Advertisement

ಬಾಂಬ್‌ ಸ್ಫೋಟ: ತಾಲಿಬಾನ್‌ ಗವರ್ನರ್‌ ಸೇರಿ ಮೂವರು ಸಾವು

08:44 PM Mar 09, 2023 | Team Udayavani |

ಕಾಬೂಲ್‌: ಅಫ್ಘಾನಿಸ್ತಾನದ ಮಜಾರ್‌-ಇ-ಷರೀಫ್ ಪ್ರದೇಶದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಪ್ರಾಂತೀಯ ಗವರ್ನರ್‌ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್‌ ಪೊಲೀಸ್‌ ವಕ್ತಾರ ತಿಳಿಸಿದ್ದಾರೆ.

Advertisement

ತಾಲಿಬಾನ್‌ ಆಡಳಿತದಿಂದ ನೇಮಕಗೊಂಡಿದ್ದ ಗವರ್ನರ್‌ ದಾವೂದ್‌ ಮುಜ್ಮಲ್‌ ಅವರ ಕಚೇರಿಯ ಒಳಗೆ ಬಾಂಬ್‌ ಸ್ಫೋಟಗೊಂಡಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈವರೆಗೆ ಕೃತ್ಯದ ಹೊಣೆಯನ್ನು ಯಾರೂ ಹೊತ್ತಿಲ್ಲ.

ಆದಾಗ್ಯೂ ತಾಲಿಬಾನ್‌ ವಿರೋಧಿ ಉಗ್ರಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್ಸ್‌ನ ಖೊರಾಸನ್‌ ಘಟಕ, ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ತಾಲಿಬಾನ್‌ ಮುಖ್ಯ ವಕ್ತಾರ ಜಬೀಬುಲ್ಲಾ ಮುಜಾಹಿದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next