Advertisement

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

08:44 PM May 30, 2020 | Hari Prasad |

ಪ್ರಯತ್ನ ಒಂದಿದ್ದರೆ ಸಾಕು ಜಗತ್ತಿನಲ್ಲಿ ಎಲ್ಲವನ್ನು ಗೆಲ್ಲಬಹುದು, ಕ್ರೀಡಾ ಕ್ಷೇತ್ರದಲ್ಲಿ ಗೆಲುವಿನ ಗುರಿ ತಲುಪುವವರೆಗೆ ಅಚಲವಾದ ನಂಬಿಕೆ ಮತ್ತು ವಿಶ್ವಾಸ ನಮ್ಮಲ್ಲಿ ಧೃಡವಾಗಿರಬೇಕು. ಸಾಧನೆಯ ಸಮಯದಲ್ಲಿ ಸೋಲು ನಮಗೆ ಕಟ್ಟಿಟ್ಟ ಬುತ್ತಿ. ಅದಕ್ಕೆ ಹಿಂಜರಿಯದೇ ಮುನ್ನಡೆಯಬೇಕು ಹೀಗೆ ಕ್ರೀಡೆಯಲ್ಲಿ ಮುಂದುವರಿಯಬೇಕು.

Advertisement

ಇಂಥ ಸಾಧನೆಯ ಹಾದಿಯಲ್ಲಿ ಸತತವಾದ ಪ್ರಯತ್ನ ಪಡುವವರು ಬೇಬಿ. ಇವರು ಮೂಲತಃ ಬಂಟ್ಟಾಳ ತಾಲೂಕಿನ ಅಮ್ಟೂರ್‌ ಗ್ರಾಮದ ಹೊಸ ಮನೆಯ ನಿವಾಸಿ ಚಂದಪ್ಪ ಕುಲಾಲ್‌ ಮತ್ತು ದೇವಕಿ ದಂಪತಿ ಪುತ್ರಿ. ಮಗಳ ಕ್ರೀಡಾಕ್ಷೇತ್ರದ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ.

ಬೇಬಿ ಅವರು ರಾಷ್ಟ್ರಮಟ್ಟದ ಓಟಗಾರ್ತಿ. ಪ್ರಾಥಮಿಕ ಶಿಕ್ಷಣವನ್ನು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಅಮ್ಟೂರಿನಲ್ಲಿ ಪಡೆದಿದ್ದಾರೆ. ಪ್ರೌಢ, ಪದವಿ ಪೂರ್ವ, ಹಾಗೂ ಪದವಿ ಶಿಕ್ಷಣವನ್ನು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪೂರೈಸಿದ್ದಾರೆ.


ಬೇಬಿಯ ಕ್ರೀಡಾ ಸಾಧನೆಗೆ ಶ್ರೀರಾಮ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತರ್‌ ಹಾಗೂ ಕರುಣಾಕರ್‌ ಅವರ ಪ್ರೋತ್ಸಾಹ ಕ್ರೀಡೆಯಲ್ಲಿ ಮತ್ತಷ್ಟು ಬೆಳೆಯುವಂತೆ ಮಾಡಿದೆ. ಬಾಲ್ಯದಲ್ಲಿಯೇ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ತಮ್ಮ 9ನೇ ವರ್ಷದಲ್ಲಿ ಕ್ರೀಡಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

2013ರಲ್ಲಿ ರಾಮಕುಂಜದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 400 ಮೀಟರ್‌ ಓಟದಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. 4×400 ಮೀಟರ್‌ ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತಿ ಇವರದು. 4×100 ಮೀಟರ್‌ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದಿದ್ದಾರೆ. ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

Advertisement

2013ರಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಪ್ರಾಂತೀಯ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದಲ್ಲಿ ಪ್ರಥಮ ಸ್ಥಾನ. ಹಾಗೆ 4×100 ಮೀಟರ್‌ ರೀಲೆಯಲ್ಲಿ ಪ್ರಥಮ, 4×400 ರಿಲೇಯಲ್ಲಿ ದ್ವಿತೀಯ ಸ್ಥಾನ ತನ್ನದಾಗಿಸಿದ್ದಾರೆ.

