Advertisement

 ಅಫ್ಗಾನಿಸ್ತಾನ : ಕಾಬೂಲ್ ನನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ : ತಾಲಿಬಾನ್

06:14 PM Aug 15, 2021 | Team Udayavani |

ಕಾಬೂಲ್ : ಅಫ್ಗಾನ್ ಮೇಲೆ ತಾಲಿಬಾನ್ ಉಗ್ರ ಪಡೆಗಳ ದಾಳಿ ಮುಂದುವರಿದಿದ್ದು, ಅಫ್ಗಾನಿಸ್ತಾನದ ಮೇಲೆ ಬಿಗಿ ಹಿಡಿತ ಸಾಧಿಸಲು ಕಾಬೂಲ್‌ ನಗರದ ಹೊರವಲಕ್ಕೆ ಮುತ್ತಿಗೆ ಹಾಕಿದೆ.

Advertisement

ಅಫ್ಗಾನಿಸ್ತಾನದ ರಾಜಧಾನಿಯನ್ನು ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ‘ಯಾವುದೇ ವ್ಯಕ್ತಿಯ ಜೀವ, ಆಸ್ತಿ ಮತ್ತು ಘನತೆಗೆ ಧಕ್ಕೆ ತರುವುದಿಲ್ಲ. ಕಾಬೂಲ್‌ ನಾಗರಿಕರ ಜೀವಕ್ಕೂ ಯಾವುದೇ ರೀತಿಯ ಅಪಾಯವಿಲ್ಲ’ಎಂದು ತಾಲಿಬಾನ್‌ ಸ್ಪಷ್ಟಪಡಿಸಿದೆ.

ಈ ನಡುವೆ  ಪ್ರತಿಕ್ರಿಯಿಸಿದ ಅಫ್ಗಾನ್ ನಅಧಿಕಾರಿಯೊಬ್ಬರು, ರಾಸಮೀಪದ ಕಲಕನ್‌, ಖರಾಬಾಗ್‌ ಮತ್ತು ಪಘಮಾನ್‌ ಜಿಲ್ಲೆಗಳಲ್ಲಿ ತಾಲಿಬಾನ್‌ ಉಗ್ರರು ಬೀಡುಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಚಿವ ಈಶ್ವರಪ್ಪ ಮತ್ತು ಸಿ.ಟಿ.ರವಿ ನಾಲಾಯಕರು : ಧ್ರುವನಾರಾಯಣ್  

ಸಹಸ್ರಾರು ನಾಗರಿಕರು ಕಾಬೂಲ್‌ನ ಉದ್ಯಾನಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ತಾವು ಉಳಿತಾಯ ಮಾಡಿದ ಹಣ ವಾಪಸ್‌ ಪಡೆಯಲು ನೂರಾರು ಮಂದಿ ಖಾಸಗಿ ಬ್ಯಾಂಕ್‌ಗಳ ಮುಂದೆ ಸೇರಿದ್ದಾರೆ.

Advertisement

ಆತಂಕಗೊಂಡ ನೌಕರರು ಸರ್ಕಾರಿ ಕಚೇರಿಗಳಿಂದ ಪರಾರಿಯಾಗಿದ್ದಾರೆ.ಹಲವೆಡೆ ಬಂದೂಕಿನ ಗುಂಡುಗಳನ್ನು ಸಿಡಿಸಿರುವ ಶಬ್ದಗಳು ಕೇಳಿ ಬಂದಿದೆ. ಆದರೆ, ದಾಳಿಯನ್ನು ಅಫ್ಗನ್‌ ಅಧ್ಯಕ್ಷರ ಕಚೇರಿ ನಿರಾಕರಿಸಿದೆ ಎಂದು ವರದಿಯಾಗಿದೆ.

ಇನ್ನು, ‘ಅಂತರರಾಷ್ಟ್ರೀಯ ಪಡೆಗಳ ನೆರವಿನೊಂದಿಗೆ ಭದ್ರತಾ ಪಡೆಗಳು ಕಾಬೂಲ್‌ ನಗರವನ್ನು ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ತಿಳಿದು ಬಂದಿದೆ.

ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಹೆಲಿಕಾಪ್ಟರ್‌ ಗಳು ಬಂದಿಳಿದಿದ್ದು, ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯುಎಚ್‌–60 ಹೆಲಿಕಾಪ್ಟರ್‌ ಗಳು ಇವಾಗಿವೆ. ಅಮೆರಿಕ ರಾಯಭಾರಿ ಕಚೇರಿ ಸಮೀಪ ಸಣ್ಣದಾಗಿ ಹೊಗೆ ಕಾಣಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ  ಇಬ್ಬರು ಮಿಲಿಟರಿ ಅಧಿಕಾರಿಗಳು, ಹಲವು ಸೂಕ್ಷ್ಮ ದಾಖಲೆಗಳಿಗೆ ರಾಜತಾಂತ್ರಿಕರು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶಸ್ತ್ರಧಾರಿ ಸೈನಿಕರ ಜೊತೆ ‘ಅಪ್ಪು’ |’ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎಂದ ‘ಜೇಮ್ಸ್’

Advertisement

Udayavani is now on Telegram. Click here to join our channel and stay updated with the latest news.

Next