ಇಸ್ಲಾಮಾಬಾದ್/ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಂಡ ನಂತರ ತಾಲಿಬಾನ್ ಪರಮೋಚ್ಛ ನಾಯಕ ಹೈಬತುಲ್ಲಾ ಅಕುಂಡ್ಜಾದ ಇನ್ನೂ ಯಾಕೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್: ಭಾರತದ ಎರಡು ರಾಯಭಾರ ಕಚೇರಿಗೆ ನುಗ್ಗಿ ಕಾರನ್ನು ಕೊಂಡೊಯ್ದ ತಾಲಿಬಾನ್!
ರಹಸ್ಯವಾಗಿ ಬಂಧನದಲ್ಲಿರುವ ಹೈಬತುಲ್ಲಾ ಕುರಿತು ವಿದೇಶಿ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಪರಿಶೀಲಿಸುತ್ತಿರುವ ಭಾರತದ ಸರ್ಕಾರ ಮಾಹಿತಿಯೊಂದನ್ನು ಹೊರಹಾಕಿದೆ. ತಾಲಿಬಾನ್ ವರಿಷ್ಠ ನಾಯಕ ಹೈಬತುಲ್ಲಾ ಪಾಕಿಸ್ತಾನದ ಸೇನೆಯ ಹಿಡಿತದಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹೇಳಿದೆ.
ಕಳೆದ ಆರು ತಿಂಗಳಿನಿಂದ ತಾಲಿಬಾನ್ ಬಂಡುಕೋರ, ಭಯೋತ್ಪಾದಕ ಹೈಬತುಲ್ಲಾ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮೇ ತಿಂಗಳಿನಲ್ಲಿ ನಡೆದ ಈದ್ ಉಲ್ ಫಿತರ್ ಸಂದರ್ಭದಲ್ಲಿ ಮಾತ್ರ ಹೈಬತುಲ್ಲಾ ಕೊನೆಯದಾಗಿ ಬಹಿರಂಗ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಈ ಪರಿಸ್ಥಿತಿಯನ್ನು ಪಾಕಿಸ್ತಾನ ಹೇಗೆ ನಿಭಾಯಿಸಲಿದೆ ಎಂಬ ಕುತೂಹಲ ಭಾರತಕ್ಕೂ ಇದ್ದಿರುವುದಾಗಿ ಮೂಲಗಳು ಹೇಳಿವೆ. ತಾಲಿಬಾನ್ ನಾಯಕ ಅಖ್ತರ್ ಮನ್ಸೂರ್ ನನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆಗೈದ ಬಳಿಕ 2016ರ ಮೇ ತಿಂಗಳಿನಲ್ಲಿ ಹೈಬತುಲ್ಲಾ ನನ್ನು ತಾಲಿಬಾನ್ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
ಎಎಫ್ ಪಿ ವರದಿಯಲ್ಲಿ ವಿಶ್ಲೀಷಿಸಿದಂತೆ, ಹೈಬತುಲ್ಲಾ(50ವರ್ಷ) ತಾಲಿಬಾನ್ ಬಂಡುಕೋರ ಎಂಬುದಕ್ಕಿಂತ ಹೆಚ್ಚಾಗಿ ಕಾನೂನು ತಜ್ಞ ಎಂದೇ ಗುರುತಿಸಿಕೊಂಡಿದ್ದಾರೆ. ಈತನನ್ನು ನಂಬಿಕಸ್ಠ ಕಮಾಂಡರ್ ಎಂದು ಕೂಡಾ ಕರೆಯಲಾಗುತ್ತದೆ. ಲಷ್ಕರ್ ಎ ತೊಯ್ಬಾ ಹಾಗೂ ಜೈಶ್ ಎ ಮೊಹಮ್ಮದ್ ನಂತಹ ಉಗ್ರಗಾಮಿ ಸಂಘಟನೆಗಳು ತಾಲಿಬಾನ್ ಜತೆ ಕೈಜೋಡಿಸುತ್ತಿರುವ ಕುರಿತು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎಂದು ವರದಿ ತಿಳಿಸಿದೆ.