Advertisement
ಇತ್ತೀಚೆಗೆ ಅಲ್ಲಿನ ಒಂದು ಸ್ಥಳಿಯ ಮಾಧ್ಯಮದ ಸಂದರ್ಶನವೋಂದರಲ್ಲಿ ಭಾಗಿಯಾಗಿ ಮಾತನಾಡಿದ ತಾಲಿಬಾನ್ ಉಗ್ರ ಪಡೆಯ ಪ್ರಮುಖ ಮುಖಂಡರು, ಹಿಜಾಬ್ ಇಲ್ಲದ ಮಹಿಳೆಯರನ್ನು ಕತ್ತರಿಸಿದ ಕಲ್ಲಂಗಡಿ ಇದ್ದ ಹಾಗೆ ಎಂದು ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Related Articles
Advertisement
ಇನ್ನು, ನಿನ್ನೆ (ಸಪ್ಟೆಂಬರ್ 7) ತಾಲಿಬಾನ್ ಉಗ್ರ ಪಡೆ ತನ್ನ ಸರ್ಕಾರವನ್ನು ರಚಿಸಿದ್ದು, ಶರಿಯಾ ಕಾನೂನನ್ನು ಅಫ್ಗಾನಿಸ್ತಾನದಲ್ಲಿ ಜಾರಿಗೆ ತಂದಿದೆ. ವಿಶ್ವ ಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮೊಹಮ್ಮದ್ ಹಸನ್ ಅಖುಂದ್ ಹೊಸ ಪ್ರಧಾನಿ ಯಾಗಿದ್ದಾನೆ. ಅಬ್ದುಲ್ ಘನಿ ಬರಾದರ್ ಉಪ ಪ್ರಧಾನಿಯಾದರೆ, ಜಾಗತಿಕ ಉಗ್ರ ಸಿರಾಜುದ್ದೀನ್ ಹಖಾನಿಯನ್ನು ಆಂತರಿಕ ಸಚಿವ(ಗೃಹ ಸಚಿವ) ಎಂದು ಘೋಷಿಸಲಾಗಿದೆ.
ದೋಹಾ ಟೀಂ ಮತ್ತು ಹಖಾನಿ ತಂಡದ ಸಮ್ಮಿಶ್ರಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಇದು ಮಧ್ಯಂತರ ಸರ್ಕಾರವೆಂದು ತಾಲಿಬಾನ್ ಹೇಳಿಕೊಂಡಿದೆ. ಮುಲ್ಲಾ ಒಮರ್ ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ರಕ್ಷಣೆ, ಹಿದಾಯಿ ತುಲ್ಲಾ ಬದ್ರಿ ಹಣಕಾಸು, ಆಮೀರ್ ಖಾನ್ ಮುತ್ತಾ ಖೀ ವಿದೇಶಾಂಗ, ಶೇರ್ ಅಬ್ಟಾಸ್ ಸ್ಟಾನಿಕ್ ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್ ಹಕೀಮ್ ಕಾನೂನು ಸಚಿವ, ಕೈರುಲ್ಲಾಹ್ ಖೈರುಕ್ವಾ ಮಾಹಿತಿ ಸಚಿವ, ಜಬೀಯುಲ್ಲಾಹ್ ಮುಜಾಹಿದ್ ಉಪ ಮಾಹಿತಿ ಸಚಿವನಾಗಿದ್ದಾನೆ.
ಸದ್ಯ ಈ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ಪ್ರಕಟಿಸಲಾಗುತ್ತದೆ ಎಂದು ತಾಲಿಬಾನ್ ಉಗ್ರ ಪಡೆಯ ವಕ್ತಾರ ಜಬೀವುಲ್ಲಾಹ್ ಮುಜಾಹಿದ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು