ವಾಷಿಂಗ್ಟನ್: ತಾಲಿಬಾನ್ ಮಿಲಿಟರಿ ಸಂಘಟನೆಯಲ್ಲ. ಆದರೆ ಅವರು ಕೂಡಾ ಸಾಮಾನ್ಯ ನಾಗರಿಕರು ಎಂದು ಪಾಕಿಸ್ತಾನ ಮುಖ್ಯಮಂತ್ರಿ ಇಮ್ರಾನ್ ಖಾನ್ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಕಾಂಗ್ರೆಸ್ ನತ್ತ ಮುಖ ಮಾಡಿದ್ರಾ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ .?
ಗಡಿಭಾಗದಲ್ಲಿ ಮೂವತ್ತು ಲಕ್ಷ ಮಂದಿ ನಿರಾಶ್ರಿತರಿದ್ದು, ಪಾಕಿಸ್ತಾನ ಹೇಗೆ ಉಗ್ರರನ್ನ ಸದೆಬಡಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಖಾನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಪಿಬಿಎಸ್ ನ್ಯೂಸ್ ಹವರ್ ಪ್ರಸಾರ ಮಾಡಿರುವ ಖಾನ್ ಸಂದರ್ಶನದಲ್ಲಿ, ಪಾಕ್ ಗಡಿಯ ಒಂದು ಕಡೆ ಅಫ್ಘಾನಿಸ್ತಾನದ ಐದು ಲಕ್ಷ ನಿರಾಶ್ರಿತರಿದ್ದಾರೆ, ಮತ್ತೊಂದೆಡೆ ಒಂದು ಲಕ್ಷ ಮಂದಿ ಠಿಕಾಣಿ ಹೂಡಿರುವ ನಿರಾಶ್ರಿತರ ಶಿಬಿರವಿದೆ. ಅದರಲ್ಲಿ ತಾಲಿಬಾನಿಗಳು ಸೇರಿಕೊಂಡಿದ್ದರೆ, ಅವರನ್ನು ಪತ್ತೆ ಹಚ್ಚಿ ದಾಳಿ ಮಾಡಲು ಹೇಗೆ ಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ತಿಳಿಸಿದೆ.
ಪಾಕಿಸ್ತಾನ ಉಗ್ರರಿಗೆ ಸುರಕ್ಷಿತ ಸ್ಥಳ ಎಂಬ ಆರೋಪದ ಕುರಿತ ಪ್ರಶ್ನೆಗೆ, ಸುರಕ್ಷಿತ ಸ್ಥಳಗಳು ಎಲ್ಲಿವೆ? ಪಾಕಿಸ್ತಾನದಲ್ಲಿ ಮೂವತ್ತು ಲಕ್ಷ ಮಂದಿ ನಿರಾಶ್ರಿತರಿದ್ದಾರೆ. ಆ ನಿರಾಶ್ರಿತರು ಕೂಡಾ ತಾಲಿಬಾನ್ ಜನಾಂಗದ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಪ್ರತಿಕ್ರಿಯಿಸಿರುವುದಾಗಿ ವರದಿ ವಿವರಿಸಿದೆ.
ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಆರ್ಥಿಕ ನೆರವನ್ನು ನೀಡುವ ಮೂಲಕ ಅಫ್ಘಾನಿಸ್ತಾನ್ ಸರ್ಕಾರದ ವಿರುದ್ಧ ಹೋರಾಡಲು ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಇಮ್ರಾನ್ ಖಾನ್ ಇದೊಂದು ಅಸ್ವಾಭಾವಿಕ ಆರೋಪ ಎಂದು ಹೇಳಿದರು.