Advertisement

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

08:20 AM Nov 28, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರವಾಗುತ್ತಾ ಬಂದರೂ ಇನ್ನೂ ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ರೇಸ್‌ ನಲ್ಲಿದ್ದ ಏಕನಾಥ್‌ ಶಿಂಧೆ ಇದೀಗ ಹಿಂದೆ ಸರಿದಿದ್ದು, ಬಿಜೆಪಿಯ ವ್ಯಕ್ತಿಯೇ ಮಹಾರಾಷ್ಟ್ರ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದೆ.

Advertisement

ಅಲ್ಲದೆ ಶಿಂಧೆ ಶಿವಸೇನೆಯ ಒಬ್ಬರು ಮತ್ತು ಅಜಿತ್ ಪವಾರ್‌ ಎನ್‌ ಸಿಪಿಯ ಒಬ್ಬರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿ ಹೇಳಿದೆ.

288 ಸ್ಥಾನಗಳ ಮಹಾ ವಿಧಾನಸಭೆಯಲ್ಲಿ ಬಿಜೆಪಿಯು ಸ್ವಂತವಾಗಿ 132 ಅಸೆಂಬ್ಲಿ ಸ್ಥಾನಗಳನ್ನು ಗೆದ್ದುಕೊಂಡಿದೆ. ಮಿತ್ರಪಕ್ಷಗಳ ಮಹಾಯುತಿ ಒಕ್ಕೂಟವು ಒಟ್ಟು 235 ಸ್ಥಾನಗಳನ್ನು ಗೆದ್ದಿದೆ.

ಹೊಸ ಮುಖ್ಯಮಂತ್ರಿಯನ್ನು ಇನ್ನೂ ಹೆಸರಿಸದಿದ್ದರೂ, 2014 ಮತ್ತು 2019 ರ ನಡುವೆ ಅಧಿಕಾರದಲ್ಲಿದ್ದ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಸಿಎಂ ಆಗುವುದು ಬಹುತೇಕ ನಿಶ್ಚಿತ.

ಬುಧವಾರ ತಮ್ಮ ನಿವಾಸದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಶಿಂಧೆ, “ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಮೋದಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವಾಗಿರಲಿದ್ದೇವೆ. ಯಾವುದೇ ರೀತಿಯ ಅಡ್ಡಗಾಲು ಹಾಕುವುದಿಲ್ಲ. ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಕರೆ ಮಾಡಿ ಸಿಎಂ ಆಯ್ಕೆ ಮಾಡಿ ಎಂದು ನಾನೇ ಹೇಳಿದೆ’ ಎಂದು ಹೇಳಿದರು.

Advertisement

“ನಮ್ಮ ಶಿವಸೇನೆ ಬಿಜೆಪಿಗೆ ಎಂದೆಂದಿಗೂ ಬೆಂಬಲ ನೀಡಲಿದೆ. ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಬದ್ಧರಾಗಿರುತ್ತೇವೆ. ನಮಲ್ಲಿ ಯಾರಿಗೂ ಬೇಸರವಾಗಿಲ್ಲ. ನಾವು ಮಹಾಯುತಿಯ ಒಳಿತಿಗಾಗಿ ದುಡಿಯುತ್ತೇವೆ. ನಾನೊಬ್ಬ ಕಾರ್ಯಕರ್ತ, ನನಗೆ ಸಿಎಂ ಎಂದರೆ ಚೀಫ್ ಮಿನಿಸ್ಟರ್‌ ಅಲ್ಲ, ಕಾಮನ್‌ಮ್ಯಾನ್‌. ಗುರುವಾರ ನಾವೆಲ್ಲರೂ ದೆಹಲಿ ಪ್ರಯಾಣ ಕೈಗೊಳ್ಳುತ್ತಿದ್ದೇವೆ. ಈ ವೇಳೆ ನಾವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ’ ಎಂದರು.

ಮುಖ್ಯಮಂತ್ರಿ ಸ್ಥಾನ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಏಕನಾಥ್‌ ಶಿಂಧೆ ಹಾಗೂ ಅವರ ಬೆಂಬಲಿಗರು ಬೇಸರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಆದರೆ ಪತ್ರಿಕಾಗೋಷ್ಠಿಯ ಸಮಯದಲ್ಲಿ ಶಿಂಧೆ ಯಾವುದೇ ಬೇಸರವನ್ನು ತೋರಿಸಿಕೊಂಡಿಲ್ಲ. ಮಹಾರಾಷ್ಟ್ರ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷೆ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next