ಕಾಬೂಲ್: ಸಂಪೂರ್ಣ ಅಫ್ಘಾನಿಸ್ಥಾನವನ್ನು ವಶಕ್ಕೆ ಪಡೆದಿದ್ದೇವೆಂದು ಸರ್ಕಾರ ರಚಿಸಲು ತಾಲಿಬಾನ್ ಮುಂದಾಗಿದೆ. ಆದರೆ ಕಾಬೂಲ್ ನಲ್ಲಿ ಅಫ್ಘಾನ್ ಮಹಿಳೆಯರು ಬೀದಿಗಿಳಿದಿದ್ದಾರೆ. ಪಾಕಿಸ್ಥಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ಮಹಿಳೆಯರು ಕಾಬೂಲ್ ನಲ್ಲಿ ರ್ಯಾಲಿ ನಡೆಸಿದರು.
ಪಾಕ್ ವಿರುದ್ಧದ ಮಹಿಳೆಯರ ರ್ಯಾಲಿಯನ್ನು ಚದುರಿಸಲು ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ. ರ್ಯಾಲಿಯು ಕಾಬೂಲ್ ನ ಅಧ್ಯಕ್ಷೀಯ ಅರಮನೆಯತ್ತ ಬಂದಾಗ ಗುಂಪನ್ನು ಚದುರಿಸಲು ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ.
ಪ್ರತಿಭಟನಾಕಾರರು ಕಾಬೂಲ್ ನ ಸೆರೆನಾ ಹೋಟೆಲ್ ನತ್ತ ದೌಡಾಯಿಸುತ್ತಿದ್ದರು. ಆ ಹೋಟೆಲ್ ನಲ್ಲಿ ಕಳೆದ ಒಂದು ವಾರದಿಂದ ಪಾಕಿಸ್ಥಾನದ ಐಎಸ್ ಐ ನಿರ್ದೇಶಕ ಉಳಿದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ಅತ್ತ ಹೋಗುತ್ತಿದ್ದರು ಎಂದು ಸುದ್ದಿ ಸಂಸ್ತೆ ಅಶ್ವಕಾ ವರದಿ ಮಾಡಿದೆ.
ನೂರಾರು ಅಫ್ಘಾನ್ ಪುರುಷರು ಮತ್ತು ಮಹಿಳೆಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋಗಳನ್ನು ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿವೆ. ಅಫ್ಘಾನಿಸ್ತಾನದ ಉತ್ತರದಲ್ಲಿರುವ ಬಾಲ್ಖ್ ಪ್ರಾಂತ್ಯದಲ್ಲಿ ನೂರಾರು ಜನರು ಆಂದೋಲನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪಂಜ್ ಶೀರ್ ನಲ್ಲಿ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ
ಬುರ್ಖಾ ಮತ್ತು ನಿಖಾಬ್ ಗಳನ್ನು ಧರಿಸಿರುವ ಅಫ್ಘಾನ್ ಮಹಿಳೆಯರು “ಸ್ವಾಂತ್ರತ್ರ್ಯ ಸ್ವಾಂತ್ರತ್ರ್ಯ”, “ಪಾಕಿಸ್ಥಾನಕ್ಕೆ ಸಾವಾಗಲಿ”, “ಐಎಸ್ ಐ ಗೆ ಸಾವಾಗಲಿ” ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಒಂದು ವೀಡಿಯೋದಲ್ಲಿ, ಅಫ್ಘಾನಿಸ್ತಾನ ಮಹಿಳೆಯೊಬ್ಬರು “ಪಂಜಶೀರ್ ಮೇಲೆ ಆಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ, ಪಾಕಿಸ್ತಾನ ಅಥವಾ ತಾಲಿಬಾನ್ ಗೂ ಈ ಹಕ್ಕು ಇಲ್ಲ” ಎಂದು ಹೇಳುತ್ತಿರುವುದು ಸೆರೆಯಾಗಿದೆ. ಸೋಮವಾರ ತಾಲಿಬಾನ್ ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ.