Advertisement

ಅಫ್ಘಾನ್ ನಲ್ಲಿ ಚುನಾವಣೆ ಆಯೋಗವನ್ನೇ ವಿಸರ್ಜಿಸಿದ ತಾಲಿಬಾನ್ ಸರ್ಕಾರ!

03:11 PM Dec 27, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರವು ದೇಶದ ಚುನಾವಣಾ ಆಯೋಗವನ್ನು ವಿಸರ್ಜಿಸಿದೆ. ಇದರೊಂದಿಗೆ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವಾಲಯವನ್ನು ತಾಲಿಬಾನ್ ತ್ಯಜಿಸಿದೆ.

Advertisement

ತಾಲಿಬಾನ್ ನೇತೃತ್ವದ ಅಫ್ಘಾನಿಸ್ಥಾನದ ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಂ ಅವರು ಈ ಘೋಷಣೆ ಮಾಡಿದ್ದಾರೆ. ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣಾ ದೂರು ಆಯೋಗವನ್ನು ವಿಸರ್ಜಿಸಲಾಗಿದೆ ಎಂದರು.

ಈ ಆಯೋಗಗಳು ಸದ್ಯದ ಅಫ್ಘಾನಿಸ್ಥಾನದ ರಾಜಕೀಯ ಪರಿಸ್ಥಿತಿಯಲ್ಲಿ ಅನಗತ್ಯ ಎಂದು ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಈ ಆಯೋಗಗಳ ಅಗತ್ಯವಿದ್ದರೆ ತಾಲಿಬಾನ್ ಇವುಗಳನ್ನು ಮತ್ತೆ ಕಾರ್ಯರೂಪಕ್ಕೆ ತರಲಿದೆ ಎಂದಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ‘ಸರ್ವಧರ್ಮ ಸಮನ್ವಯತೆ’ಯ ಪಾಠ ಮಾಡಿದ ಸಿ.ಟಿ ರವಿ

ಈ ಎರಡು ಆಯೋಗಗಳು ದೇಶದಲ್ಲಿ ಎಲ್ಲಾ ಮಾದರಿಯ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿತ್ತು. ಅಧ್ಯಕ್ಷೀಯ, ಸಂಸದೀಯ ಮತ್ತು ಪ್ರಾಂತೀಯ ಕೌನ್ಸಿಲ್ ಚುನಾವಣೆಗಳು ಈ ಆಯೋಗದ ಮುತುವರ್ಜಿಯಲ್ಲಿ ನಡೆಯುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next