ತದೆ ಎನ್ನುವುದನ್ನು ತಾಲಿಬಾನ್‌ಗಳು ನಿರ್ಧರಿಸಬೇಕು ಎಂದಿದ್ದಾರೆ.
ಇನ್ನು, ತಾಲಿಬಾನ್ ಸಂಘಟನೆಯ ಕಮಾಂಡರ್ ಗಳ ಜೊತೆ ನಿತ್ಯ ನಿರಂತರವಾಗಿ ಸಂವಹನ ನಡೆಯುತ್ತದೆ. ಯಾರನ್ನು ಏರ್ ಲಿಫ್ಟ್ ಮಾಡಲಾಗುತತದೆ ಎನ್ನುವುದರ ಬಗ್ಗೆ ನಾವು ತಾಲಿಬಾನ್ ನೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಆದರೇ, ಇದು ಎಲ್ಲಾ ಸಂದರ್ಭದಲ್ಲಿ ನಮ್ಮ ನಿಯಂತ್ರಣಲ್ಲಿಲ್ಲ. ತಾಲಿಬಾನ್ ನಮ್ಮ ಮಾತುಕತೆಗಳ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎನ್ನುವುದಕ್ಕೆ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,164 ಕೋವಿಡ್ ಪ್ರಕರಣ ಪತ್ತೆ, ಶೇ.22.7ರಷ್ಟು ಏರಿಕೆ