2013ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದಲ್ಲಿ ದ್ವಿತೀಯ ಸ್ಥಾನ, 4×400 ರಿಲೇಯಲ್ಲಿ ದ್ವಿತೀಯ ಸ್ಥಾನ, 2014ರಲ್ಲಿ ವಿಟ್ಲದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದಲ್ಲಿ ಪ್ರಥಮ ಸ್ಥಾನ, 4×100 ರಿಲೇಯಲ್ಲಿ ಪ್ರಥಮ ಸ್ಥಾನ, ಹಾಗೂ 4×400 ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

2014ರಲ್ಲಿ ಪುತ್ತೂರಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದಲ್ಲಿ ದ್ವೀತಿಯ ಸ್ಥಾನ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, 4×100ರೀಲೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

4×400ರೀಲೆಯಲ್ಲಿ ಪ್ರಥಮ, ಗುಡ್ಡಗಾಡು ಓಟದಲ್ಲಿ ನಾಲ್ಕನೇ ಸ್ಥಾನ ತನ್ನದಾಗಿಸಿದ್ದಾರೆ. 2014ರಲ್ಲಿ ಕಲಬುರಗಿಯಲ್ಲಿ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ಕ್ರೀಡಾಕೂಟದ 400 ಮೀಟರ್‌ ಓಟದಲ್ಲಿ ಪ್ರಥಮ ಸ್ಥಾನ, 4×400 ರಿಲೇಯಲ್ಲಿ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ.

2014 ತಮಿಳುನಾಡಿನಲ್ಲಿ ನಡೆದ ವಿದ್ಯಾಭಾರತಿ ಅಖೀಲ ಭಾರತೀಯ ಶಿಕ್ಷಾ ಸಂಸ್ಥಾನ್‌ ಪ್ರಾದೇಶಿಕ ಅಥ್ಲೆಟಿಕ್ಸ್‌ನಲ್ಲಿ 4ಷ400 ರೀಲೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿದ್ದಾರೆ. 3 ಕಿಲೋ ಮೀಟರ್‌ ಗುಡ್ಡಗಾಡು ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

2014ರಲ್ಲಿ ತಲಪಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 4ಷ100 ರೀಲೆಯಲ್ಲಿ ತೃತೀಯ ಸ್ಥಾನ, 4ಷ400 ರಿಲೇಯಲ್ಲಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಿ ಇನ್ನಷ್ಟು ಪ್ರೋತ್ಸಾಹದಿಂದ ಕ್ರೀಡೆಯಲ್ಲಿ ಹೀಗೆ ಮುಂದುವರಿಯಬೇಕು ಎಂಬ ಮನಸ್ಸು ಇವರದು.

ಜೀವನದಲ್ಲಿ ಸಾಧಿಸುವ ಕನಸು ಇರಬೇಕು ಮತ್ತು ಅವುಗಳನ್ನು ಈಡೇರಿಸಿಕೊಳ್ಳವ ಹಾದಿಯಲ್ಲಿ ಸಾಗಿದಾಗ ಮಾತ್ರ ನಮ್ಮ ಕನಸು ಸಫ‌ಲಗೊಳ್ಳುವುದು. ನಾನು ಕ್ರೀಡಾಕ್ಷೇತ್ರದಲ್ಲಿ ಸತತವಾದ ಶ್ರಮದಿಂದ ಮತ್ತು ಅಭಾಸ್ಯದಿಂದ ಇವತ್ತು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ಇಷ್ಟಕ್ಕೆ ನನ್ನ ಸಾಧನೆ ಮುಗಿದಿಲ್ಲ, ಇನ್ನೂ ಉನ್ನತ ಎತ್ತರಕ್ಕೆ ಸಾಗುವುದು ನನ್ನಗುರಿ.


— ಬೇಬಿ, ಕ್ರೀಡಾಪಟು


— ಚೈತ್ರಾ ಕುಲಾಲ್‌, ಪಾಣೆಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next