Advertisement

ವಿವಿಧ ಕ್ಷೇತ್ರದ ಸಾಧಕಿ ದಾನಿಯಾ ಹಸನ್‌

07:40 PM Mar 09, 2021 | Team Udayavani |

ಶಿಕ್ಷಣ ಕ್ಷೇತ್ರದಲ್ಲಿ  ಮಾತ್ರವಲ್ಲ ನಾಯಕತ್ವ ಕೌಶಲ,  ಸಾಮಾಜಿಕ, ಪರಿಸರ ಜಾಗೃತಿ ಮತ್ತು ಜಾಗತಿಕ  ಪೌರತ್ವಕ್ಕೆ ನೀಡಿದ ಕೊಡುಗೆಯಲ್ಲಿ ಶ್ಲಾ ಸಿ ನೀಡಲಾಗುವ ಯುಎಇಯ ಪ್ರತಿಷ್ಠಿತ ಹರ್‌ ಹೈನೆಸ್‌ ಶೇಖ್‌ ಫಾತಿಮಾ ಬಿನ್‌ ಮುಬಾರಕ್‌ ಪ್ರಶಸ್ತಿ 2020ನ್ನು ತನ್ನದಾಗಿಸಿಕೊಂಡ ಕನ್ನಡ ಮಣ್ಣಿನ ಮಗಳು ದಾನಿಯಾ ಹಸನ್‌ ದುಬೈ ಕನ್ನಡಿಗರ ಮೆಚ್ಚಿನ ಬಾಲಕಿ.

Advertisement

ಫ‌ುಜೆರಾದ ಜೆಮ್‌ ವಿಂಚೆಸ್ಟರ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ದಾನಿಯಾ ಕರಾವಳಿ  ಕರ್ನಾಟಕದ ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್‌ ವ್ಯಾಲಿ ರಾಷ್ಟ್ರೀಯ ಶಾಲೆಯ ಅಧ್ಯಕ್ಷ ಡಾ| ಸೈಯದ್‌ ಹಸನ್‌ ಅವರ ಪುತ್ರಿ. ತಂದೆತಾಯಿಯೊಂದಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಫ‌ುಜೆರಾ ರಾಜ್ಯದ ಖೋರ್ಫ್ಕಾನ ನಗರದಲ್ಲಿ  ವಾಸಿಸುತ್ತಿರುವ ಈಕೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಪೂರ್ವ ಪ್ರದೇಶದ ಗೌರವಕ್ಕೆ ಪಾತ್ರಳಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.

ಯಾವುದೇ ದೇಶದ ಪೌರತ್ವವನ್ನು ಪರಿಗಣಿಸದೆ ವಿದ್ಯಾರ್ಥಿಯ ಸಾಧನೆಯ ಆಧಾರದಲ್ಲಿ   ನೀಡಲಾಗುವ ಈ ಪ್ರಶಸ್ತಿ ವಿಜೇತ ವಿದ್ಯಾರ್ಥಿಗೆ  ಪ್ರಸಕ್ತ ಶೈಕ್ಷಣಿಕ ವರ್ಷದ ಸಂಪೂರ್ಣ ವೆಚ್ಚವನ್ನು ಭರಿಸುವುದರೊಂದಿಗೆ ಟ್ರೋಫಿ, ಪ್ರಮಾಣ ಪತ್ರವನ್ನೂ ನೀಡಿ ಗೌರವಿಸಲಾಗುತ್ತದೆ.  ಇವರ ಸಾಧನೆಯನ್ನು ಗುರುತಿಸಿರುವ  ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕನ್ನಡ ಸಂಘವು 2020ರ ದಸರಾ  ಕ್ರೀಡಾಕೂಟದಲ್ಲಿ ಪಾರಿತೋಷಕ, ಪ್ರಶಸ್ತಿ ಪತ್ರ  ನೀಡಿ ಗೌರವಿಸಿದೆ.

 

ಮಮತಾ ಮೈಸೂರು,   ದುಬೈ

Advertisement
Advertisement

Udayavani is now on Telegram. Click here to join our channel and stay updated with the latest news.

Next