ಕೆ.ಆರ್.ನಗರ: ಮಕ್ಕಳಲ್ಲಿರುವ ಸಾಂಸ್ಕೃತಿಕ ಚಟುವಟಿಕೆ ಹೊರಹಾಕಲು ಶಿಕ್ಷಣ ಇಲಾಖೆಯು ರಾಜ್ಯ ವ್ಯಾಪ್ತಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು , ಇದನ್ನು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಆನಾವರಣ ಮಾಡುವ ವೇದಿಕೆಯಾಗಿ ಬಳಸಿಕೊಳ್ಳಿ ಎಂದು ಹೊಸೂರು ಕ್ಲಸ್ಟರ್ ಸಿಆರ್‌ಪಿ ಟಿ.ಜೆ.ಸತೀಶ್ ಹೇಳಿದರು
ಕೆ.ಆರ್.ನಗರ ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹೊಸೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತಗೆ ಅವರಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಪೋ›ತ್ಸಾಹ ನೀಡುವ ಕೆಲಸವನ್ನು ಮಾಡಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ಅವಕಾಶ ಕಲ್ಪಿಸಿ: ಮುಖ್ಯ ಅಥಿತಿಯಾಗಿದ್ದ ಹನಸೋಗೆ ಕ್ಲಸ್ಟರ್‌ನ ಸಿಆರ್‌ಪಿ ದಿನೇಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಅವರ ಅಂಕ ಗಳಿಕೆಗೆ ಸೀಮಿತ ಮಾಡದೆ ಅವರಲ್ಲಿರುವ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹೆಚ್ಚೆಚ್ಚು ಅವಕಾಶವನ್ನು ಕಲ್ಪಿಸಿಕೊಡಬೇಕು ಇದರಿಂದ ಕಲಿಕೆಯ ಜೊತೆಗೂ ಬುದ್ಧಿ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ದಿಡ್ಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಹೊಸೂರು ಕ್ಲಸ್ಟರ್‌ನ 14 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಳಿಯೂರು ಗ್ರಾಪಂ ಸದಸ್ಯರಾದ ಬಿ.ಎಸ್.ಮಂಜುನಾಥ, ರಾಜಣ್ಣ, ಸಿಇಒ ಜಾnನಶಂಕರ್, ಬಿಆರ್‌ಪಿ ರಾಜಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಮಹದೇವ್, ದಿಡ್ಡಹಳ್ಳಿ ಶಾಲೆಯ ಮುಖ್ಯಶಿಕ್ಷಕ ಚಿಕ್ಕಪ್ಪಾಜಿ, ಶಿಕ್ಷಕರಾದ ವೀಣಾ, ಮಂಜುಳಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ದೇವೇಂದ್ರ, ಮುಖ್ಯಶಿಕ್ಷಕರಾದ ರೇಣುಕಾಸ್ವಾಮಿ, ವೆಂಕಟೇಶ್, ಶಿಕ್ಷಕಿ ವಿದ್ಯಾ, ದೈಹಿಕಶಿಕ್ಷಕರಾದ ಪವಿತ್ರ, ಕರಿಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.